Gold Price Today: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 4,000 ರೂ. ಹೆಚ್ಚಳ

Silver Price Today: ಭಾರತದಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 50,290 ರೂ. ಇದ್ದುದು 50,510 ರೂ. ಆಗಿದೆ. ಒಂದೇ ದಿನದಲ್ಲಿ ಬೆಳ್ಳಿ ದರ 4,000 ರೂ. ಏರಿಕೆಯಾಗಿದೆ.

Gold Price Today: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 4,000 ರೂ. ಹೆಚ್ಚಳ
ಚಿನ್ನದ ಬೆಲೆ
Edited By:

Updated on: May 20, 2022 | 5:55 AM

ಬೆಂಗಳೂರು: ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ (Gold Rate) ಕುಸಿತವಾಗಿತ್ತು. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಇಂದು ಚಿನ್ನದ ಬೆಲೆ 10 ಗ್ರಾಂಗೆ 220 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಕೂಡ ದಾಖಲೆಯ ಕುಸಿತವಾಗಿದ್ದು, ಒಂದೇ ದಿನದಲ್ಲಿ 4,000 ರೂ. ಇಳಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,100 ರೂ. ಇದ್ದುದು 46,300 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,290 ರೂ. ಇದ್ದುದು 50,510 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,550 ರೂ. ಮುಂಬೈ- 46,300 ರೂ, ದೆಹಲಿ- 46,300 ರೂ, ಕೊಲ್ಕತ್ತಾ- 46,300 ರೂ, ಬೆಂಗಳೂರು- 46,300 ರೂ, ಹೈದರಾಬಾದ್- 46,300 ರೂ, ಕೇರಳ- 46,300 ರೂ, ಪುಣೆ- 46,360 ರೂ, ಮಂಗಳೂರು- 46,300 ರೂ, ಮೈಸೂರು- 46,300 ರೂ. ಇದೆ. (Source)

ಇದನ್ನೂ ಓದಿ
ವಿಪ್ರೋ ಕಂಪನಿಯ ಅಜೀಂ ಪ್ರೇಮ್​ಜಿ ವಿರುದ್ಧ ಆರೋಪ ಮಾಡಿದ್ದ ವಕೀಲನಿಂದ ಬೇಷರತ್ ಸಾರ್ವಜನಿಕ ಕ್ಷಮೆಯಾಚನೆ
Kukke Subramanya temple town: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇನ್ನು ಜಿಯೋ 4G ಡಿಜಿಟಲ್ ಲೈಫ್ ಸಂಪರ್ಕ ಸಂಭ್ರಮ
LPG Cylinder Price Hike: ಅಡುಗೆ ಸಿಲಿಂಡರ್ ಬೆಲೆ ಏರಿಕೆ, ನಿಮ್ಮ ಜೇಬಿಗೆ ಇನ್ನೊಂದು ಹೊರೆ
ಕೃಷಿ ಆದಾಯ 10 ಲಕ್ಷ ಮೀರಿದರೆ ಕಟ್ಟುನಿಟ್ಟಿನ ಪರಿಶೀಲನೆ: ತೆರಿಗೆ ನಿಯಮ ಬಿಗಿಗೊಳಿಸಲು ಮುಂದಾದ ಸರ್ಕಾರ

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಂದು 490 ರೂ. ಕುಸಿತ; ಬೆಳ್ಳಿ ದರ ಮತ್ತೆ ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,870 ರೂ, ಮುಂಬೈ- 50,510 ರೂ, ದೆಹಲಿ- 50,510 ರೂ, ಕೊಲ್ಕತ್ತಾ- 50,510 ರೂ, ಬೆಂಗಳೂರು- 50,510 ರೂ, ಹೈದರಾಬಾದ್- 50,510 ರೂ, ಕೇರಳ- 50,510 ರೂ, ಪುಣೆ- 50,570 ರೂ, ಮಂಗಳೂರು- 50,510 ರೂ, ಮೈಸೂರು- 50,510 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಇಂದು ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಒಂದೇ ದಿನದಲ್ಲಿ ಬೆಳ್ಳಿ ದರ 4,000 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,000 ರೂ. ಇದ್ದುದು ಇಂದು 65,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,000 ರೂ, ಮೈಸೂರು- 65,000 ರೂ., ಮಂಗಳೂರು- 65,000 ರೂ., ಮುಂಬೈ- 65,000 ರೂ, ಚೆನ್ನೈ- 65,000 ರೂ, ದೆಹಲಿ- 60,600 ರೂ, ಹೈದರಾಬಾದ್- 65,000 ರೂ, ಕೊಲ್ಕತ್ತಾ- 65,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ