AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು?

Nandi Hills Monsoon Marathon: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಆಯೋಜಿಸಲಾಗಿದ್ದ 'ಮಾನ್ಸೂನ್ ಮ್ಯಾರಥಾನ್' ಓಟದ ವೇಳೆ 31 ವರ್ಷದ ಕ್ರೀಡಾಪಟುವೊಬ್ಬರು ದಿಢೀರ್ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. 10 ಕಿಲೋಮೀಟರ್ ಹಾಗೂ 21 ಕಿಲೋಮೀಟರ್ ವಿಭಾಗಗಳಲ್ಲಿ ಈ ಮ್ಯಾರಥಾನ್‌ ನಡೆದಿದ್ದು, 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು?
ದುರಂತ ಅಂತ್ಯಕಂಡ ಕ್ರೀಡಾಪಟುImage Credit source: Tv9 Kannada
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Aug 09, 2026 | 1:12 PM

Share

ಮುಖ್ಯಾಂಶಗಳು

  • ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ಕ್ರೀಡಾಪಟು ಸಾವು
  • ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಬಗ್​ಗೆ ಶಂಕೆ ವ್ಯಕ್ತ
  • ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಅಮನ್ ದೀಪ್ ಸಿಂಗ್

ಚಿಕ್ಕಬಳ್ಳಾಪುರ, ಆಗಸ್ಟ್​ 09: ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ಕ್ರೀಡಾಪಟು ಓರ್ವ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅಮನ್ ದೀಪ್ ಸಿಂಗ್ ಜಗಡೆ(31) ಮೃತ ದುರ್ದೈವಿಯಾಗಿದ್ದು, ಹೃದಯಾಘಾತದಿಂದ ಅಸುನೀಗರುವ ಸಾಧ್ಯತೆ ಅಂದಾಜಿಸಲಾಗಿದೆ. 21 ಕಿಲೋಮೀಟರ್‌ ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದ ಅಮನ್​, ನಂದಿಗಿರಿಧಾಮದ ಬೆಟ್ಟದ ಮೇಲೆ ಕುಸಿದುಬಿದ್ದಿದ್ದಾರೆ. ತಕ್ಷಣ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಅಮನ್ ದೀಪ್ ಸಿಂಗ್ ಪಂಜಾಬ್​​ ಮೂಲದವರಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದರು. ಮಾನ್ಯತಾ ಟೆಕ್​ ಪಾರ್ಕ್​ನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು ಎಂಬುದು ತಿಳಿದುಬಂದಿದೆ.

ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದ ಅಮನ್ ದೀಪ್

ಅಮನ್ ದೀಪ್ ಸಿಂಗ್, 21 ಕೀಲೊ ಮೀಟರ್ ಕ್ರಮಿಸಬೇಕಿದ್ದ ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​​ನ ಅರ್ಧದಷ್ಟು ಮಾತ್ರ ಓಡಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಮೃತನ ಪತ್ನಿ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದು, ಮೃತದೇಹ ಸದ್ಯ ಆಸ್ಪತ್ರೆಯಲ್ಲಿಯೇ ಇದೆ. ಇನ್ನು ಮ್ಯಾರಥಾನ್​​ ಸಂಬಂಧ ಇನ್ಸ್ಟಾಗ್ರಾಮ್​​ ಪೋಸ್ಟ್​​ ಮಾಡಿದ್ದ ಅಮನ್ ದೀಪ್ ಸಿಂಗ್ 21 ಕೀಲೋ ಮೀಟರ್ ರನ್ನಿಂಗ್​​ನಲ್ಲಿ ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದರು ಎಂಬುದೂ ಗೊತ್ತಾಗಿದೆ.

ಇದನ್ನೂ ಓದಿ: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

4,500ಕ್ಕೂ ಹೆಚ್ಚುಮಂದಿ ಭಾಗಿ

10 ಕಿಲೋಮೀಟರ್ ಹಾಗೂ 21 ಕಿಲೋಮೀಟರ್ ವಿಭಾಗಗಳಲ್ಲಿ ಈ ಮ್ಯಾರಥಾನ್‌ ನಡೆದಿದ್ದು, 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ, ಯುವಜನ ಕ್ರೀಡಾ ಮತ್ತು ಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:13 pm, Sun, 9 August 26

Follow Us
ಜಿಬಿಎ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾದ ಸಚಿವ ಕೃಷ್ಣಬೈರೇಗೌಡ
ಜಿಬಿಎ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾದ ಸಚಿವ ಕೃಷ್ಣಬೈರೇಗೌಡ
'ತಪ್ಪಿಗೆ ಜಾತಿಯ ಬಣ್ಣ ಹಚ್ಚುವುದು ಸರಿಯಲ್ಲ'
'ತಪ್ಪಿಗೆ ಜಾತಿಯ ಬಣ್ಣ ಹಚ್ಚುವುದು ಸರಿಯಲ್ಲ'
ಗೃಹ ಸಚಿವರನ್ನ ಕೋರ್ಟ್​​ಗೆ ಕರೆಯಿಸಿದ ಆರ್​​ಎಸ್​ಎಸ್​ ಕೇಸ್
ಗೃಹ ಸಚಿವರನ್ನ ಕೋರ್ಟ್​​ಗೆ ಕರೆಯಿಸಿದ ಆರ್​​ಎಸ್​ಎಸ್​ ಕೇಸ್
ನಾಗೇಂದ್ರ ರಾಜೀನಾಮೆ ಹಿಂದಿನ ಮರ್ಮವನ್ನು ಬಿಚ್ಚಿಟ್ಟ ಸಚಿವ ಬಾಲಕೃಷ್ಣ
ನಾಗೇಂದ್ರ ರಾಜೀನಾಮೆ ಹಿಂದಿನ ಮರ್ಮವನ್ನು ಬಿಚ್ಚಿಟ್ಟ ಸಚಿವ ಬಾಲಕೃಷ್ಣ
ಕಣ್ಣೂರಿನಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ
ಕಣ್ಣೂರಿನಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ
ನಾಗೇಂದ್ರ ಜತೆಗೆ ಜನಾರ್ದನ ರೆಡ್ಡಿ. ರೇಣುಕಾಚಾರ್ಯಗೂ ಸಂಕಷ್ಟ?
ನಾಗೇಂದ್ರ ಜತೆಗೆ ಜನಾರ್ದನ ರೆಡ್ಡಿ. ರೇಣುಕಾಚಾರ್ಯಗೂ ಸಂಕಷ್ಟ?
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ