AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ

India to overtake USA in 2026 to become world's second largest Solar Market: 2025ರಲ್ಲಿ ಭಾರತದ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದೆ. 2026ರಲ್ಲಿ ಚೀನಾ ನಂತರ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಲಿದೆ. ಅಮೆರಿಕದಲ್ಲಿ ಸೌರವಿದ್ಯುತ್ ಸಾಮರ್ಥ್ಯ ಹೆಚ್ಚಳ ಕಡಿಮೆಗೊಳ್ಳಲಿದೆ. ಇದರಿಂದ ಭಾರತ ಅಮೆರಿಕವನ್ನು ಹಿಂದಿಕ್ಕಲು ಸಾಧ್ಯವಾಗಬಹುದು.

Solar: 2026ರಲ್ಲಿ ಭಾರತವಾಗಲಿದೆ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆ
ಸೋಲಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2026 | 4:06 PM

Share

ನವದೆಹಲಿ, ಜನವರಿ 16: ಸೌರಶಕ್ತಿ ಮತ್ತು ಸೌರ ಮಾರುಕಟ್ಟೆ (Solar Market) ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಈ ವರ್ಷ (2026) ಭಾರತ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಲಿದೆ. ಸೌರ ಮಾರುಕಟ್ಟೆ ಗಾತ್ರದಲ್ಲಿ ಭಾರತ ಮೊದಲ ಬಾರಿಗೆ ಅಮೆರಿಕವನ್ನು ಹಿಂದಿಕ್ಕಲಿದೆ. ಜಾಗತಿಕವಾಗಿ ಸೌರ ಸ್ಥಾಪನೆಗಳು (Solar Installations) ಕುಸಿಯುತ್ತಿರುವಾಗ ಭಾರತದಲ್ಲಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ.

2026ರಲ್ಲ ಭಾರತದಲ್ಲಿ 50 ಗಿಗಾವ್ಯಾಟ್​ಗೂ ಅಧಿಕ ಸೌರ ವಿದ್ಯುತ್ ಶಕ್ತಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. 2025ಕ್ಕೆ ಹೋಲಿಸಿದರೆ ಸೌರ ಶಕ್ತಿ ಸಾಮರ್ಥ್ಯ ಶೇ. 6ರಷ್ಟು ಹೆಚ್ಚಾಗಬಹುದು. ಮನೆಗಳ ಮೇಲ್ಛಾವಣಿ ಸೋಲಾರ್ ಸ್ಥಾಪನೆಗೆ ಸರ್ಕಾರ ನೀಡುತ್ತಿರುವ ಉತ್ತೇಜನವು ಭಾರತದಲ್ಲಿ ಹೊಸ ಸೋಲಾರ್ ಕೆಪಾಸಿಟಿ ಸೇರ್ಪಡೆಗೆ ಇರುವ ಕಾರಣಗಳಲ್ಲಿ ಒಂದು.

ಇದನ್ನೂ ಓದಿ: Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ

ಅಮೆರಿಕದಲ್ಲಿ ಸೋಲಾರ್ ಇನ್ಸ್​ಟಲೇಶನ್​ಗಳಲ್ಲಿ ಇಳಿಮುಖ

ಜಾಗತಿಕವಾಗಿ ಸೋಲಾರ್ ಸ್ಥಾಪನೆಗಳು 2026ರಲ್ಲಿ ಮಂದಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಅಮೆರಿಕದಲ್ಲಿ ಶೇ. 14ರಷ್ಟು ಕಡಿಮೆ ಆಗಬಹುದು. ಟ್ರಂಪ್ ಸರ್ಕಾರದ ಕೆಲ ನೀತಿಗಳು ಸೋಲಾರ್ ಯೋಜನೆಗಳಿಗೆ ಹಿನ್ನಡೆ ತರಬಹುದು. ಒಂದೆಡೆ, ಅಮೆರಿಕದಲ್ಲಿ ಸೌರಶಕ್ತಿ ಸ್ಥಾಪನೆ ಕಡಿಮೆಗೊಂಡರೆ, ಭಾರತದಲ್ಲಿ ಇದು ಹೆಚ್ಚಳಗೊಳ್ಳುತ್ತದೆ. ಇದರಿಂದ ಭಾರತವು ಅಮೆರಿಕವನ್ನು ಹಿಂದಿಕ್​ಕಲು ಸಾಧ್ಯವಾಗಬಹುದು.

ಚೀನಾದ ಪ್ರಾಬಲ್ಯ ಮುಂದುವರಿಕೆ

ಸೌರಶಕ್ತಿಯ ವಿಚಾರಕ್ಕೆ ಬಂದರೆ ಚೀನಾ ವಿಶ್ವದ ಕಿಂಗ್. ಈ ಕ್ಷೇತ್ರದಲ್ಲಿ ಬಹುತೇಕ ಚೀನಾದ ಪಾರಮ್ಯತೆ ಇದೆ. ಕಳೆದ ವರ್ಷದ ಶೇ. 14ರಷ್ಟು ಇಳಿಮುಖವಾದರೂ 2026ರಲ್ಲಿ ಜಾಗತಿಕವಾಗಿಚೀನಾ 321 ಗಿಗಾವ್ಯಾಟ್​ನಷ್ಟು ಸೌರ ನಿಯೋಜನೆ ಮಾಡಬಹುದು.

ಇದನ್ನೂ ಓದಿ: India-Iran: ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾದರೂ ಭಾರತಕ್ಕೆ ಬೇಕು; ಯಾಕೆ ಗೊತ್ತಾ?

2030ರ ಗುರಿಯತ್ತ ಭಾರತ

2025ರಲ್ಲಿ ಜನವರಿಂದ ನವೆಂಬರ್​ವರೆಗೆ ಭಾರತ 35 ಗಿಗಾವ್ಯಾಟ್​ನಷ್ಟು ಹೊಸ ಸೌರವಿದ್ಯುತ್ ಸಾಮರ್ಥ್ಯ ಸೇರಿಸಿದೆ. 2030ರಲ್ಲಿ ಪಳೆಯುಳಿಕೆಯಲ್ಲದ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್​ಗೆ ಬೆಳೆಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಭಾರತ ದಾಪುಗಾಲು ಇಡುತ್ತಿದೆ.

ಭಾರತದ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಕೆಪಾಸಿಟಿ ಈಗ ವರ್ಷಕ್ಕೆ 125 ಗಿಗಾವ್ಯಾಟ್ ಮುಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಚುನಾವಣೆಯಲ್ಲಿ ಗೆಲುವು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಚುನಾವಣೆಯಲ್ಲಿ ಗೆಲುವು
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಡಿಕೆಶಿ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಬಳ್ಳಾರಿ ಗಲಭೆ; ನಾಳೆ ನಡೆಯಲಿರುವ ಪ್ರತಿಭಟನೆ ಬಗ್ಗೆ SP ಹೇಳಿದ್ದಿಷ್ಟು
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ
ಪೌರಾಯುಕ್ತೆಗೆ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ
ಪೌರಾಯುಕ್ತೆಗೆ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ
ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ
ಪಾಮ್ ಆಯಿಲ್ ಟ್ಯಾಂಕರ್ ಲಾರಿ ಪಲ್ಟಿ: ಅಡುಗೆ ಎಣ್ಣೆಗಾಗಿ ಮುಗಿಬಿದ್ದ ಜನ
ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ?
ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ?
ಸನ್ಯಾಸಿ ಮಗನ ಜೀವ ಉಳಿಸಲು ಕಿಡ್ನಿಯನ್ನೇ ದಾನ ಮಾಡಿದ್ದ ಮಹಾತಾಯಿ!
ಸನ್ಯಾಸಿ ಮಗನ ಜೀವ ಉಳಿಸಲು ಕಿಡ್ನಿಯನ್ನೇ ದಾನ ಮಾಡಿದ್ದ ಮಹಾತಾಯಿ!