AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೀಂದ್ರಾ ಗ್ರೂಪ್​ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ

Novavayu Aerospace, Mahindra Group's new airplane company: ಆನಂದ್ ಮಹೀಂದ್ರ ಒಡೆತನ ಮಹೀಂದ್ರ ಗ್ರೂಪ್​ನಿಂದ ನೋವಾವಾಯು ಏರೋಸ್ಪೇಸ್ ಎನ್ನುವ ಹೊಸ ವೈಮಾನಿಕ ಸಂಸ್ಥೆಯ ಸ್ಥಾಪನೆಯಾಗಿದೆ. ಜುಲೈ 29ರಂದು ಇದರ ನೊಂದಣಿಯಾಗಿದ್ದು, ಮುಂಬೈನಲ್ಲಿ ಮುಖ್ಯ ಕಚೇರಿ ಇದೆ. ರಕ್ಷಣಾ ಕ್ಷೇತ್ರಕ್ಕೆ ವಿಮಾನಗಳು ಮತ್ತು ಬಿಡಿಭಾಗಗಳನ್ನು ಪೂರೈಸುವ ಉದ್ದೇಶದಿಂದ ನೋವಾವಾಯು ಸ್ಥಾಪನೆಯಾಗಿದೆ ಎನ್ನಲಾಗಿದೆ.

ಮಹೀಂದ್ರಾ ಗ್ರೂಪ್​ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ
ಮಹೀಂದ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2026 | 10:41 PM

Share

ನವದೆಹಲಿ, ಆಗಸ್ಟ್ 7: ಪ್ರಸಿದ್ಧ ವಾಹನ ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ವಿಮಾನ ಹಾಗೂ ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಹೊಸ ಸಂಸ್ಥೆಯೊಂದನ್ನು ಸ್ಥಾಪಿಸಿದೆ. ಡಿಫೆನ್ಸ್ ಸೆಕ್ಟರ್​ಗೆ ಪೂರೈಕೆ ಮಾಡುವ ಉದ್ದೇಶದಿಂದ ‘ನೋವಾವಾಯು ಏರೋಸ್ಪೇಸ್ ಲಿಮಿಟೆಡ್’ (Novavayu Aerospace Limited) ಎಂಬ ನೂತನ ಅಂಗಸಂಸ್ಥೆಯನ್ನು ಪ್ರಾರಂಭಿಸಿದೆ. ಮಹೀಂದ್​ರ ಗ್ರೂಪ್​ಗೆ ಸೇರಿದ ಮಹೀಂದ್ರ ಅಡ್ವಾನ್ಸ್ಡ್ ಸಿಸ್ಟಮ್ಸ್ ಮಾಲಕತ್ವದ ಮಹೀಂದ್ರ ಡಿಫೆನ್ಸ್ ಸಿಸ್ಟಮ್ಸ್​ನ (Mahindra Defence Systems) ಅಂಗಸಂಸ್ಥೆಯಾಗಿ ಈ ಹೊಸ ಕಂಪನಿಯನ್ನು 2026ರ ಜುಲೈ 29ರಂದು ನೊಂದಾಯಿಸಲಾಗಿದ್ದು, ಮುಂಬೈನಲ್ಲಿ ಮುಖ್ಯ ಕಚೇರಿ ಇದೆ.

ರಕ್ಷಣಾ ಕ್ಷೇತ್ರಕ್ಕಾಗಿ ವಿಮಾನಗಳ ತಯಾರಿಕೆ (Aircraft Manufacturing), ಏರೋಸ್ಪೇಸ್ ಉತ್ಪನ್ನಗಳು ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನೋವಾವಾಯು ಕಂಪನಿಯನ್ನು ₹1 ಕೋಟಿ ಅಧಿಕೃತ ಶೇರು ಬಂಡವಾಳದೊಂದಿಗೆ ಪ್ರಾರಂಭಿಸಲಾಗಿದೆ.

ಬೆಂಗಳೂರಿನ ಉತ್ಪಾದನಾ ಘಟಕದ ಬೆಂಬಲ

ಆನಂದ್ ಮಹೀಂದ್ರ ಒಡೆತನದ ಮಹೀಂದ್ರಾ ಗ್ರೂಪ್ ಈಗಾಗಲೇ ಬೆಂಗಳೂರಿನ ಬಳಿ ಬೃಹತ್ತಾದ ‘ಮಹೀಂದ್ರಾ ಏರೋಸ್ಟ್ರಕ್ಚರ್ಸ್’ (Mahindra Aerostructures) ಘಟಕವನ್ನು ಹೊಂದಿದ್ದು, ಏರ್‌ಬಸ್ (Airbus) ಹೆಲಿಕಾಪ್ಟರ್‌ಗಳ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಹೊಸ ‘ನೋವಾವಾಯು’ ಸಂಸ್ಥೆಯು ಈ ಅನುಭವವನ್ನು ಬಳಸಿಕೊಂಡು ಸಂಪೂರ್ಣ ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ, ನೋವಾವಾಯು ಯಾವ ಉತ್ಪನ್ನಗಳನ್ನು ತಯಾರಿಸುತ್ತದೆ, ಯಾರಿಗೆ ಪೂರೈಕೆ ಮಾಡುತ್ತದೆ ಎಂಬುದು ಇನ್ನೂ ನಿರ್ಧಾರವಾದಂತಿಲ್ಲ. ನೊಂದಣಿ ಪ್ರಕ್ರಿಯೆ ಈಗಷ್ಟೇ ಮುಗಿದಿರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬಹುದು.

ಇದನ್ನೂ ಓದಿ: 2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ

ಬ್ರೆಜಿಲ್​ನ ಎಂಬ್ರೇರ್ ಜೊತೆ ಮಹೀಂದ್ರ ಒಪ್ಪಂದ

ಕಳೆದ ವರ್ಷ (2025) ಅಕ್ಟೋಬರ್ ತಿಂಗಳಲ್ಲಿ ಬ್ರೆಜಿಲ್‌ನ ಎಂಬ್ರೇರ್ (Embraer) ಸಂಸ್ಥೆಯೊಂದಿಗೆ ‘C-390 ಮಿಲಿಟರಿ ಸಾರಿಗೆ ವಿಮಾನ’ ತಯಾರಿಕೆಗೆ ಸಂಬಂಧಿಸಿದಂತೆ ಮಹೀಂದ್ರಾ ಒಪ್ಪಂದ ಮಾಡಿಕೊಂಡಿತ್ತು. ಇದೇ ಉದ್ದೇಶಕ್ಕೆ ನೋವಾವಾಯು ಏರೋಸ್ಪೇಸ್ ಅನ್ನು ಆರಂಭಿಸಲಾಗಿದೆಯಾ ಎನ್ನುವ ಅನುಮಾನ ಇದೆಯಾದರೂ ಅದು ಖಚಿತವಿಲ್ಲದ ಸುದ್ದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್