AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ

WhatsApp testing age verification feature to comply with India's DPDP act: ವಾಟ್ಸಾಪ್ ತನ್ನ ಬಳಕೆದಾರರಿಂದ ವಯಸ್ಸಿನ ದೃಢೀಕರಣ ಪಡೆಯುವ ಹೊಸ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಭಾರತ ಸರ್ಕಾರದ ಹೊಸ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಗೆ ತಾಳೆಯಾಗಲು ಈ ನಡೆ ಇಡಲಾಗಿದೆ. ಕೆಲ ಬಳಕೆದಾರರಲ್ಲಿ ಈ ಫೀಚರ್ ಶುರುವಾಗಿದ್ದು, ಮುಂಬರುವ ದಿನಗಳಲ್ಲಿ ಎಲ್ಲರಿಗೂ ಅನ್ವಯವಾಗಲಿದೆ.

ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ
ವಾಟ್ಸಾಪ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 09, 2026 | 11:58 AM

Share

ಮುಖ್ಯಾಂಶಗಳು

  • ವಾಟ್ಸಾಪ್ ತನ್ನ ಬಳಕೆದಾರರಿಂದ ವಯಸ್ಸಿನ ದೃಢೀಕರಣದ ಹೊಸ ಫೀಚರ್ ಪರೀಕ್ಷಿಸುತ್ತಿದೆ.
  • ಸರ್ಕಾರದ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯ್ದೆಗೆ ತಾಳೆಯಾಗಲು ಈ ನಡೆ ಇಡಲಾಗಿದೆ.
  • ಕೆಲ ಬಳಕೆದಾರರಲ್ಲಿ ಈ ಫೀಚರ್ ಶುರುವಾಗಿದ್ದು, ಮುಂಬರುವ ದಿನಗಳಲ್ಲಿ ಎಲ್ಲರಿಗೂ ಅನ್ವಯವಾಗಲಿದೆ.

ನವದೆಹಲಿ, ಆಗಸ್ಟ್ 9: ಮೆಟಾ (Meta) ಒಡೆತನದ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸಾಪ್ (WhatsApp), ಭಾರತದಲ್ಲಿ ತನ್ನ ಬಳಕೆದಾರರಿಗೆ ಜನ್ಮ ದಿನಾಂಕವನ್ನು (Date of Birth) ಸೇರಿಸಲು ಅವಕಾಶ ನೀಡುವ ಹೊಸ ಫೀಚರ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಭಾರತ ಸರ್ಕಾರ ಜಾರಿಗೆ ತರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆಗೆ ಬದ್ಧವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ.

ಹುಟ್ಟಿದ ದಿನಾಂಕದ ಮಾಹಿತಿ: ಪ್ರಸ್ತುತ ಕೆಲ ಬಳಕೆದಾರರಿಗೆ ‘Add your date of birth’ ಎಂಬ ಪ್ರಾಂಪ್ಟ್ (Prompt) ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಇದು ಅವಕಾಶ ನೀಡುತ್ತದೆ. ಪರೀಕ್ಷೆಯ ಹಂತದಲ್ಲಿ ಈ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ. ಬಳಕೆದಾರರು ತಮ್ಮ ಹುಟ್ಟಿದ ದಿನಾಂಕವನ್ನು ನೀಡದೆಯೂ ವಾಟ್ಸಾಪ್ ಬಳಸುವುದನ್ನು ಮುಂದುವರಿಸಬಹುದು.

ಇದನ್ನೂ ಓದಿ: ಮಹೀಂದ್ರಾ ಗ್ರೂಪ್​ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ

ಖಾಸಗಿತನಕ್ಕೆ ಧಕ್ಕೆ ಇಲ್ಲ ಎಂದ ಮೆಟಾ

ಬಳಕೆದಾರರ ವಯಸ್ಸಿನ ವಿವರಗಳು ಖಾಸಗಿಯಾಗಿದ್ದು, ಇದನ್ನು ಇತರ ಯಾವುದೇ ವಾಟ್ಸಾಪ್ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

DPDP ಕಾಯ್ದೆಯ ನಿಯಮ: ಭಾರತದ ಡಿಪಿಡಿಪಿ (DPDP) ಕಾಯ್ದೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಬಳಸುವ ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಸೂಕ್ತ ವಯಸ್ಸು ದೃಢೀಕರಣ (Age-verification) ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: ಎಂಡಿಆರ್ ಶುಲ್ಕ ಕೇವಲ ಶೇ. 0.04? ದೊಡ್ಡ ವ್ಯಾಪಾರಿಗಳಿಗೆ ಮಾತ್ರವಾ ಈ ಶುಲ್ಕ? ಯಾರು ದೊಡ್ಡ ವ್ಯಾಪಾರಿಗಳು?

ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:37 am, Sun, 9 August 26

Follow Us
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..