ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನೂ ಯಾವುದನ್ನೂ ನಂಬಲಾರರು
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಭಾನುವಾರ ವಿವಾಹ ಮಾತುಕತೆ, ಉದ್ಯಮ ವಿಸ್ತಾರ, ಪ್ರಯತ್ನ, ಸಾಹಸ ಕಾರ್ಯ, ನಿಂದನೆ, ವಾಹನ ಮಾರಾಟ, ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ಅನಿರೀಕ್ಷಿತ ಸುದ್ದಿಯು ನಿಮ್ಮ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ಇನ್ನೊಬ್ಬರನ್ನು ದೂರುತ್ತ ನಿಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಬಡ್ತಿಯಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು. ಮಕ್ಕಳ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸ್ತ್ರೀಯರ ಸಹವಾಸವು ಅಧಿಕವಾಗಿರುವುದು.
ವೃಷಭ ರಾಶಿ:
ಸಂಗಾತಿಯ ನಡುವಿನ ಮಾತುಕತೆಗಳು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು. ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ಅಧಿಕ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು.
ಮಿಥುನ ರಾಶಿ:
ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ಮಿತವಾದ ಆಹಾರಸೇವನೆಯನ್ನು ಇಟ್ಟುಕೊಳ್ಳಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಅಸ್ಪಷ್ಟ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಯಾರ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಹುಣ್ಣನ್ನು ಕೆರದು ಗಾಯ ಮಾಡಿಕೊಳ್ಳುವುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ಪ್ರಯತ್ನ ಮುಂದುವರಿಯಲಿ.
ಕರ್ಕಾಟಕ ರಾಶಿ:
ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ನಾನಾ ರೀತಿಯ ಸೌಲಭ್ಯಗಳು ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವನ್ನು ಅನ್ಯರು ಆಕ್ರಮಿಸಿಕೊಳ್ಳಬಹುದು. ಚೋರಭೀತಿಯು ನಿಮಗೆ ಆತಂಕಪಡುವಿರಿ. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು.
ಸಿಂಹ ರಾಶಿ:
ಉದ್ವೇಗಕ್ಕೆ ಸಿಕ್ಕಿ ನಿಮ್ಮ ವರ್ತನೆಯಿಂದ ಎಲ್ಲರೂ ನಕ್ಕಾರು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ಯಾರನ್ನು ವಂಚಿಸಿದರೂ ಸಮಯವನ್ನು ವಂಚಿಸಲಾಗದು. ನಿಮ್ಮನ್ನು ಸ್ಥಾನದಿಂದ ಕೆಳಗೆ ಹಾಕಲು ನೋಡಬಹುದು.
ಕನ್ಯಾ ರಾಶಿ:
ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನ ಬೇಕು. ಮಕ್ಕಳಿಗೆ ಮಾಡಿದ ಎಲ್ಲವ ಕರ್ತವ್ಯಗಳು ಫಲಿಸಿದ ಸಂತೋಷ ಸಿಗಲಿದೆ. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ವ್ಯಾಯಾಮದ ಮೂಲಕ ನಿಮ್ಮ ದುರ್ಬಲ ದೇಹವನ್ನು ಗಟ್ಟಿ ಮಾಡಿಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುವುದು.
ತುಲಾ ರಾಶಿ:
ನಿಮ್ಮ ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಅನಾರೋಗ್ಯದ ನಿಮಿತ್ತ ಧನಸಹಾಯ ಸಿಗುವುದು. ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು.
ವೃಶ್ಚಿಕ ರಾಶಿ:
ಬಯಕೆಯು ಪೂರ್ಣವಾಗುವ ಸಾಧ್ಯತೆ ಹೆಚ್ಚು. ಬಹಳ ದಿನಗಳ ಪ್ರಯಾಣದ ಅನಂತರ ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಆರ್ಥಿಕ ಸಮಸ್ಯೆಗಳನ್ನು ನೀವು ಸಂಗಾತಿಯ ಹಂಚಿಕೊಳ್ಳಲು ಹಿಂಜರಿಯುವಿರಿ. ನಿಮ್ಮ ಜೀವನದ ದಿನಚರಿಯನ್ನು ವೈವಿಧ್ಯಮಯವಾಗಿ ಮಾಡಿಕೊಳ್ಳುವಿರಿ. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ.
ಧನು ರಾಶಿ:
ಇಂದು ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಜಾಣ್ಮೆಯಿಂದ ವ್ಯವಹರಿಸಿ, ಎದುರಿನವರನ್ನು ಇಕ್ಕಟ್ಟಿಗೆ ಸಿಲುಕಿಸುವಿರಿ. ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ವೈದ್ಯ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು.
ಮಕರ ರಾಶಿ:
ಇನ್ನೊಬ್ಬರ ಅವಶ್ಯಕತೆಗಳನ್ನು ನೀವು ಪೂರೈಸುವ ಹೊಣೆ ಹೊರುವಿರಿ. ಇಂದು ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಟ್ಟು ಅಲಂಕಾರಕ್ಕಾಗಿ ಸಮಯವಿಡುವಿರಿ. ಆಸ್ತಿಯ ಸಂರಕ್ಷಣೆಗೆ ದಾರಿಯನ್ನು ಹುಡುಕುವಿರಿ. ಇಂದು, ನಿಮ್ಮ ಒಡಹುಟ್ಟಿದವರು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಸಂಪರ್ಕಿಸಬಹುದು. ನೋವುಗಳನ್ನೇ ನೆನಪಿಸಿಕೊಳ್ಳುವುದರಲ್ಲಿ ಅರ್ಥವಿರದು.
ಕುಂಭ ರಾಶಿ:
ಆರ್ಥಿಕ ಅಡೆತಡೆಗಳು ಇಂದು ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗುವುದು. ಎಲ್ಲರಿಂದ ದೂರಾಗುವ ಸ್ಥಿತಿಯನ್ನು ತಂದುಕೊಳ್ಳಬಹುದು. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ, ಹಿರಿಯರಿಂದ ಉಪದೇಶ ಪ್ರಾಪ್ತಿ. ಅನಾರೋಗ್ಯ ಅತಿಯಾದರೆ ವೈದ್ಯರ ಸಲಹೆಯನ್ನು ಪಡೆಯಿರಿ.
ಮೀನ ರಾಶಿ:
ಆಕಸ್ಮಿಕವಾಗಿ ಹಣದ ವ್ಯಯವೂ ಆಗಲಿದ್ದು ಮನಸ್ಸಿಗೆ ಮತ್ತಷ್ಟು ನೋವು. ನಿಮ್ಮ ಮನಸ್ಸಿನ ಹಾಗೂ ದೈಹಿಕ ಚೈತನ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಮಯವನ್ನು ಕ್ರೀಡೆಗೆ ಮೀಸಲಿಡುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿ ಬಂದರೆ ಕಷ್ಟವಾಗುವುದು. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಮಾನಸಿಕವಾಗಿ ಕುಗ್ಗುವಿರಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು 16:59 – 18:26, ಯಮಗಂಡ ಕಾಲ 12:39 – 14:05, ಗುಳಿಕ ಕಾಲ 15:32 – 16:59
-ಲೋಹಿತ ಹೆಬ್ಬಾರ್ – 8762924271 (what’s app only)
