AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax: ನೇರ ತೆರಿಗೆ, ಐಟಿಆರ್ ಸಲ್ಲಿಕೆಯಲ್ಲಿ 10 ವರ್ಷದಲ್ಲಿ ಭರ್ಜರಿ ಹೆಚ್ಚಳ: ಸಿಬಿಡಿಟಿ ಅಂಕಿ ಅಂಶ ಬಿಡುಗಡೆ

CBDT statistics comparing data Since 2014: 2013-14ಕ್ಕೆ ಹೋಲಿಸಿದರೆ ನಿವ್ವಳ ನೇರ ತೆರಿಗೆ ಸಂಗ್ರಹ 2022-23ರಲ್ಲಿ ಶೇ 160.52ರಷ್ಟು ಹೆಚ್ಚಾಗಿದೆ. ಸಮಗ್ರ ನೇರ ತೆರಿಗೆ ಶೇ. 173ರಷ್ಟು ಹೆಚ್ಚಾಗಿದೆ. ಜಿಡಿಪಿ ಮತ್ತು ನೇರ ತೆರಿಗೆ ನಡುವಿನ ಅನುಪಾತದಲ್ಲೂ 10 ವರ್ಷದಲ್ಲಿ ಹೆಚ್ಚಳವಾಗಿದೆ. ಐಟಿಆರ್ ಸಲ್ಲಿಕೆ 2013-14ರಲ್ಲಿ 3.80 ಕೋಟಿ ಇದ್ದದ್ದು 2022-23ರಲ್ಲಿ 7.78 ಕೋಟಿಗೆ ಏರಿದೆ.

Tax: ನೇರ ತೆರಿಗೆ, ಐಟಿಆರ್ ಸಲ್ಲಿಕೆಯಲ್ಲಿ 10 ವರ್ಷದಲ್ಲಿ ಭರ್ಜರಿ ಹೆಚ್ಚಳ: ಸಿಬಿಡಿಟಿ ಅಂಕಿ ಅಂಶ ಬಿಡುಗಡೆ
ನೇರ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 24, 2024 | 11:49 AM

ನವದೆಹಲಿ, ಜನವರಿ 24: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹ ಕಳೆದ 10 ವರ್ಷದಲ್ಲಿ ಶೇ. 160.52ರಷ್ಟು ಹೆಚ್ಚಾಗಿದೆ. 2013-14ರ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ 6,38,596 ಕೋಟಿ ರೂ ಇತ್ತು. ಈಗ 2022-23ರಲ್ಲಿ 16,63,686 ಕೋಟಿ ರೂ ನಿವ್ವಳ ನೇರ ತೆರಿಗೆ (Net Direct Tax collections) ಸಂಗ್ರಹವಾಗಿದೆ. ಹಣಕಾಸು ಸಚಿವಾಲಯಕ್ಕೆ ಸೇರಿದ ಸಿಬಿಡಿಟಿ (CBDT- Central Board of Direct Taxes) ಈ ದತ್ತಾಂಶವನ್ನು ಬಿಡುಗಡೆ ಮಾಡಿದೆ.

ಸಿಬಿಡಿಟಿ ಬಿಡುಗಡೆ ಮಾಡಿದ ಕೆಲ ಅಂಕಿ ಅಂಶಗಳ ವಿವರ

ನಿವ್ವಳ ನೇರ ತೆರಿಗೆ ಸಂಗ್ರಹ 2013-14ರ ಹಣಕಾಸು ವರ್ಷದಲ್ಲಿ 6,38,596 ಕೋಟಿ ರೂ ಇದ್ದದ್ದು 2022-23ರಲ್ಲಿ 16,63,686 ಕೋಟಿ ರೂ ಆಗಿದೆ. ಸಂಗ್ರಹದಲ್ಲಿ ಶೇ. 160.52ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: Interesting Case: ಬ್ಯಾಂಕುಗಳು ಮನಬಂದಂತೆ ಬಡ್ಡಿ ಹಾಕಿದ್ರೆ ನೀವೇನ್ ಮಾಡುತ್ತಿರುತ್ತೀರಿ? ಆರ್​ಬಿಐಗೆ ಛೇಮಾರಿ ಹಾಕಿದ ಕೋರ್ಟ್

ಸಮಗ್ರ ನೇರ ತೆರಿಗೆ (Gross Direct Tax Collections) 2013-14ರಲ್ಲಿ 7,21,604 ಕೋಟಿ ರೂ ಇತ್ತು. 2022-23ರಲ್ಲಿ 19,72,248 ಕೋಟಿ ರೂ ಆಗಿದೆ. ಹತ್ತು ವರ್ಷದಲ್ಲಿ ಶೇ. 173.31ರಷ್ಟು ಹೆಚ್ಚಾಗಿದೆ.

ಜಿಡಿಪಿ ಮತ್ತು ನೇರ ತೆರಿಗೆ ನಡುವಿನ ಅನುಪಾತದಲ್ಲೂ (direct tax to GDP Ratio) ಹೆಚ್ಚಾಗಿದೆ. 2013-14ರಲ್ಲಿ 5.62ರಷ್ಟು ಇದ್ದ ಆ ಅನುಪಾತ 2022-23ರಲ್ಲಿ ಶೇ. 6.11ಕ್ಕೆ ಹೆಚ್ಚಾಗಿದೆ.

ತೆರಿಗೆ ಸಂಗ್ರಹಕ್ಕೆ ಆಗುವ ವೆಚ್ಚದಲ್ಲೂ ಇಳಿಕೆ ಆಗಿದೆ. 2013-14ರಲ್ಲಿ ತೆರಿಗೆ ಸಂಗ್ರಹ್ಕೆ ಶೇ. 0.57ರಷ್ಟು ವೆಚ್ಚ ಮಾಡಲಾಗಿತ್ತು. 2022-23ರಲ್ಲಿ ಆ ವೆಚ್ಚ ಶೇ. 0.51ಕ್ಕೆ ಕಡಿಮೆ ಆಗಿದೆ.

ಇದನ್ನೂ ಓದಿ: Agricultural Credit: ಕೃಷಿ ಸಾಲದ ಗುರಿಯನ್ನು 22ರಿಂದ 25 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ

ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ (Income tax return filing) ಮಾಡುವ ಸಂಖ್ಯೆಯಲ್ಲೂ 10 ವರ್ಷದಲ್ಲಿ ಬಹಳಷ್ಟು ಹೆಚ್ಚಾಗಿದೆ. 2013-14ರಲ್ಲಿ 3.80 ಕೋಟಿ ಐಟಿಆರ್​​ಗಳು ಸಲ್ಲಿಕೆ ಆಗಿದ್ದವು. 2022-23ರಲ್ಲಿ 7.78 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದಾರೆ. ಐಟಿಆರ್ ಸಲ್ಲಿಸುವವ ಸಂಖ್ಯೆ 10 ವರ್ಷದಲ್ಲಿ ಶೇ. 105.91ರಷ್ಟು ಹೆಚ್ಚಾಗಿದೆ.

ನೇರ ತೆರಿಗೆ ಯಾವುದು?

ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಆದಾಯಕ್ಕೆ ನೇರವಾಗಿ ವಿಧಿಸುವ ತೆರಿಗೆ ಡೈರೆಕ್ಟ್ ಟ್ಯಾಕ್ಸ್ ಎನಿಸುತ್ತದೆ. ಆದಾಯ ತೆರಿಗೆ (ಇನ್ಕಮ್ ಟ್ಯಾಕ್ಸ್), ಕಾರ್ಪೊರೇಟ್ ತೆರಿಗೆ, ಧನ ಲಾಭ ತೆರಿಗೆ, ಷೇರು ವಹಿವಾಟು ತೆರಿಗೆ (ಎಸ್​ಟಿಟಿ), ಲಾಭಾಂಶ ವಿತರಣೆ ತೆರಿಗೆ (ಡಿಡಿಟಿ), ಗಿಫ್ಟ್ ತೆರಿಗೆ, ಎಸ್ಟೇಟ್ ಟ್ಯಾಕ್ಸ್ ಇತ್ಯಾದಿಯವು ಸೇರುತ್ತವೆ. ಜಿಎಸ್​ಟಿ ಎಂಬುದು ನೇರ ತೆರಿಗೆ ಆಗಿರುವುದಿಲ್ಲ. ಅದು ಇನ್​ಡೈರೆಕ್ಟ್ ಟ್ಯಾಕ್ಸ್ ಎಂದು ಪರಿಗಣಿತವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 24 January 24

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್