Economic Survey: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?

Economic Survey 2026, know its significance: 2026-27ರ ಹಣಕಾಸು ವರ್ಷಕ್ಕೆ ಫೆಬ್ರುವರಿ 1ರಂದು ಬಜೆಟ್ ಮಂಡನೆ ಮಾಡಲಾಗುತ್ತದೆ. ಅದಕ್ಕೆ ಮುನ್ನ, ಜನವರಿ 29, ಗುರುವಾರ ಆರ್ಥಿಕ ಸಮೀಕ್ಷಾ ವರದಿ ಪ್ರಸ್ತುತಗೊಳ್ಳುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿಗಳ ತಂಡ ಈ ಆರ್ಥಿಕ ಸಮೀಕ್ಷಾ ವರದಿ ಸಿದ್ಧಪಡಿಸುತ್ತದೆ.

Economic Survey: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?
ಆರ್ಥಿಕ ಸಮೀಕ್ಷೆ

Updated on: Jan 18, 2026 | 6:02 PM

ನವದೆಹಲಿ, ಜನವರಿ 18: ಪ್ರಸಕ್ತ ಹಣಕಾಸು ವರ್ಷದ (2025-26) ಆರ್ಥಿಕ ಸಮೀಕ್ಷೆ ವರದಿಯನ್ನು (Economic Survey) ಇದೇ ಜನವರಿ 29, ಗುರುವಾರದಂದು ಬಹಿರಂಗಗೊಳ್ಳಲಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಿದ್ಧಪಡಿಸಲಾದ ಈ ಸಮೀಕ್ಷಾ ದಾಖಲೆ ಪುಸ್ತಕವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್​ನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ತಂಡವು ಈ ವರದಿಯನ್ನು ಸಿದ್ಧಪಡಿಸಿ ಹಣಕಾಸು ಸಚಿವಾಲಯಕ್ಕೆ ಕೊಡುತ್ತದೆ.

ಈ ಬಾರಿಯ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 28ರಂದು ಆರಂಭವಾಗಿ ಫೆಬ್ರುವರಿ 13ರವರೆಗೂ ಇರುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆಗೆ ಹಿಂದಿನ ದಿನ ಆರ್ಥಿಕ ಸಮೀಕ್ಷೆಯ ವರದಿ ಪ್ರಸ್ತುತಪಡಿಸಲಾಗುತ್ತದೆ. ಆದರೆ ಈ ಬಾರಿ ತುಸು ಬೇಗ ಪ್ರಸ್ತುತವಾಗುತ್ತಿದೆ.

ಇದನ್ನೂ ಓದಿ: ಡಾವೊಸ್ ಶೃಂಗಸಭೆ 2026: ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ

ಆರ್ಥಿಕ ಸಮೀಕ್ಷೆಯಲ್ಲಿ ಏನಿರುತ್ತೆ? ಏನದರ ಮಹತ್ವ?

ಮುಂದಿನ ಹಣಕಾಸು ವರ್ಷದ ಅಂದಾಜು ಆದಾಯ ಮತ್ತು ವ್ಯಯದ ಲೆಕ್ಕಪತ್ರವೇ ಬಜೆಟ್. ಸರ್ಕಾರದ ಬಳಿ ಎಷ್ಟು ಆದಾಯ ಇದೆ, ಎಷ್ಟು ಆದಾಯ ಬರುತ್ತದೆ, ಎಷ್ಟು ಸಾಲ ಮಾಡಲಾಗುತ್ತದೆ, ಯಾವ್ಯಾವ ಯೋಜನೆ, ಇಲಾಖೆಗಳಿಗೆ ಎಷ್ಟೆಷ್ಟು ಹಣ ಕೊಡಲಾಗುತ್ತದೆ ಎಂಬುದನ್ನು ಪೂರ್ವದಲ್ಲೇ ನಿರ್ಧರಿಸಿ, ಅಥವಾ ಅಂದಾಜಿಸಿ ಬಜೆಟ್ ಸಿದ್ಧಪಡಿಸಲಾಗುತ್ತದೆ.

ಆದರೆ, ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಪರಿಸ್ಥಿತಿಯನ್ನು ಅವಲೋಕಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಆರ್ಥಿಕ ಸಾಧನೆ ಹೇಗಿತ್ತು ಎಂದು ವಿಶ್ಲೇಷಿಸುತ್ತದೆ. ಕೃಷಿ, ಉದ್ಯಮ ಸೇರಿದಂತೆ ವಿವಿಧ ಸೆಕ್ಟರ್​ಗಳ ಸಾಧನೆಯನ್ನೂ ಪರಾಮರ್ಶಿಸಲಾಗುತ್ತದೆ.

ಇದನ್ನೂ ಓದಿ: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು

ಜಿಡಿಪಿ ಬೆಳವಣಿಗೆ, ಹಣದುಬ್ಬರ, ವಿತ್ತೀಯ ಕೊರತೆ ಇತ್ಯಾದಿ ಆರ್ಥಿಕ ಮಾನದಂಡಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಅಗರವೇ ಈ ಸಮೀಕ್ಷೆಯಲ್ಲಿ ಇರುತ್ತದೆ. ಹಾಗೆಯೇ, ಸರ್ಕಾರದ ಮುಂದಿನ ಆರ್ಥಿಕ ಮತ್ತು ಹಣಕಾಸು ನೀತಿ ಹೇಗಿರಬೇಕು ಎಂದು ಈ ವರದಿಯಲ್ಲಿ ಸಲಹೆಗಳನ್ನು ನೀಡಲಾಗುತ್ತದೆ. ಈ ಆರ್ಥಿಕ ಸಮೀಕ್ಷಾ ವರದಿಯಿಂದ ಸರ್ಕಾರಕ್ಕೆ ದೇಶದ ಸ್ಥೂಲ ಆರ್ಥಿಕತೆ ವಾಸ್ತವಿಕ ಪರಿಸ್ಥಿತಿಯ ದರ್ಶನವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Sun, 18 January 26