
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ (AI Technology) ಸಾಕಷ್ಟು ಉದ್ಯೋಗಗಳ ಇರಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಜನರು ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ಭೀತಿಯನ್ನು ಎಲ್ಲರೂ ಹರಡುತ್ತಿದ್ದಾರೆ. ಈ ಮಧ್ಯೆ ಇಲಾನ್ ಮಸ್ಕ್ (Elon Musk) ಅವರು ಎಐನಿಂದ ಜನರ ಕೆಲಸ ಸಮಸ್ಯೆಯೇ ನಿವಾರಣೆಯಾಗುತ್ತದೆ ಎಂದು ವಾದಿಸುತ್ತಾ ಬರುತ್ತಿದ್ದಾರೆ. ಅವರ ಪ್ರಕಾರ ಮುಂದಿನ 10-20 ವರ್ಷದಲ್ಲಿ ಮನುಷ್ಯರಿಗೆ ಅಗತ್ಯವಾಗಿರುವ ಎಲ್ಲವನ್ನೂ ಎಐ ನೋಡಿಕೊಳ್ಳುವಂತೆ ಬೆಳೆಯುತ್ತದಂತೆ.
ಇತ್ತೀಚೆಗೆ ನಡೆದ ಅಮೆರಿಕ ಸೌದಿ ಇನ್ವೆಸ್ಟ್ಮೆಂಟ್ ಫೋರಂನಲ್ಲಿ ಮಾತನಾಡುತ್ತಿದ್ದ ಇಲಾನ್ ಮಸ್ಕ್, ಎಐ ಆವಿಷ್ಕಾರಗಳಿಂದಾಗಿ ಜಗತ್ತಿನಲ್ಲಿ ಬಡತನ ಎಂಬುದೇ ಇರುವುದಿಲ್ಲ ಎಂದಿದ್ದಾರೆ. ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಜೊತೆ ಪ್ಯಾನಲ್ನಲ್ಲಿ ಮಾತನಾಡುತ್ತಾ ಇಲಾನ್ ಮಸ್ಕ್ ಅವರು ಎಐನಿಂದ ಮನುಷ್ಯನಿಗೆ ಎಂಥ ಪ್ರಯೋಜನಗಳಿವೆ ಎಂಬುದನ್ನು ವಿವರಿಸಿದ್ದಾರೆ.
ಇದನ್ನೂ ಓದಿ: 20-25 ವರ್ಷದ ಯುವಕರು ಕಲಿಯಬೇಕಾದ ಪ್ರಮುಖ ಹಣಕಾಸು ಪಾಠಗಳು
‘ಬಡತನ ನಿವಾರಿಸಲು ಬಹಳಷ್ಟು ಪ್ರಯತ್ನಗಳಾಗಿವೆ. ಅನೇಕ ಎನ್ಜಿಒಗಳ ಪ್ರಯತ್ನ ವಿಫಲವಾಗಿದೆ. ಬಡತನ ಸಮಸ್ಯೆ ನೀಗಿಸಲು ತಂತ್ರಜ್ಞಾನದಿಂದ ಮಾತ್ರವೇ ಸಾಧ್ಯ. ಎಐ ಮತ್ತು ರೋಬೋಗಳು ಮನುಷ್ಯರ ಬಡತನ ನಿವಾರಿಸಬಲ್ಲುವು. ಎಲ್ಲರೂ ಶ್ರೀಮಂತರನ್ನಾಗಿಸುವ ಏಕೈಕ ಮೂಲ ಮಾರ್ಗ ಎಂದರೆ ಅದು ಎಐ ಮತ್ತು ರೋಬೋಟಿಕ್ಸ್’ ಎಂದು ಇಲಾನ್ ಮಸ್ಕ್ ವಾದಿಸಿದ್ದಾರೆ.
ಬಡತನ ಎನ್ನುವುದು ಸಾಮಾಜಿಕ ಸಮಸ್ಯೆಯಲ್ಲ, ಅದು ಎಂಜಿನಿಯರಿಂಗ್ ಸಮಸ್ಯೆ. ಈ ಎಂಜಿನಿಯರಿಂಗ್ ಸಮಸ್ಯೆಯನ್ನು ಎಐ ಮತ್ತು ರೋಬೋಟಿಕ್ಸ್ ಮೂಲಕ ನಿವಾರಣೆ ಮಾಡಬಹುದು ಎಂಬುದು ಇಲಾನ್ ಮಸ್ಕ್ ನೀಡಿದ ವಿವರಣೆ.
ಇದನ್ನೂ ಓದಿ: ಭೂಮಿಯಾಚೆ ಡಾಟಾ ಸೆಂಟರ್ಗಳು; ಚಂದ್ರನ ಬಳಿ ಮನುಷ್ಯರ ಜುಟ್ಟು ಜನಿವಾರ?
ಮುಂದಿನ ದಿನಗಳಲ್ಲಿ ಎಐ ಮತ್ತು ರೋಬೋಗಳೇ ಎಲ್ಲಾ ಪ್ರೊಡಕ್ಟಿವ್ ಕೆಲಸಗಳನ್ನು ಮಾಡುತ್ತವೆ. ಜನರಿಗೆ ಬೇಕಿರುವ ಎಲ್ಲವನ್ನೂ ಇವು ಒದಗಿಸುತ್ತವೆ. ಜನರು ಕೆಲಸ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಟೈಮ್ ಪಾಸ್ಗೆ ಕ್ರೀಡೆಯೋ ಮತ್ತೊಂದೋ ಮಾಡಬಹುದು. ಎಲ್ಲವೂ ಸುಲಭವಾಗಿ ಸಿಗುವಾಗ ಹಣದ ಅವಶ್ಯಕತೆಯೂ ಇರೋದಿಲ್ಲ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ