ಗರಿಷ್ಠ ಮಟ್ಟ ಮುಟ್ಟಿದ ರಕ್ಷಣಾ ಕ್ಷೇತ್ರದ ಉತ್ಪಾದನೆ; ರಫ್ತು ಕೂಡ ಹೊಸ ದಾಖಲೆ
India's defence sector production hits Rs 1,50,000 crore in 25fy: ಭಾರತದ ಡಿಫೆನ್ಸ್ ಸೆಕ್ಟರ್ ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಿದೆ. 2023-24ರಲ್ಲಿ 1.27 ಲಕ್ಷ ಕೋಟಿ ರೂ ಇದ್ದ ಉತ್ಪಾದನೆ, 2024-25ರಲ್ಲಿ 1.50 ಲಕ್ಷ ಕೋಟಿ ರೂ ದಾಟಿದೆ. ರಫ್ತು ಕೂಡ 23 ಸಾವಿರ ಕೋಟಿ ರೂ ದಾಟಿದೆ. 2029ರಲ್ಲಿ ಉತ್ಪಾದನೆಯನ್ನು 3 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಗುರಿ ಇಡಲಾಗಿದೆ.

ನವದೆಹಲಿ, ನವೆಂಬರ್ 20: ಕಳೆದ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಕ್ಷೇತ್ರ (India’s defence sector) ಸಾಧಿಸಿದ ಒಟ್ಟೂ ಉತ್ಪಾದನೆ ಒಂದೂವರೆ ಲಕ್ಷ ಕೋಟಿ ರೂ ದಾಟಿದೆ. ಸರ್ಕಾರವೇ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2024-25ರಲ್ಲಿ ಭಾರತದ ಡಿಫೆನ್ಸ್ ಪ್ರೊಡಕ್ಷನ್ 1.54 ಲಕ್ಷ ಕೋಟಿ ರೂ ದಾಖಲಾಗಿದೆ. ಈ ಒಂದೂವರೆ ಲಕ್ಷ ಕೋಟಿ ರೂ ಗಡಿ ಮುಟ್ಟಿದ್ದು ಇದೇ ಮೊದಲು ಎನ್ನಲಾಗಿದೆ. ರಕ್ಷಣಾ ಕ್ಷೇತ್ರದಿಂದ ರಫ್ತು ಕೂಡ ಹೊಸ ದಾಖಲೆ ಸ್ಥಾಪಿಸಿದೆ. ದತ್ತಾಂಶದ ಪ್ರಕಾರ 2024-25ರಲ್ಲಿ 23,622 ಕೋಟಿ ರೂನಷ್ಟು ರಫ್ತಾಗಿದೆ.
ಹಿಂದಿನ ವರ್ಷದಲ್ಲಿ (2023-24) ರಕ್ಷಣಾ ವಲಯದ ಒಟ್ಟು ಉತ್ಪಾದನೆ 1,27,434 ಕೋಟಿ ರೂ ಇತ್ತು. 2014-15ರ ವರ್ಷದಕ್ಕೆ ಹೋಲಿಸಿದರೆ 2023-24ರಲ್ಲಿ ಡಿಫೆನ್ಸ್ ಪ್ರೊಡಕ್ಷನ್ ಶೇ. 174ರಷ್ಟು ಹೆಚ್ಚಾಗಿತ್ತು. ಒಟ್ಟಾರೆ ಉತ್ಪಾದನೆಯಲ್ಲಿ ಸರ್ಕಾರಿ ಉದ್ದಿಮೆಗಳ ಪಾಲು ಶೇ. 77ರಷ್ಟಿದೆ. ಖಾಸಗಿ ಉದ್ದಿಮೆಗಳ ಕೊಡುಗೆ ಶೇ 23ರಷ್ಟಿದೆ.
ಇದನ್ನೂ ಓದಿ: ಭಾರತ-ಇಸ್ರೇಲ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವೇದಿಕೆ ಸಜ್ಜು; ಮಾರ್ಗಸೂಚಿಗೆ ಎರಡೂ ದೇಶಗಳಿಂದ ಸಹಿ
ಉತ್ಪಾದನೆಯಲ್ಲಿ ಸರ್ಕಾರಿ ಉದ್ದಿಮೆಗಳು ಮೇಲುಗೈ ಸಾಧಿಸಿದರೆ, ರಫ್ತಿನಲ್ಲಿ ಖಾಸಗಿ ವಲಯದ ಕೈ ಮೇಲಾಗಿದೆ. ರಕ್ಷಣಾ ಕ್ಷೇತ್ರದಿಂದ ರಫ್ತಾದ 23,622 ಕೋಟಿ ರೂ ಪೈಕಿ ಪ್ರೈವೇಟ್ ಸೆಕ್ಟರ್ ಕಂಪನಿಗಳು 15,233 ಕೋಟಿ ರೂ ನಷ್ಟು ರಫ್ತು ಮಾಡಿದೆ. ಈ ಕ್ಷೇತ್ರದ ಸರ್ಕಾರಿ ಉದ್ದಿಮೆಗಳು ಮಾಡಿದ ರಫ್ತು 8,389 ಕೋಟಿ ರೂ.
2024-25ರಲ್ಲಿ 193 ಡಿಫೆನ್ಸ್ ಒಪ್ಪಂದಗಳು
2024-25ರಲ್ಲಿ ಅತಿಹೆಚ್ಚು ಡಿಫೆನ್ಸ್ ಕಾಂಟ್ರಾಕ್ಟ್ಗಳಾಗಿವೆ. 2,09,050 ಕೋಟಿ ರೂ ಮೌಲ್ಯದ 193 ಒಪ್ಪಂದಗಳು ಡಿಫೆನ್ಸ್ ಕ್ಷೇತ್ರದಲ್ಲಿ ಆಗಿವೆ. ಈ ಪೈಕಿ ಭಾರತದ ಉದ್ದಿಮೆಗಳೇ 177 ಗುತ್ತಿಗೆಗಳನ್ನು ಪಡೆದಿವೆ. ಈ ಡೀಲ್ಗಳ ಒಟ್ಟುಮೌಲ್ಯ 1.69 ಲಕ್ಷ ಕೋಟಿ ರೂ ಎನ್ನಲಾಗಿದೆ.
ಇದನ್ನೂ ಓದಿ: ಇನ್ನು 10-20 ವರ್ಷದಲ್ಲಿ ಜಗತ್ತಲ್ಲಿ ಬಡತನವೇ ಇರಲ್ಲ; ಜನರು ಕೆಲಸ ಮಾಡಲೇಬೇಕಿಲ್ಲ: ಇಲಾನ್ ಮಸ್ಕ್ ಭವಿಷ್ಯ
ಸರ್ಕಾರಕ್ಕೆ 3 ಲಕ್ಷ ಕೋಟಿ ರೂ ಉತ್ಪಾದನೆಯ ಗುರಿ
2024-25ರಲ್ಲಿ ಡಿಫೆನ್ಸ್ ಕ್ಷೇತ್ರದ ಉತ್ಪಾದನೆ ಒಂದೂವರೆ ಲಕ್ಷ ಕೋಟಿ ರೂ ಇದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಇದನ್ನು ಎರಡು ಪಟ್ಟು ಹೆಚ್ಚಿಸುವ ಗುರಿ ಸರ್ಕಾರದ್ದಾಗಿದೆ. 2029ರೊಳಗೆ ಭಾರತದ ಡಿಫೆನ್ಸ್ ಉತ್ಪಾದನೆ 3 ಲಕ್ಷ ಕೋಟಿ ರೂ ಆಗಬೇಕೆನ್ನುವ ನಿರೀಕ್ಷೆ ಇಡಲಾಗಿದೆ. ರಫ್ತು ಕೂಡ 50,000 ಕೋಟಿ ರೂ ದಾಟಿಸುವ ಗುರಿ ಇದೆ.
ಎಚ್ಎಎಲ್, ಬಿಇಎಲ್, ಭಾರತ್ ಡೈನಾಮಿಕ್ಸ್, ಭಾರತ್ ಫೋರ್ಜ್, ಪಾರಸ್ ಡಿಫೆನ್ಸ್ ಮೊದಲಾದ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಮಿಂಚುತ್ತಿವೆ. ಷೇರು ಮಾರುಕಟ್ಟೆಯೂ ಇವು ಸ್ಟಾರ್ಗಳಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




