ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ನೇರ ತೆರಿಗೆ ಸಂಗ್ರಹ ಗಮನಾರ್ಹವಾಗಿ ಏರುತ್ತಿರುವುದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. 2023 ಏಪ್ರಿಲ್ 1ರಿಂದ ಜೂನ್ 17ರವರೆಗೆ ಸಂಗ್ರಹವಾದ ಒಟ್ಟು ನೇರ ತೆರಿಗೆಯಲ್ಲಿ (Gross Direct Taxes) ಹಿಂದಿನ ವರ್ಷದ ಇದೇ ಅವಧಿಗಿಂತ ಶೇ. 12.73ರಷ್ಟು ಹೆಚ್ಚಾಗಿದೆ. ಇನ್ನು, ನಿವ್ವಳ ನೇರ ತೆರಿಗೆಯು (Net Direct Taxes) ಈ ಅವಧಿಯಲ್ಲಿ ಶೇ. 11.18ರಷ್ಟು ಹೆಚ್ಚಾಗಿದೆ.
ಹಣಕಾಸು ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2023ರ ಏಪ್ರಿಲ್ 1ರಿಂದ ಜೂನ್ 17ರವರೆಗೆ ಸಂಗ್ರಹವಾದ ಒಟ್ಟು ಡೈರೆಕ್ಟ್ ಡ್ಯಾಕ್ಸ್ ಮೊತ್ತ 4,19,338 ಕೋಟಿ ರೂ ಇದೆ. ಹಿಂದಿನ ವರ್ಷದಲ್ಲಿ ಇದು 3,71,982 ಕೋಟಿ ರೂ ಇತ್ತು. ಇನ್ನು, ನಿವ್ವಳ ತೆರಿಗೆ ಮೊತ್ತ ಈ ವರ್ಷ 3,79,760 ಕೋಟಿ ರೂ ಇದೆ. ಇಲ್ಲಿ ರೀಫಂಡ್ ಮಾಡಿದ ಹಣ ಕಳೆದು ಉಳಿದ ಮೊತ್ತವು ನಿವ್ವಳ ತೆರಿಗೆ ಸಂಗ್ರಹವಾಗುತ್ತದೆ.
ಇದನ್ನೂ ಓದಿ: Direct Tax: 2022-23 ರಲ್ಲಿ ನೇರ ತೆರಿಗೆ ಸಂಗ್ರಹ 19.68 ಲಕ್ಷ ಕೋಟಿ ರೂ; ಹೊಸ ದಾಖಲೆ
ಭಾರತದಲ್ಲಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಜಿಎಸ್ಟಿ ತೆರಿಗೆ ಕೂಡ ಒಳ್ಳೆಯ ಮೊತ್ತದಷ್ಟು ಸಂಗ್ರಹವಾಗುತ್ತಿದೆ. ತೆರಿಗೆಯಲ್ಲಿ ಪರೋಕ್ಷ ತೆರಿಗೆ ಮತ್ತು ನೇರ ತೆರಿಗೆ ಸೇರಿರುತ್ತದೆ. ನೇರ ತೆರಿಗೆಯು ವಹಿವಾಟಿನ ವೇಳೆಯೇ ಕಡಿತಗೊಳ್ಳುತ್ತದೆ. ಟಿಡಿಎಸ್ ಇತ್ಯಾದಿಯು ಇದಕ್ಕೆ ಉದಾಹರಣೆ. ಜಿಎಸ್ಟಿ ಪರೋಕ್ಷ ತೆರಿಗೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ