ಬ್ಯಾಂಕ್ ಸಾಲದ 22,842 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ (Money Laundering) ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಥವಾ ಇಡಿ ಏಪ್ರಿಲ್ 26ನೇ ತಾರೀಕಿನ ಮಂಗಳವಾರದಂದು ಮುಂಬೈ, ಪುಣೆ ಮತ್ತು ಸೂರತ್‌ನಲ್ಲಿನ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಗರಗಳಲ್ಲಿ 26 ಸ್ಥಳಗಳನ್ನು ಕೇಂದ್ರ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಶೋಧಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಹಡಗು ನಿರ್ಮಾಣ ಕಂಪೆನಿಯ ಮಾಜಿ ಪ್ರವರ್ತಕರ ವಿರುದ್ಧ ಸಿಬಿಐ ಎಫ್‌ಐಆರ್ (ಪ್ರಕರಣ) ಅಧ್ಯಯನ ಮಾಡಿದ ನಂತರ ಜಾರಿ ನಿರ್ದೇಶನಾಲಯವು ಫೆಬ್ರವರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.
ಬ್ಯಾಂಕ್‌ಗಳ ಒಕ್ಕೂಟಕ್ಕೆ ರೂ. 22,842 ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಆಗಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ಮತ್ತು ಇತರರ ವಿರುದ್ಧ ಸಿಬಿಐ ಆರೋಪ ಹೊರಿಸಿತ್ತು.
ಭಾರತೀಯ ದಂಡ ಸಂಹಿತೆ (IPC) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಅಧಿಕೃತ ಸ್ಥಾನದ ದುರುಪಯೋಗದ ಅಪರಾಧಗಳಿಗಾಗಿ ಆಗಿನ ಕಾರ್ಯನಿರ್ವಾಹಕ ನಿರ್ದೇಶಕ ಸಂತಾನಂ ಮುತ್ತಸ್ವಾಮಿ, ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್ವಾಲ್ ಮತ್ತು ರವಿ ವಿಮಲ್ ನೆವೆಟಿಯಾ ಮತ್ತು ಇನ್ನೊಂದು ಕಂಪೆನಿ ಎಬಿಜಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಅನ್ನು ಹೆಸರಿಸಿತ್ತು.
ಇದನ್ನೂ ಓದಿ: ABG Shipyard Scam: ಎಬಿಜಿ ಶಿಪ್‌ಯಾರ್ಡ್ ಹಗರಣದಲ್ಲಿ ನಿರ್ದೇಶಕರ ವಿರುದ್ಧ ಸಿಬಿಐ ಲುಕ್ಔಟ್ ನೋಟಿಸ್