ಯುಎಇ ನಾಡಿನ ದುಬೈನಲ್ಲಿರುವ ಅಲ್ಮಖ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ (Al Maktoum International Airport) ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದೆ. ದುಬೈನ ಈ ಎರಡನೇ ಏರ್ಪೋರ್ಟ್ನಲ್ಲಿ ಹೊಸ ಟರ್ಮಿನಲ್ ಸಿದ್ಧವಾಗುತ್ತಿದೆ. 35 ಬಿಲಿಯನ್ ಡಾಲರ್ ಅಂದಾಜು ವೆಚ್ಚದಲ್ಲಿ ಸಿದ್ದಗೊಳ್ಳಲಿರುವ ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗಿದೆ. ದುಬೈನ ದಕ್ಷಿಣ ಭಾಗದಲ್ಲಿರುವ ಮರುಭೂಮಿಯಲ್ಲಿ ಮುಂದಿನ 10 ವರ್ಷದಲ್ಲಿ ಈ ಏರ್ಪೊರ್ಟ್ ಸಿದ್ಧಗೊಳ್ಳಲಿದೆ. ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್ಗಳಲ್ಲಿ ಒಂದಾಗಿರುವ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ತನ್ನ ಇಡೀ ಕಾರ್ಯಾಚರಣೆಗಳನ್ನು ಈ ಏರ್ಪೋರ್ಟ್ಗೆ ವರ್ಗಾಯಿಸಲಿದೆ.
‘ಭವಿಷ್ಯದ ತಲೆಮಾರುಗಳಿಗಾಗಿ ಹೊಸ ಏರ್ಪೋರ್ಟ್ ನಿರ್ಮಿಸುತ್ತಿದ್ದೇವೆ. ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿ ಖಾತ್ರಿ ಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಷೀದ್ ಅಲ್ ಮಖ್ತೂಮ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಕಪ್ಪುಹಣ ಹೆಚ್ಚಾಗುತ್ತೆ: ಹಿರಿಯ ವಕೀಲ ಆರ್ಯಮ ಸುಂದರಂ
ದುಬೈನಲ್ಲಿ ಎರಡು ಏರ್ಪೋರ್ಟ್ಗಳಿವೆ. ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ (ಡಿಎಕ್ಸ್ಬಿ) ಮತ್ತು ಅಲ್ಮಖ್ತೂಮ್ ಏರ್ಪೋರ್ಟ್ ಇವೆ. ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್ಗಳಲ್ಲಿ ದುಬೈ ವಿಮಾನ ನಿಲ್ದಾಣ ಒಂದು. ಇಲ್ಲಿ ಸುಮಾರು 9 ಕೋಟಿ ಜನರು ವರ್ಷದಲ್ಲಿ ಬಂದು ಹೋಗುತ್ತಾರೆ. ಈ ಏರ್ಪೋರ್ಟ್ನಿಂದ 45 ಕಿಮೀ ದಕ್ಷಿಣಕ್ಕೆ ಅಲ್ಮಖ್ತೂನ್ ಏರ್ಪೋರ್ಟ್ ಇದೆ. 2010ಕ್ಕೆ ಆರಂಭವಾದ ಇದರಲ್ಲಿ ಸದ್ಯ ಒಂದು ಟರ್ಮಿನಲ್ ಮತ್ತು ಎರಡು ರನ್ವೇಗಳಿವೆ.
ಈಗ ಇರುವ ಯೋಜನೆಯಲ್ಲಿ ಅಲ್ಮಖ್ತೂನ್ ಏರ್ಪೋರ್ಟ್ನಲ್ಲಿ ಹೊಸ ಟರ್ಮಿನಲ್ ಸಿದ್ಧಗೊಳಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗುತ್ತದೆ. 400 ವಿಮಾನ ಗೇಟ್ಗಳು ಇರಲಿವೆ. ಐದು ಪರ್ಯಾಯ ರನ್ವೇಗಳನ್ನು ನಿರ್ಮಿಸಲಾಗುತ್ತಿದೆ. ಇದು ಪೂರ್ಣವಾಗಿ ಸಿದ್ಧಗೊಂಡರೆ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಏನಿದೆ ಅದಕ್ಕಿಂತ ಐದು ಪಟ್ಟು ಬೃಹತ್ತಾಗಿರಲಿದೆ ಹೊಸ ಎರ್ಪೋರ್ಟ್. ಎರಡೂವರೆ ಕೋಟಿಗಿಂತಲೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವಷ್ಟು ಬೃಹತ್ತಾಗಿರಲಿದೆ ಇದು.
ಇದನ್ನೂ ಓದಿ: ಭಾರತೀಯನಾಗದಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ: ಬದಲಾದ ವಾಸ್ತವ ಬಿಚ್ಚಿಟ್ಟಿದ್ದಾರೆ ಅಮೆರಿಕದ ರಾಯಭಾರಿ
ಈ ಏರ್ಪೋರ್ಟ್ ನಿರ್ಮಾಣದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಯೋಗವಾಗಲಿರುವ ಹೊಸ ಏವಿಯೇಶನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಂತೆ. ಏರ್ಪೋರ್ಟ್ ಸುತ್ತಲೂ ನಗರವನ್ನೂ ನಿರ್ಮಿಸಲಾಗುತ್ತಿದೆ. ಲಕ್ಷಾಂತರ ಮನೆಗಳೂ ಸುತ್ತಲೂ ನಿರ್ಮಾಣವಾಗಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ