ವಿತ್ತೀಯ ಕೊರತೆ ಹೆಚ್ಚಬಾರದು, ಬಂಡವಾಳ ವೆಚ್ಚ ಕಡಿಮೆ ಆಗಬಾರದು: ಬಜೆಟ್​ನಲ್ಲಿ ಬ್ಯಾಲನ್ಸ್ ಮಾಡೋದೇ ಸವಾಲು

Budget 2024: ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ಈ ಬಾರಿ ವಿತ್ತೀಯ ಕೊರತೆ ನೀಗಿಸಲು ಏನು ಉಪಾಯ ಮಾಡಲಾಗುತ್ತದೆ? ಬಂಡವಾಳ ವೆಚ್ಚ ಕಡಿಮೆ ಆದರೆ ಆರ್ಥಿಕ ಚಟುವಟಿಕೆ ಮಂದಗೊಳ್ಳಬಹುದು. ಕಳೆದ ಮೂರು ವರ್ಷಗಳಿಂದ ಉತ್ತಮ ಆರ್ಥಿಕ ಪ್ರಗತಿ ಕಾಣುತ್ತಿರುವ ಭಾರತ ಇದೇ ವೇಗ ಕಾಯ್ದುಕೊಳ್ಳಬೇಕೆಂದರೆ ಬಂಡವಾಳ ವೆಚ್ಚ ಹೆಚ್ಚಬೇಕು.

ವಿತ್ತೀಯ ಕೊರತೆ ಹೆಚ್ಚಬಾರದು, ಬಂಡವಾಳ ವೆಚ್ಚ ಕಡಿಮೆ ಆಗಬಾರದು: ಬಜೆಟ್​ನಲ್ಲಿ ಬ್ಯಾಲನ್ಸ್ ಮಾಡೋದೇ ಸವಾಲು
ಬಂಡವಾಳ ವೆಚ್ಚ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 22, 2024 | 4:06 PM

ನವದೆಹಲಿ, ಜನವರಿ 22: ಬಜೆಟ್ ಮಂಡನೆಗೆ (Interim budget 2024) ಕೆಲವೇ ದಿನಗಳು ಬಾಕಿ ಇವೆ. ಹಣದುಬ್ಬರ ಮೇಲ್ಮಟ್ಟದಲ್ಲಿರುವುದು ಮತ್ತು ವಿತ್ತೀಯ ಕೊರತೆ (fiscal deficit) ಕಡಿಮೆ ಮಾಡಲು ಕಷ್ಟವಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿದೆ. ಬಜೆಟ್​ನಲ್ಲಿ ಈ ಪರಿಸ್ಥಿತಿ ಸಂಭಾಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಂಡ ಸಾಕಷ್ಟು ಕಸರತ್ತು ನಡೆಸಬೇಕಾಗಿದೆ. ಸರ್ಕಾರದಿಂದ ಕಳೆದ ಕೆಲ ವರ್ಷಗಳಿಂದ ಹೆಚ್ಚಿರುವ ಬಂಡವಾಳ ವೆಚ್ಚ ಕಡಿಮೆ ಮಾಡಿದರೆ ವಿತ್ತೀಯ ಕೊರತೆ ಕಡಿಮೆ ಮಾಡಲು ಸಾಧ್ಯ. ಆದರೆ, ಆರ್ಥಿಕ ವೇಗ ಕಾಪಾಡಲು ಬಂಡವಾಳ ವೆಚ್ಚ ಬಹಳ ಮುಖ್ಯ. ಅದರಲ್ಲೂ ಇನ್​ಫ್ರಾಸ್ಟ್ರಕ್ಚರ್ ಸೆಕ್ಟರ್​ಗೆ ಮಾಡಲಾಗುವ ವೆಚ್ಚ ಕಡಿಮೆ ಆದರೆ ಆರ್ಥಿಕ ಗಾಲಿಗಳು ಸಲೀಸಾಗಿ ಓಡುವುದು ಕಷ್ಟ. ಬಜೆಟ್​ನಲ್ಲಿ ಯಾವ ರೀತಿ ಬ್ಯಾಲನ್ಸ್ ಮಾಡಲಾಗುತ್ತದೆ ಎಂಬುದು ಕುತೂಹಲ ಮೂಡಿಸುತ್ತದೆ. ವರದಿ ಪ್ರಕಾರ ಬಂಡವಾಳ ವೆಚ್ಚ ಈ ಬಾರಿ ಕಡಿಮೆ ಆಗುವುದಿಲ್ಲವಾದರೂ ವೆಚ್ಚ ಹೆಚ್ಚಳದ ಪ್ರಮಾಣ ಕಡಿಮೆ ಅಗಬಹುದು ಎನ್ನಲಾಗಿದೆ.

‘2024-25ರ ಹಣಕಾಸು ವರ್ಷದಲ್ಲಿ ಸರ್ಕಾರ 10.2 ಲಕ್ಷ ಕೋಟಿ ರೂ ಹಣವನ್ನು ಬಂಡವಾಳ ವೆಚ್ಚಕ್ಕೆ ತೆಗೆದಿರಿಸುವ ನಿರೀಕ್ಷೆ ಇದೆ. ಕಳೆದ ಬಜೆಟ್​ಗೆ ಹೋಲಿಸಿದರೆ ಬಂಡವಾಳ ವೆಚ್ಚ ಶೇ. 10ರಷ್ಟು ಹೆಚ್ಚಾಗುತ್ತದೆ. ಆದರೆ, ಅದಕ್ಕೂ ಹಿಂದಿನ ಕೆಲ ವರ್ಷಗಳಲ್ಲಿ ಬಂಡವಾಳ ವೆಚ್ಚ ಗಣನೀಯ ಹೆಚ್ಚಾಗುತ್ತಾ ಬರುತ್ತಿದೆ. ಈಗ ಈ ವೆಚ್ಚ ಹೆಚ್ಚಳ ಕಡಿಮೆಗೊಳಿಸಿದರೆ ಆರ್ಥಿಕ ಚಟುವಟಿಕೆ ಮಂದಗೊಳ್ಳಬಹುದು’ ಎಂದು ಐಸಿಆರ್​ಎ ಎಂಬ ಕ್ರೆಡಿಟ್ ರೇಟಿಂಗ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಟ್ಯಾಕ್ಸ್ ಸ್ಲ್ಯಾಬ್ ಬದಲಾವಣೆ ಸೇರಿದಂತೆ ಸಂಬಳದಾರರಿಗೆ ಇರುವ ಬಜೆಟ್ ನಿರೀಕ್ಷೆಗಳಿವು…

2020-21ರ ಹಣಕಾಸು ವರ್ಷದಲ್ಲಿ ಬಜೆಟ್​ನಲ್ಲಿ 4.39 ಲಕ್ಷ ಕೋಟಿ ರೂ ಹಣವನ್ನು ಬಂಡವಾಳ ವೆಚ್ಚಕ್ಕೆಂದು ತೆಗೆದಿರಿಸಲಾಗಿತ್ತು. 2021-22ರ ವರ್ಷಕ್ಕೆ ಇದು ಶೇ. 35ರಷ್ಟು ಹೆಚ್ಚಾಗಿ 5.54 ಲಕ್ಷ ಕೋಟಿ ರೂ ಆಯಿತು. ಮರು ವರ್ಷ, ಅಂದರೆ 2022-23ರಲ್ಲಿ ಈ ಬಂಡವಾಳ ವೆಚ್ಚ ಮತ್ತೆ ಶೇ. 35ರಷ್ಟು ಹೆಚ್ಚಾಗಿ 7.5 ಲಕ್ಷ ಕೋಟಿ ರೂ ಆಯಿತು. 2023-24ರ ಹಣಕಾಸು ವರ್ಷಕ್ಕೆ ಬಂಡವಾಳ ವೆಚ್ಚ ಶೇ. 37.4ರಷ್ಟು ಹೆಚ್ಚಾಗಿ 10 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿತು.

ಪ್ರಸಕ್ತ ಹಣಕಾಸು ವರ್ಷದ (2023-24) ಏಪ್ರಿಲ್-ನವೆಂಬರ್ ಅವಧಿಯಲ್ಲಿ ಬಂಡವಾಳ ವೆಚ್ಚ 5.9 ಲಕ್ಷ ಕೋಟಿ ರೂ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಗಿದ್ದಕ್ಕಿಂತಲೂ ಶೇ. 31ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Budget 2024: ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಬಜೆಟ್​ನಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು?

ಕೋವಿಡ್ ಬಳಿಕ ಪುಟಿದೆದ್ದಿರುವ ಭಾರತದ ಆರ್ಥಿಕತೆ ಕಳೆದ ಮೂರು ವರ್ಷಗಳಿಂದ ಶೇ. 7ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳೆಯುತ್ತಿದೆ. ಸರ್ಕಾರ ಕೈಗೊಂಡ ಹಲವು ಕ್ರಮಗಳು ಇದಕ್ಕೆ ಕಾರಣ. ಈ ಕಾರಣಗಳಲ್ಲಿ ಬಂಡವಾಳ ವೆಚ್ಚವೂ ಒಂದು. ಅದರಲ್ಲೂ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಹಾಕಲಾಗುತ್ತಿರುವ ಬಂಡವಾಳವು ಆರ್ಥಿಕತೆಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ. ಹೀಗಾಗಿ, ಬಂಡವಾಳ ವೆಚ್ಚ ಕಡಿಮೆ ಮಾಡದೆಯೇ ಚೌಕಟ್ಟಿನೊಳಗೆ ಬಜೆಟ್ ಪ್ರಸ್ತುತಪಡಿಸುವ ಸವಾಲು ಸರ್ಕಾರದ ಮುಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Mon, 22 January 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್