AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DISCOMs: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು

India's Power distributing DISCOMs see first profit in over a decade: ಭಾರತದಲ್ಲಿರುವ ಎಲ್ಲಾ ಡಿಸ್ಕಾಂ ಕಂಪನಿಗಳಿಂದ 2024-25ರಲ್ಲಿ ಒಟ್ಟು 2,701 ಕೋಟಿ ರೂ ನಿವ್ವಳ ಲಾಭ ಬಂದಿದೆ. 2013-14ರಲ್ಲಿ ಡಿಸ್ಕಾಂ ಕಂಪನಿಗಳು ಬರೋಬ್ಬರಿ 67,962 ಕೋಟಿ ರೂ ನಷ್ಟ ಕಂಡಿದ್ದವು. ಅಲ್ಲಿಂದೀಚೆ ಇವುಗಳ ಕಾರ್ಯಕ್ಷಮತೆ, ಆದಾಯ ಎಲ್ಲವೂ ಸುಧಾರಣೆ ಆಗಿದೆ. ಸರ್ಕಾರ ಕೈಗೊಂಡ ಕೆಲ ಪ್ರಮುಖ ಸುಧಾರಣಾ ಕ್ರಮಗಳು ಇದಕ್ಕೆ ಕಾರಣ ಎನ್ನಲಾಗಿದೆ.

DISCOMs: ಹಲವು ವರ್ಷಗಳ ಬಳಿಕ ಮೊದಲ ಆದಾಯ ಸವಿದ ಭಾರತದ ಡಿಸ್ಕಾಂ ಕಂಪನಿಗಳು
ವಿದ್ಯುತ್ ವಿತರಣೆ ಗ್ರಿಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2026 | 1:04 PM

Share

ನವದೆಹಲಿ, ಜನವರಿ 18: ಭಾರತದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) 2024-25ರ ಹಣಕಾಸು ವರ್ಷದಲ್ಲಿ 2,701 ಕೋಟಿ ರೂ ನಿವ್ವಳ ಲಾಭ ಗಳಿಸಿವೆ. ಇದು ತೆರಿಗೆ ಕಳೆದ ನಂತರ ಉಳಿಯುವ ಲಾಭವಾಗಿದೆ. ಭಾರತದ ಒಟ್ಟೂ ಡಿಸ್ಕಾಂ ಕಂಪನಿಗಳಿಗೆ ಸಿಕ್ಕಿರುವ ಒಟ್ಟೂ ಪಿಎಟಿ ಲಾಭ ಇದು. ಹತ್ತಕ್ಕೂ ಹೆಚ್ಚು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ಕಂಪನಿಗಳು ಲಾಭ ಕಂಡಿವೆ.

ನಷ್ಟಗಳ ಕೂಪದಲ್ಲೇ ಸಿಲುಕಿದ್ದ ಡಿಸ್ಕಾಂ ಕಂಪನಿಗಳು ಲಾಭದ ಹಳಿಗೆ ಬರುವಂತಾಗಲು ಹಲವು ವರ್ಷಗಳ ಸುಧಾರಣಾ ಹಾದಿಯೇ ಕಾರಣವಾಗಿದೆ. 2024-25ರಲ್ಲಿ ಡಿಸ್ಕಾಂಗಳು ಲಾಭ ಕಂಡಿರುವುದು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾದಂತಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಮನೋಹರಲಾಲ್ ಹೇಳಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

2013-14ರಲ್ಲಿ ಡಿಸ್ಕಾಂ ಕಂಪನಿಗಳಿಗೆ ಒಟ್ಟು ಆಗಿದ್ದ ನಷ್ಟ 67,962 ಕೋಟಿ ರೂ. 2023-24ರ ಹಣಕಾಸು ವರ್ಷದಲ್ಲಿ ಇವು 25,553 ಕೋಟಿ ರೂ ನಷ್ಟ ಕಂಡಿದ್ದವು. ಈಗ 2024-25ರಲ್ಲಿ 2,701 ಕೋಟಿ ರೂ ಲಾಭ ಮಾಡಿವೆ.

ಸರ್ಕಾರದ ವಿವಿಧ ಸುಧಾರಣಾ ಕ್ರಮಗಳು

ವಿತರಣಾ ಕ್ಷೇತ್ರದ ಪುನಾರಚನೆ ಸ್ಕೀಮ್ (ಆರ್​ಡಿಎಸ್​ಎಸ್), ಎಲೆಕ್ಟ್​ರಿಸಿಟಿ ನಿಯಮಗಳಿಗೆ ತಿದ್ದುಪಡಿ, ತಡಪಾವತಿ ಸುಂಕ ನಿಯಮ, ವಿದ್ಯುತ್ ವಿತರಣೆ ಖಾತೆ ಮತ್ತು ಹೆಚ್ಚುವರಿ ಮಾಹಿತಿ ನಿಯಮ 2025 ಇತ್ಯಾದಿ ಸರ್ಕಾರ ಕೈಗೊಂಡ ಅನೇಕ ಸುಧಾರಣಾ ಕ್ರಮಗಳು ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಪರಿವರ್ತನೆಯನ್ನೇ ತಂದಿವೆ ಎಂದು ಹೇಳಲಾಗುತ್ತಿದೆ.

ತಗ್ಗಿದ ವಿದ್ಯುತ್ ಪೋಲು

ಈ ಸುಧಾರಣೆಗಳಿಂದ ಡಿಸ್ಕಾಂಗಳ ಆದಾಯದಲ್ಲಿ ಸುಧಾರಣೆ ಕಂಡಿರುವುದು ಮಾತ್ರವಲ್ಲ, ಅವುಗಳ ಕಾರ್ಯನಿರ್ವಹಣೆಯ ಇತರ ಸೂಚಕಗಳಲ್ಲೂ ಪ್ರಗತಿ ಕಾಣಬಹುದಾಗಿದೆ. ಎಟಿ ಅಂಡ್ ಸಿ ನಷ್ಟ 2013-14ರಲ್ಲಿ ಶೇ. 22.62 ಇತ್ತು. 2024-25ರಲ್ಲಿ ಇದು ಶೇ. 15.04ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ

ಎಟಿ ಅಂಡ್ ಸಿ ಎಂದರೆ ಅಗ್ರಿಗೇಟ್ ಟೆಕ್ನಿಕಲ್ ಮತ್ತು ಕಮರ್ಷಿಯಲ್. ವಿದ್ಯುತ್ ವಿತರಣೆ ವೇಳೆ ಆಗುವ ವಿದ್ಯುತ್ ಪೋಲು, ಮೀಟರ್ ದೋಷ, ಬಿಲ್ಲಿಂಗ್ ದೋಷ ಇತ್ಯಾದಿ ಕಾರಣದಿಂದ ಆಗುವ ಲಾಭ ನಷ್ಟವನ್ನು ಎಟಿ ಅಂಡ್ ಸಿ ನಷ್ಟ ಎಂದು ಪರಿಗಣಿಸಲಾಗುತ್ತದೆ. ಈ ನಷ್ಟದಲ್ಲಿ ಇಳಿಮುಖ ಆಗುತ್ತಿರುವುದು ಈ ಸೆಕ್ಟರ್​ನ ಕಾರ್ಯಕ್ಷಮತೆ ಹೆಚ್ಚುತ್ತಿರುವುದರ ಸಂಕೇತವಾಗಿದೆ.

ಹಾಗೆಯೇ, ಸರಬರಾಜು ವೆಚ್ಚ ಹಾಗೂ ವಾಸ್ತವ ಆದಾಯದ ನಡುವಿನ ಅಂತರ 2013-14ರಲ್ಲಿ ಪ್ರತೀ ಕೆಡಬ್ಲ್ಯುಎಚ್​ಗೆ 78 ಪೈಸೆ ಇತ್ತು. 2024-25ರಲ್ಲಿ ಇದು 6 ಪೈಸೆಗೆ ಇಳಿಕೆ ಆಗಿದೆ. ಹಾಗೆಯೇ, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಕೊಡಬೇಕಿರುವ ಬಾಕಿ ಹಣದಲ್ಲೂ ಗಣನೀಯ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ