INR USD Exchange Rate Today: ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 77.72ಕ್ಕೆ

Dollar to Rupee Exchange Rate (USD/INR): ಮೇ 19ನೇ ತಾರೀಕಿನ ಗುರುವಾರದಂದು ಅಮೆರಿಕ ಡಾಲರ್ ಸೇರಿದಂತೆ ಇತರ ಪ್ರಮುಖ ದೇಶಗಳ ಕರೆನ್ಸಿ ವಿರುದ್ಧ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

INR USD Exchange Rate Today: ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 77.72ಕ್ಕೆ
ಸಾಂದರ್ಭಿಕ ಚಿತ್ರ
Edited By:

Updated on: May 19, 2022 | 7:33 PM

ಭಾರತದ ರೂಪಾಯಿಯು ತನ್ನ ನಷ್ಟವನ್ನು ವಿಸ್ತರಿಸಿದ್ದು, ಗುರುವಾರ ಅಮೆರಿಕ ಡಾಲರ್‌ಗೆ (America Dollar) ವಿರುದ್ಧವಾಗಿ 77.72 (ತಾತ್ಕಾಲಿಕ) ದಾಖಲೆಯ ಕನಿಷ್ಠ ಮಟ್ಟಕ್ಕೆ 10 ಪೈಸೆ ಕುಸಿದಿದೆ. ದೇಶೀಯ ಷೇರುಗಳಲ್ಲಿನ ನೆಗೆಟಿವ್ ಟ್ರೆಂಡ್ ಮತ್ತು ಅನಿಯಮಿತ ವಿದೇಶೀ ಫಂಡ್​ನ ಹೊರಹರಿವಿನಿಂದ ಇಂಥದ್ದೊಂದು ಬೆಳವಣಿಗೆ ಆಗಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು ಗ್ರೀನ್‌ಬ್ಯಾಕ್ ವಿರುದ್ಧ 77.72 ರಲ್ಲಿ ಪ್ರಾರಂಭವಾಯಿತು ಮತ್ತು ಅಂತಿಮವಾಗಿ 77.72ನಲ್ಲಿ ದಿನಕ್ಕೆ ಕೊನೆಯಾಯಿತು. ಅಲ್ಲಿಗೆ ಅದರ ಹಿಂದಿನ ಮುಕ್ತಾಯಕ್ಕಿಂತ 10 ಪೈಸೆ ಕಡಿಮೆಯಾಗಿದೆ. ವಹಿವಾಟಿನ ಅವಧಿಯಲ್ಲಿ, ರೂಪಾಯಿ ಮೌಲ್ಯವು ಇಂಟ್ರಾ-ಡೇ ಕನಿಷ್ಠ 77.76 ಮತ್ತು ಗರಿಷ್ಠ 77.63 ಅನ್ನು ಮುಟ್ಟಿತು. ಬುಧವಾರ ರೂಪಾಯಿ ಮೌಲ್ಯದಲ್ಲಿ 18 ಪೈಸೆ ಕುಸಿತ ಕಂಡು 77.62ಕ್ಕೆ ತಲುಪಿತ್ತು.

“ದೇಶೀಯ ಮತ್ತು ಜಾಗತಿಕ ಷೇರುಗಳಲ್ಲಿ ತೀವ್ರ ಮಾರಾಟದ ಹೊರತಾಗಿಯೂ ರೂಪಾಯಿಯು ಅಲ್ಪ ಪ್ರಮಾಣದ ಶ್ರೇಣಿಯಲ್ಲಿ ಕ್ರೋಡೀಕರಿಸಿದೆ. ಅಮೆರಿಕದಿಂದ ಬಿಡುಗಡೆಯಾದ ಆರ್ಥಿಕ ದತ್ತಾಂಶದ ಸಂಖ್ಯೆಯು ಅಂದಾಜಿಗಿಂತ ಕಡಿಮೆಯಾದ ನಂತರ ಡಾಲರ್ ಕೂಡ ಹೆಚ್ಚಿನ ಮಟ್ಟದಿಂದ ಹಿನ್ನಡೆ ಅನುಭವಿಸಿತು,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್​ನ ವಿದೇಶೀ ವಿನಿಮಯ ಮತ್ತು ಬುಲಿಯನ್ ವಿಶ್ಲೇಷಕ ಗೌರಂಗ್ ಸೋಮಯ್ಯ ಹೇಳಿದರು. ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.28 ಕಡಿಮೆಯಾಗಿ, 103.51ನಲ್ಲಿ ವಹಿವಾಟು ನಡೆಸುತ್ತಿದೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಫ್ಯೂಚರ್ ಪ್ರತಿ ಬ್ಯಾರೆಲ್‌ಗೆ ಶೇಕಡಾ 1.87 ಇಳಿದು, ಯುಎಸ್​ಡಿ 107.07ಕ್ಕೆ ಕುಸಿದಿದೆ. 30-ಷೇರುಗಳ ಗುಚ್ಛ ಬಿಎಸ್‌ಇ ಸೆನ್ಸೆಕ್ಸ್ 1,416.30 ಪಾಯಿಂಟ್‌ಗಳು ಅಥವಾ ಶೇ 2.61 ಕಡಿಮೆಯಾಗಿ, 52,792.23ಕ್ಕೆ ಕೊನೆಗೊಂಡಿತು. ಎನ್‌ಎಸ್‌ಇ ನಿಫ್ಟಿ 430.90 ಪಾಯಿಂಟ್ ಅಥವಾ ಶೇ 2.65ರಷ್ಟು ಕುಸಿದು, 15,809.40ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರದಂದು ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದರು. ವಿನಿಮಯ ಡೇಟಾ ಪ್ರಕಾರ, ರೂ. 1,254.64 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.

ವಿವಿಧ ದೇಶಗಳ ಕರೆನ್ಸಿ ಮೌಲ್ಯ ಇಲ್ಲಿದೆ: 

ಬ್ರಿಟಿಷ್​ ಪೌಂಡ್ ಸ್ಟರ್ಲಿಂಗ್​​ಗೆ= 96.37 ಭಾರತದ ರೂಪಾಯಿ

ಯುರೋಗೆ= 81.74 ಭಾರತದ ರೂಪಾಯಿ

ಚೀನಾದ ಯುವಾನ್= 11.51 ಭಾರತದ ರೂಪಾಯಿ

ಜಪಾನ್​ನ ಯೆನ್= 0.61 (61 ಪೈಸೆ)

ಕುವೈತ್​ ದಿನಾರ್= 253.02 ಭಾರತದ ರೂಪಾಯಿ

ಇರಾನ್​ನ ರಿಯಾಲ್= 0.0018 ಪೈಸೆ

ಬಾಂಗ್ಲಾದೇಶ್​ ಟಾಕಾ= 0.89 (89 ಪೈಸೆ)

ಶ್ರೀಲಂಕಾ ರೂಪಾಯಿ= 0.22 (22 ಪೈಸೆ)

ಪಾಕಿಸ್ತಾನದ ರೂಪಾಯಿ= 0.39 (39 ಪೈಸೆ)

ನೇಪಾಳದ ರೂಪಾಯಿ= 0.62 (62 ಪೈಸೆ)

ರಷ್ಯಾದ ರೂಬೆಲ್= 1.25 (1.25 ರೂ.)

ಅಂತರರಾಷ್ಟ್ರೀಯ ವಹಿವಾಟುಗಳಿಗೆ, ಅಂದರೆ ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಇತರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್​ ಬಳಸಲಾಗುತ್ತದೆ. ಆದರೆ ಯುನೈಟೆಡ್​ ಕಿಂಗ್​ಡಮ್​ನ ಪೌಂಡ್​ ಸ್ಟರ್ಲಿಂಗ್, ಯುರೋಪ್​ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್​ ದಿನಾರ್​ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Digital Currency: ದೇಶದಲ್ಲಿ 2023ರ ಹೊತ್ತಿಗೆ ಡಿಜಿಟಲ್ ಕರೆನ್ಸಿ ಪರಿಚಯಿಸುವ ಗುರಿ ಇದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್