Stock Market News: ಸೆನ್ಸೆಕ್ಸ್ 777 ಪಾಯಿಂಟ್ಸ್, ನಿಫ್ಟಿ 247 ಪಾಯಿಂಟ್ಸ್ ಏರಿಕೆ ; ಅದಾನಿ ಪೋರ್ಟ್ಸ್ ಷೇರು 50 ರೂ. ಗಳಿಕೆ
ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಎರಡು ದಿನಗಳ ಇಳಿಕೆ ಹಾದಿಯಿಂದ ಮರಳಿ ಏರಿಕೆಯತ್ತ ಹೊರಳಿದೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಎರಡು ದಿನಗಳ ಇಳಿಕೆಯ ಸರಪಳಿಯನ್ನು ಏಪ್ರಿಲ್ 26ನೇ ತಾರೀಕಿನ ಮಂಗಳವಾರದಂದು ಕಳಚಿಕೊಂಡಿದೆ. ನಿಫ್ಟಿ ಮತ್ತೆ 17,200 ಪಾಯಿಂಟ್ಸ್ಗಳಿಗೆ ಮರಳಿದೆ. ಮಂಗಳವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 776.72 ಪಾಯಿಂಟ್ಸ್ ಅಥವಾ ಶೇ 1.37ರಷ್ಟು ಮೇಲೇರಿ 57,356.61 ಪಾಯಿಂಟ್ಸ್ ಮತ್ತು ನಿಫ್ಟಿ 246.80 ಪಾಯಿಂಟ್ಸ್ ಅಥವಾ ಶೇ 1.46ರಷ್ಟು ಹೆಚ್ಚಳವಾಗಿ, 17,200.80 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಕ್ತಾಯ ಆಗಿದೆ. ಇಂದಿನ ವಹಿವಾಟಿನಲ್ಲಿ 1886 ಕಂಪೆನಿಯ ಷೇರುಗಳಲ್ಲಿ ಏರಿಕೆ ಕಂಡುಬಂದರೆ, 1422 ಕಂಪೆನಿಯ ಷೇರುಗಳಲ್ಲಿ ಇಳಿಕೆ ಆಯಿತು. 108 ಕಂಪೆನಿಯ ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಆಗಿವೆ. ವಾಹನ, ರಿಯಾಲ್ಟಿ ಮತ್ತು ವಿದ್ಯುತ್ ಸೂಚ್ಯಂಕಗಳು ಶೇ 2ರಿಂದ 3ರಷ್ಟು ಮೇಲೇರಿದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ 0.7ರಿಂದ 1.6ರ ತನಕ ಗಳಿಕೆ ಕಂಡವು.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಅದಾನಿ ಪೋರ್ಟ್ಸ್ ಶೇ 5.81 ಬಜಾಜ್ ಆಟೋ ಶೇ 5.68 ಹೀರೋ ಮೋಟೋಕಾರ್ಪ್ ಶೇ 5.18 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 4 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 3.93
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಒಎನ್ಜಿಸಿ ಶೇ -1.59 ಅಪೋಲೊ ಆಸ್ಪತ್ರೆ ಶೇ -1.11 ಆಕ್ಸಿಸ್ ಬ್ಯಾಂಕ್ ಶೇ -0.73 ಹಿಂಡಾಲ್ಕೋ ಶೇ -0.41 ಏಷ್ಯನ್ ಪೇಂಟ್ಸ್ ಶೇ -0.16
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
Published On - 4:54 pm, Tue, 26 April 22