AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 8ರ ದಿನಭವಿಷ್ಯ

Daily Numerology February 08: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 8ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 8ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
ಸ್ವಾತಿ ಎನ್​ಕೆ| Edited By: |

Updated on: Feb 08, 2026 | 12:30 AM

Share

ನಿಮ್ಮಿಂದ ಈ ದಿನ ಸಾಧ್ಯವಾದಲ್ಲಿ ಗೋ ಗ್ರಾಸವನ್ನು ನೀಡಿ. ಒಂದು ವೇಳೆ ಇದನ್ನು ನೇರವಾಗಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಾದಲ್ಲಿ ಆನ್ ಲೈನ್ ಮೂಲಕವಾಗಿ ಗೋಗ್ರಾಸ ಸೇವೆಗೆ ದೇಣಿಗೆ ನೀಡಬಹುದು ಎಂದಾದಲ್ಲಿ ಹಾಗೂ ಅದು ಸಾಧ್ಯವೂ ಆದಲ್ಲಿ ನೀಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಪ್ರೀತಿ- ಪ್ರೇಮದಲ್ಲಿ ಅಂದುಕೊಳ್ಳದ ಕೆಲವು ಬೆಳವಣಿಗೆಗಳು ನಡೆಯಲಿವೆ. ಈ ಹಿಂದೆ ಆಗಿದ್ದ ಕೆಲವು ಘಟನೆಗಳಿಂದಾಗಿ ಯಾರದೋ ಮಾತು, ಟೀಕೆ, ಆಕ್ಷೇಪಗಳಿಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಯಾರೇ ನಿಮ್ಮ ಕೆಲಸದ ಬಗ್ಗೆ ಆಕ್ಷೇಪ ಹೇಳಿದರೂ ಅದನ್ನು ತೋರಿಸುವಂತೆ ನಯವಾಗಿಯೇ ಕೇಳಿ. ಹಾಗೂ ಅವರು ನಿಜವಾಗಿಯೂ ತಪ್ಪುಗಳನ್ನು ತೋರಿಸಿದ್ದೇ ಆದಲ್ಲಿ ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಯಾವುದೇ ಕಾರಣಕ್ಕೂ ಸಿಟ್ಟಿನಿಂದ ಕೂಗಾಟ- ಕಿರುಚಾಟ ಮಾಡಬೇಡಿ. ಹೀಗೆ ಮಾಡಿದಲ್ಲಿ ನಿಮ್ಮ ವರ್ಚಸ್ಸು ಶಾಶ್ವತವಾಗಿ ಪೆಟ್ಟು ತಿನ್ನುವ ಅಪಾಯಗಳಿವೆ. ವಿದೇಶಗಳಲ್ಲಿ ಉದ್ಯೋಗಲ್ಲೆ ಪ್ರಯತ್ನ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶಗಳು ಇರುತ್ತವೆ. ನೀವಾಗಿಯೇ ಆಡಿದ ಮಾತುಗಳು ಸಮಸ್ಯೆಗಳಾಗಿ ತಲೆ ಎತ್ತುವ ಸಾಧ್ಯತೆಗಳಿವೆ. ನಿಮ್ಮ ಪರವಾಗಿ ಯಾರಾದರೂ ಮಾತನಾಡುವಾಗ ನೀವು ಸುಮ್ಮನಿದ್ದು ಬಿಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ತಂದೆ- ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಏನಾದರೂ ಇದ್ದಲ್ಲಿ ಪರಿಣತ- ತಜ್ಞ ವೈದ್ಯರ ನೆರವು ನಿಮ್ಮ ಪಾಲಿಗೆ ದೊರೆಯಲಿದೆ. ಆತಂಕಗಳು ದೂರವಾಗುವುದಕ್ಕೆ ಹಿರಿಯರು ಸಹಕಾರ ನೀಡಲಿದ್ದಾರೆ. ನಿಮ್ಮ ಅದೃಷ್ಟವು ಈ ದಿನ ಅಚ್ಚರಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ ಕೆಲಸಕ್ಕೆ ಮೆಚ್ಚುಗೆ ಎಂಬಂತೆ ಅದೇ ಕೆಲಸಕ್ಕೆ ಸಂಬಂಧಿಸಿದವರು ಹುಡುಕಿಕೊಂಡು ಬಂದು, ನಿಮಗೆ ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Follow Us
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ