AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕಕ್ಕೆ ಗ್ರೇಟ್ ನ್ಯೂಸ್: ಟ್ರೇಡ್ ಡೀಲ್ ಬಗ್ಗೆ ಪ್ರಧಾನಿ ಮೋದಿ ಹರ್ಷ, ಟ್ರಂಪ್ ಬಗ್ಗೆ ಮೆಚ್ಚುಗೆ ಮಾತು

ಭಾರತ-ಅಮೆರಿಕಾ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವು ‘ಮೇಕ್ ಇನ್ ಇಂಡಿಯಾ’ಗೆ ಬಲ ನೀಡಿ, ಭಾರತೀಯ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಹೂಡಿಕೆ ಮತ್ತು ತಂತ್ರಜ್ಞಾನ ಸಹಭಾಗಿತ್ವ ವಿಸ್ತರಿಸಲಿದೆ ಎಂದಿದ್ದಾರೆ.

ಭಾರತ-ಅಮೆರಿಕಕ್ಕೆ ಗ್ರೇಟ್ ನ್ಯೂಸ್: ಟ್ರೇಡ್ ಡೀಲ್ ಬಗ್ಗೆ ಪ್ರಧಾನಿ ಮೋದಿ ಹರ್ಷ, ಟ್ರಂಪ್ ಬಗ್ಗೆ ಮೆಚ್ಚುಗೆ ಮಾತು
ಪ್ರಧಾನಿ ಮೋದಿ ಹರ್ಷ, ಟ್ರಂಪ್Image Credit source: TV9 Network
Ganapathi Sharma
|

Updated on: Feb 07, 2026 | 10:03 AM

Share

ನವದೆಹಲಿ, ಫೆಬ್ರವರಿ 7: ಭಾರತ ಹಾಗೂ ಅಮೆರಿಕ ನಡುವೆ ನಡೆದಿರುವ ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ (Interim Trade Agreement) ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಅಮೆರಿಕದ ಪಾಲಿಗೆ ಈ ಒಪ್ಪಂದ ‘ಗ್ರೇಟ್ ನ್ಯೂಸ್’ ಎಂದು ಅವರು ಬಣ್ಣಿಸಿದ್ದಾರೆ. ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ತಾಣದಲ್ಲಿ ವಿವರಗಳನ್ನು ನೀಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪೀಯೂಷ್ ಗೋಯಲ್ ಹಂಚಿಕೊಂಡಿರುವ ಮಾಹಿತಿಯನ್ನು ಶೇರ್ ಮಾಡಿರುವ ಪ್ರಧಾನಿ, ಇದೊಂದು ಮಹತ್ವದ ಒಪ್ಪಂದವಾಗಿದೆ. ಇದರಿಂದ ಭಾರತ ಹಾಗೂ ಅಮೆರಿಕಕ್ಕೆ ಒಳಿತಾಗಲಿದೆ ಎಂದಿದ್ದಾರೆ.

ಎರಡು ದೇಶಗಳ ನಡುವಣ ಸಂಬಂಧಗಳ ಸುಧಾರಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೋರಿದ ವೈಯಕ್ತಿಕ ಬದ್ಧತೆಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಒಪ್ಪಂದವು ಎರಡೂ ದೇಶಗಳ ನಡುವಣ ಗಾಢವಾದ ಬಾಂಧವ್ಯ, ಪರಸ್ಪರ ನಂಬಿಕೆ ಮತ್ತು ಸಹಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ವ್ಯಾಪಾರ ಒಪ್ಪಂದ ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಬಲ ನೀಡಲಿದೆ. ಭಾರತೀಯ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್ ಉದ್ಯಮಿಗಳು ಮತ್ತು ಮೀನುಗಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ ಎಕ್ಸ್ ಸಂದೇಶ

ಈ ಒಪ್ಪಂದದಿಂದ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಮೋದಿ ತಿಳಿಸಿದ್ದಾರೆ. ಎರಡೂ ದೇಶಗಳು ಹೊಸ ಆವಿಷ್ಕಾರವನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಈ ಒಪ್ಪಂದದ ಮೂಲಕ ಹೂಡಿಕೆ ಹಾಗೂ ತಂತ್ರಜ್ಞಾನ ಸಹಭಾಗಿತ್ವ ಇನ್ನಷ್ಟು ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ನಂಬಿಕಸ್ಥ ಮತ್ತು ಬಲಿಷ್ಠ ಪೂರೈಕೆ ಸರಪಳಿಗಳನ್ನು (supply chains) ನಿರ್ಮಿಸಲು ಈ ಒಪ್ಪಂದ ನೆರವಾಗಲಿದೆ. ಇದು ವಿಶ್ವ ಆರ್ಥಿಕ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ

‘ವಿಕಸಿತ ಭಾರತ’ದ ಹಾದಿಯಲ್ಲಿ ಭಾರತ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಜನರನ್ನು ಸಶಕ್ತಗೊಳಿಸುವ ಮತ್ತು ದೂರದೃಷ್ಟಿಯ ಜಾಗತಿಕ ಸಹಭಾಗಿತ್ವಗಳನ್ನು ಹೊಂದಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದದ ಪ್ರಕಾರ, ಅಮೆರಿಕಾವು ಭಾರತದ ಜತೆಗಿನ ಆಮದು ಸುಂಕವನ್ನು ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ. ಅಲ್ಲದೆ, ಒಪ್ಪಂದದಿಂದ ಭಾರತದ ಅನೇಕ ಉತ್ಪನ್ನಗಳ ರಫ್ತು ಹೆಚ್ಚಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ