AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Direct Tax: 2022-23 ರಲ್ಲಿ ನೇರ ತೆರಿಗೆ ಸಂಗ್ರಹ 19.68 ಲಕ್ಷ ಕೋಟಿ ರೂ; ಹೊಸ ದಾಖಲೆ

Union Finance Ministry Data 2022-23: ಕೇಂದ್ರ ಬಜೆಟ್​ನಲ್ಲಿ 2022-23ರ ಹಣಕಾಸು ವರ್ಷದಲ್ಲಿ 14.20 ಲಕ್ಷ ಕೋಟಿ ರೂನಷ್ಟು ನಿವ್ವಳ ನೇರ ತೆರಿಗೆ ಸಂಗ್ರಹವಾಗಬಹುದು ಎಂದು ಅಂದಾಜು ಮಾಡಲಾಗಿತ್ತು ಅಥವಾ ನಿರೀಕ್ಷೆ ಮಾಡಲಾಗಿತ್ತು. ಆದರೆ, 16.61 ಲಕ್ಷ ಕೋಟಿಯಷ್ಟು ನೇರ ತೆರಿಗೆ ಸಂಗ್ರಹವಾಗಿದೆ. ಅಂದರೆ ನಿರೀಕ್ಷಿಸಿದ್ದಕ್ಕಿಂತ 2.41 ಲಕ್ಷ ಕೋಟಿ ರೂನಷ್ಟು ಹೆಚ್ಚು ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್ ಆಗಿದೆ.

Direct Tax: 2022-23 ರಲ್ಲಿ ನೇರ ತೆರಿಗೆ ಸಂಗ್ರಹ 19.68 ಲಕ್ಷ ಕೋಟಿ ರೂ; ಹೊಸ ದಾಖಲೆ
ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 04, 2023 | 2:03 PM

Share

ನವದೆಹಲಿ: ಮಾರ್ಚ್ 31ಕ್ಕೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಭರ್ಜರಿ ಪ್ರಮಾಣದಲ್ಲಿ ನೇರ ತೆರಿಗೆ ಸಂಗ್ರಹವಾಗಿರುವುದು (Direct Tax Collections) ವರದಿಯಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಡೈರೆಕ್ಟ್ ಟ್ಯಾಕ್ಸ್ (Gross Direct Tax) 19.68 ಲಕ್ಷ ಕೋಟಿ ರೂನಷ್ಟು ಸಂಗ್ರಹವಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ನೇರ ತೆರಿಗೆ ಸಂಗ್ರಹದಲ್ಲಿ ಶೇ. 20ರಷ್ಟು ಹೆಚ್ಚಳವಾಗಿದೆ. ಸರ್ಕಾರದ ಮಾಹಿತಿ ಪ್ರಕಾರ, ನೇರ ತೆರಿಗೆ ಸಂಗ್ರಹದ ನಿವ್ವಳ ಮೊತ್ತ (Net Direct Tax) ಈ ಹಣಕಾಸು ವರ್ಷದಲ್ಲಿ 16.61 ಲಕ್ಷ ಕೋಟಿ ರೂ ಇದೆ. 2021-22ರ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹ 14.12 ಲಕ್ಷ ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ 2022-23ರ ವರ್ಷದಲ್ಲಿ ನೆಟ್ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್​ನಲ್ಲಿ ಶೇ. 17.63ರಷ್ಟು ಹೆಚ್ಚಾಗಿದೆ.

ಸರ್ಕಾರದ ನಿರೀಕ್ಷೆಮೀರಿಸಿದ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್

ಕಳೆದ ಬಾರಿಯ ಕೇಂದ್ರ ಬಜೆಟ್​ನಲ್ಲಿ 2022-23ರ ಹಣಕಾಸು ವರ್ಷದಲ್ಲಿ 14.20 ಲಕ್ಷ ಕೋಟಿ ರೂನಷ್ಟು ನಿವ್ವಳ ನೇರ ತೆರಿಗೆ ಸಂಗ್ರಹವಾಗಬಹುದು ಎಂದು ಅಂದಾಜು ಮಾಡಲಾಗಿತ್ತು ಅಥವಾ ನಿರೀಕ್ಷೆ ಮಾಡಲಾಗಿತ್ತು. ಆದರೆ, 16.61 ಲಕ್ಷ ಕೋಟಿಯಷ್ಟು ನೇರ ತೆರಿಗೆ ಸಂಗ್ರಹವಾಗಿದೆ. ಅಂದರೆ ನಿರೀಕ್ಷಿಸಿದ್ದಕ್ಕಿಂತ 2.41 ಲಕ್ಷ ಕೋಟಿ ರೂನಷ್ಟು ಹೆಚ್ಚು ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಶೇಕಡವಾರು ಲೆಕ್ಕದಲ್ಲಿ, ಬಜೆಟ್ ಎಸ್ಟಿಮೇಟ್​ಗಿಂತ ಶೇ. 16.97ರಷ್ಟು ಹೆಚ್ಚು ನೇರ ತೆರಿಗೆ ಸಂಗ್ರಹವಾಗಿರುವುದು ಗಮನಾರ್ಹ.

ನೇರ ತೆರಿಗೆ ಅಂದರೇನು? ಜಿಎಸ್​ಟಿಗೂ ಡೈರೆಕ್ಟ್ ಟ್ಯಾಕ್ಸ್​ಗೂ ಏನು ವ್ಯತ್ಯಾಸ?

ಸರ್ಕಾರ ಎರಡು ರೀತಿಯ ತೆರಿಗೆ ವ್ಯವಸ್ಥೆ ಹೊಂದಿದೆ. ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ. ನೇರ ತೆರಿಗೆ ಎಂದರೆ ಒಬ್ಬ ವ್ಯಕ್ತಿ ತಾನು ಮಾಡಿದ ಖರೀದಿ ಅಥವಾ ಗಳಿಸಿದ ಆದಾಯಕ್ಕೆ ಸರ್ಕಾರಕ್ಕೆ ನೇರವಾಗಿ ಕಟ್ಟುವ ತೆರಿಗೆಯಾಗಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಆಸ್ತಿ ತೆರಿಗೆ, ಭೂ ಕಂದಾಯ, ಲಾಭ ತೆರಿಗೆ ಇತ್ಯಾದಿ ಇವೆಲ್ಲವೂ ನೇರ ತೆರಿಗೆ ಆಗಿದೆ.

ಇದನ್ನೂ ಓದಿMSSC 2023: ಮಹಿಳೆಯರು, ಹುಡುಗಿಯರಿಗಾಗಿ ಕೇಂದ್ರದಿಂದ ಹೊಸ ಉಳಿತಾಯ ಖಾತೆ: ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಷ್ಟೂ ಮಾಹಿತಿ ಇಲ್ಲಿದೆ

ಇನ್ನು ಪರೋಕ್ಷ ತೆರಿಗೆ ಅಥವಾ ಇನ್​ಡೈರೆಕ್ಟ್ ಟ್ಯಾಕ್ಸ್ ಎಂದರೆ ಸರಕು ಮತ್ತು ಸೇವೆಗೆ ವಿಧಿಸುವ ತೆರಿಗೆಯಾಗಿರುತ್ತದೆ. ಸರ್ವಿಸ್ ಟ್ಯಾಕ್ಸ್, ಎಕ್ಸೈಸ್ ಡ್ಯೂಟಿ, ವಿಎಟಿ (ಮೌಲ್ಯವರ್ಧಿತ ತೆರಿಗೆ), ಕಸ್ಟಮ್ಸ್ ಡ್ಯೂಟಿ, ಲಕ್ಷುರಿ ಟ್ಯಾಕ್ಸ್, ಎಂಟರ್ಟೈನ್ಮೆಂಟ್ ಟ್ಯಾಕ್ಸ್ ಇತ್ಯಾದಿ ವಿವಿಧ ರೀತಿಯ ಇನ್​ಡೈರೆಕ್ಟ್ ಟ್ಯಾಕ್ಸ್​ಗಳಿವೆ. ಇವುಗಳನ್ನು ಸರಳೀಕೃತಗೊಳಿಸಿ ಜಿಎಸ್​ಟಿ ವ್ಯವಸ್ಥೆ ತರಲಾಗಿದೆ. ಜಿಎಸ್​ಟಿ ಎನ್ನುವುದು ಪರೋಕ್ಷ ತೆರಿಗೆಗೆ ಉದಾಹರಣೆ.

ನೇರ ತೆರಿಗೆಯಲ್ಲಿ ಇನ್ಕಮ್ ಟ್ಯಾಕ್ಸ್, ಕಾರ್ಪೊರೇಟ್ ಟ್ಯಾಕ್ಸ್ ಸಿಂಹಪಾಲು

2022-23ರ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ದತ್ತಾಂಶದ ಪ್ರಕಾರ ಕಾರ್ಪೊರೇಟ್ ಟ್ಯಾಕ್ಸ್ ಮತ್ತು ಇನ್ಕಂ ಟ್ಯಾಕ್ಸ್ ಅತಿ ಹೆಚ್ಚು ಸಂಗ್ರಹವಾಗಿದೆ. ಒಟ್ಟಾರೆ ಕಾರ್ಪೊರೇಟ್ ತೆರಿಗೆ ಸಂಗ್ರಹ 10 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ಇನ್ನು, ಒಟ್ಟಾರೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ 9.60 ಲಕ್ಷ ಕೋಟಿ ರೂ ನಷ್ಟಿದೆ.

ಇದನ್ನೂ ಓದಿPPF Investment Plan: ಪಿಪಿಎಫ್​ನಲ್ಲಿ ವಾರ್ಷಿಕ 1.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹೂಡಿಕೆಗೆ ಅವಕಾಶ ಇದೆಯೇ?

ಜಿಎಸ್​ಟಿ ಸಂಗ್ರಹವೂ ದಾಖಲೆ ಏರಿಕೆ

ಪರೋಕ್ಷ ತೆರಿಗೆ ಎನಿಸಿದ ಜಿಎಸ್​ಟಿಯ ಸಂಗ್ರಹದಲ್ಲೂ ಭಾರೀ ಏರಿಕೆ ಆಗುತ್ತಿದೆ. ಮಾರ್ಚ್ ತಿಂಗಳಲ್ಲಿ 1.60 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಕಲೆಕ್ಷನ್ ಆಗಿರುವುದು ತಿಳಿದುಬಂದಿದೆ. ಫೆಬ್ರುವರಿ ತಿಂಗಳಿಗಿಂತ ಶೇ. 7ರಷ್ಟು ಹೆಚ್ಚು ಜಿಎಸ್​ಟಿ ಸಂಗ್ರಹವಾಗಿದೆ. ಇನ್ನು, 2021ರ ಮಾರ್ಚ್ ತಿಂಗಳಲ್ಲಿ ಆಗಿದ್ದಕ್ಕಿಂತ ಶೇ. 12.7ರಷ್ಟು ಜಿಎಸ್​ಟಿ ಹೆಚ್ಚು ಸಂಗ್ರಹವಾಗಿದೆ. ಯಾವುದೇ ತಿಂಗಳಲ್ಲಿ ಎರಡನೇ ಅತಿ ಹೆಚ್ಚು ಜಿಎಸ್​ಟಿ ಸಂಗ್ರಹ ಇದಾಗಿದೆ.

ತಜ್ಞರ ವಿಶ್ಲೇಷಣೆ ಪ್ರಕಾರ, ಮಾರ್ಚ್ ತಿಂಗಳಲ್ಲಿ ಹೆಚ್ಚು ಜಿಎಸ್​ಟಿ ಸಂಗ್ರಹವಾಗಲು ಪ್ರಮುಖ ಕಾರಣ ಹಣದುಬ್ಬರ ಎನ್ನಲಾಗಿದೆ. ಹಾಗೆಯೇ, ತೆರಿಗೆ ವ್ಯವಸ್ಥೆಯಲ್ಲಿ ತಾಂತ್ರಿಕವಾಗಿ ಸರ್ಕಾರ ಮಾಡಿದ ಕೆಲ ಸುಧಾರಣೆಗಳೂ ಜಿಎಸ್​ಟಿ ಸಂಗ್ರಹ ಹೆಚ್ಚಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಇನ್ನು, ಆರ್ಥಿಕ ಚಟುವಟಿಕೆ ಹೆಚ್ಚು ಆಗಿರುವ ಅಂಶವೂ ಇದಕ್ಕೆ ಪುಷ್ಟಿ ಕೊಟ್ಟಿದೆ ಎಂಬ ಅಭಿಪ್ರಾಯ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ