ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮೇ 19ನೇ ತಾರೀಕಿನ ಗುರುವಾರದಂದು ಸತತ ಎರಡನೇ ದಿನ ಭಾರೀ ಇಳಿಕೆ ದಾಖಲಿಸಿತು. ನಿಫ್ಟಿ ಸೂಚ್ಯಂಕವು 15800ರ ಮಟ್ಟದ ಬಳಿ ಮುಕ್ತಾಯ ಆಗಿದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ 1416.30 ಪಾಯಿಂಟ್ಸ್ ಅಥವಾ ಶೇ 2.61ರಷ್ಟು ಕುಸಿದು, 52,792.23 ಪಾಯಿಂಟ್ಸ್ನಲ್ಲಿ ಮುಕ್ತಾಯ ಆಗಿದ್ದರೆ, ನಿಫ್ಟಿ 430.90 ಪಾಯಿಂಟ್ಸ್ ಅಥವಾ ಶೇ 2.65ರಷ್ಟು ಕೆಳಗೆ ಇಳಿದು, 15,809.40 ಪಾಯಿಂಟ್ಸ್ನಲ್ಲಿ ವಹಿವಾಟು ಮುಗಿದಿದೆ. ಇಂದಿನ ವಹಿವಾಟಿನಲ್ಲಿ 838 ಕಂಪೆನಿ ಷೇರುಗಳು ಏರಿಕೆ ಕಂಡರೆ, 2413 ಕಂಪೆನಿ ಷೇರುಗಳು ಇಳಿಕೆ ದಾಖಲಿಸಿದವು. 122 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎಲ್ಲ ವಲಯವೂ ಇಳಿಕೆಯಲ್ಲೇ ಮುಕ್ತಾಯ ಆಗಿವೆ. ಲೋಹ, ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ಶೇ 4ರಿಂದ 5ರಷ್ಟು ಇಳಿಕೆ ದಾಖಲಿಸಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಶೇ 2ರಷ್ಟು ನೆಲ ಕಚ್ಚಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಐಟಿಸಿ ಶೇ 3.32
ಡಾ ರೆಡ್ಡೀಸ್ ಲ್ಯಾಬ್ಸ್ ಶೇ 0.61
ಪವರ್ ಗ್ರಿಡ್ ಕಾರ್ಪೊರೇಷನ್ ಶೇ 0.18
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ವಿಪ್ರೋ ಶೇ- 6.25
ಎಚ್ಸಿಎಲ್ ಟೆಕ್ ಶೇ -5.99
ಇನ್ಫೋಸಿಸ್ ಶೇ -5.44
ಟೆಕ್ ಮಹೀಂದ್ರಾ ಶೇ -5.43
ಟಿಸಿಎಸ್ ಶೇ -5.42
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ