ವಾಷಿಂಗ್ಟನ್, ಜೂನ್ 10: ಇಲಾನ್ ಮಸ್ಕ್ಗೆ ಟೆಸ್ಲಾದ ಅಗತ್ಯ ಇರುವುದಕ್ಕಿಂತ ಹೆಚ್ಚು, ಟೆಸ್ಲಾಗೆ ಇಲಾನ್ ಮಸ್ಕ್ ಅವಶ್ಯಕತೆ ಇದೆ ಎಂದು ಕಂಪನಿಯ ಛೇರ್ವುಮನ್ ಮೊನ್ನೆ ಹೇಳಿದ್ದು ಸುದ್ದಿಯಾಗಿತ್ತು. ಈಗ ಟೆಸ್ಲಾ ಸಿಇಒ ಇಲಾನ್ ಮಸ್ಕ್ ಅವರು ಭಾರತ ಮೂಲದ ಟೆಕ್ಕಿಯಾದ ಅಶೋಕ್ ಎಲ್ಲುಸಾಮಿ (Ashok Elluswamy) ಬಗ್ಗೆ ಇದೇ ಮಾತುಗಳನ್ನಾಡಿದ್ದಾರೆ. ಎಲ್ಲುಸ್ವಾಮಿ ಇಲ್ಲದೇ ಹೋಗಿದ್ದರೆ ಎಲ್ಲಾ ಕಾರ್ ಕಂಪನಿಗಳಂತೆಯೇ ಟೆಸ್ಲಾ ಕೂಡ ಇರುತ್ತಿತ್ತು ಎಂದು ಸ್ವತಃ ಮಸ್ಕ್ ಅವರೇ ಹೇಳಿದ್ದಾರೆ. ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿಯಾಗಿದ್ದು, ಸದ್ಯ ಆಟೊ ಪೈಲಟ್ ಸಿಸ್ಟಂ ಇರುವ ಕಾರನ್ನು ಅಳವಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಕಾರು ಕ್ಷೇತ್ರದಲ್ಲಿ ಟೆಸ್ಲಾ ಮುಂಚೂಣಿಯಲ್ಲಿದೆ. ಇದರ ಶ್ರೇಯವನ್ನು ಎಲ್ಲುಸ್ವಾಮಿ ಮತ್ತು ‘ಆಸಂ’ ತಂಡಕ್ಕೆ ಮಸ್ಕ್ ಕೊಡುತ್ತಾರೆ. ತಮಿಳುನಾಡು ಮೂಲದ ಅಶೋಕ್ ಅವರು ಈಗ ಟೆಸ್ಲಾ ಎಐ/ಆಟೊಪೈಲಟ್ ಸಾಫ್ಟ್ವೇರ್ ವಿಭಾಗದ ನಿರ್ದೇಶಕರಾಗಿದ್ದಾರೆ.
‘ಟೆಸ್ಲಾ ಎಐ/ಆಟೊಪೈಲಟ್ ತಂಡಕ್ಕೆ ಸೇರಿದ ಮೊದಲ ವ್ಯಕ್ತಿ ಅಶೋಕ್. ಅಂತಿಮವಾಗಿ ಅವರು ಸಮಗ್ರ ಎಐ/ಆಟೊಪೈಲಟ್ ಸಾಫ್ಟ್ವೇರ್ ತಂಡವನ್ನು ಮುನ್ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಮತ್ತು ನಮ್ಮ ಆಸಮ್ ತಂಡ ಇಲ್ಲದೇ ಹೋಗಿದ್ದರೆ ಆಟೊನಮಿ ಸಪ್ಲೈಯರ್ಗೆ ಎದುರು ನೋಡುವಂತಹ ಮಟ್ಟದ ಒಂದು ಕಾರ್ ಕಂಪನಿ ಆಗಿರುತ್ತಿತ್ತು,’ ಎಂದು ಇಲಾನ್ ಮಸ್ಕ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಅಶೋಕ್ ಎಲ್ಲುಚಾಮಿಯನ್ನು ಉಲ್ಲೇಖಿಸಿ ಪ್ರಶಂಸಿಸಿದ್ದಾರೆ.
ಇದನ್ನೂ ಓದಿ: ಆ ಪ್ಯಾಕೇಜ್ಗೆ ನೀವು ಒಪ್ಪದಿದ್ರೆ ಇಲಾನ್ ಮಸ್ಕ್ ಬಿಟ್ಟುಹೋಗ್ತಾರೆ: ಷೇರುದಾರರನ್ನು ಎಚ್ಚರಿಸಿದ ಟೆಸ್ಲಾ ಅಧ್ಯಕ್ಷೆ
ಇದಕ್ಕೂ ಮುನ್ನ ಅಶೋಕ್ ಎಲ್ಲುಸಾಮಿ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಟೆಸ್ಲಾಗೆ ಇಲಾನ್ ಮಸ್ಕ್ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದರು.
‘ಇಲಾನ್ ಅವರ ಮಹತ್ವಾಕಾಂಕ್ಷೆ ಇಲ್ಲದೇ ಹೋಗಿದ್ದರೆ ಟೆಸ್ಲಾ ಒಂದು ಮಾಮೂಲಿಯ ಕಾರ್ ಕಂಪನಿಯಾಗಿರುತ್ತಿತ್ತು. ಭವಿಷ್ಯದಲ್ಲಿ ಸಂಪೂರ್ಣ ಸ್ವಯಂಚಾಲಿತ ಕಾರುಗಳು ಮತ್ತು ಗೃಹಬಳಕೆಯ ರೋಬೋಗಳು ಬಹಳ ಸಾಮಾನ್ಯವಾಗಿರಲಿವೆ. ಈ ಹಿಂದಿನಿಂದಲೂ ಈ ವ್ಯವಸ್ಥೆ ಇರಬೇಕಿತ್ತು ಎಂದು ಈ ಪ್ರಪಂಚ ಭಾವಿಸುತ್ತಿರುತ್ತದೆ. ಇದರ ದೂರದೃಷ್ಟಿ ಗೊತ್ತಿರುವ ಇಲಾನ್ ಮಸ್ಕ್ ಅವರಿಂದ ಇದು ಸಾಧ್ಯ. ಅಲ್ಲಿಯವರೆಗೆ ನಮಗೆ ಇಲಾನ್ ಮಸ್ಕ್ ಅವಶ್ಯಕವಾಗಿರುತ್ತಾರೆ,’ ಎಂದು ಎಲ್ಲಿಸ್ವಾಮಿ ತಮ್ಮ ಪೋಸ್ಟ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ
ತಮಿಳುನಾಡಿನ ಅಶೋಕ್ ಎಲ್ಲುಸಾಮಿ ಅವರು ಚೆನ್ನೈನಲ್ಲಿ ಬಿಇ ಮಾಡಿ, ಅಮೆರಿಕದ ಕಾರ್ನೆಜೀ ಮೆಲಾನ್ ಯೂನಿವರ್ಸಿಟಿಯಲ್ಲಿ ರೋಬೋಟಿಕ್ಸ್ ಸಿಸ್ಟಮ್ಸ್ ಡೆವಲಪ್ಮೆಂಟ್ ಕೋರ್ಸ್ ಮಾಡಿದರು. ಬಳಿಕ ವಾಬ್ಕೋ ವೆಹಿಕಲ್ ಕಂಟ್ರೋಲ್ ಸಿಸ್ಟಮ್ಸ್ ಮತ್ತು ವೋಲ್ಸ್ವಾಗನ್ ಕಂಪನಿಗಳಲ್ಲಿ ಕೆಲಸ ಮಾಡಿದರು.
ಹತ್ತು ವರ್ಷಗಳ ಹಿಂದೆ ಟೆಸ್ಲಾದ ಆಟೊಪೈಲಟ್ ತಂಡಕ್ಕೆ ಅಶೋಕ್ ಸೇರ್ಪಡೆಯಾಗಿದ್ದು. ಆ ತಂಡದ ಮೊದಲ ಸದಸ್ಯರೇ ಅವರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ