EPF Non Refundable Advance: ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್​ ಮುಂಗಡ ಪಡೆಯುವುದು ಹೇಗೆ?

ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಹಿಂತಿರುಗಿರುವ ಅಗತ್ಯ ಇಲ್ಲದ ಮುಂಗಡವನ್ನು ಆನ್​ಲೈನ್​ ಮೂಲಕ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತವಾದ ವಿವರ.

EPF Non Refundable Advance: ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್​ ಮುಂಗಡ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 04, 2022 | 1:16 PM

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಿಂದ ಮರುಪಾವತಿಸುವ ಅಗತ್ಯ ಇಲ್ಲದ (ನಾನ್ ರೀಫಂಡಬಲ್) ಮುಂಗಡವನ್ನು ಹಿಂಪಡೆಯಲು ಅನುಮತಿಸುತ್ತದೆ. ಇಪಿಎಫ್​ ನಿಯಮಗಳ ಪ್ರಕಾರ, ಇಪಿಎಫ್​ಒ ​​ಸದಸ್ಯರು ಬಾಕಿ ಇರುವ ಇಪಿಎಫ್​ ಬ್ಯಾಲೆನ್ಸ್‌ನ ಶೇಕಡಾ 75ರಷ್ಟು ಅಥವಾ ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆ (DA) ಇವೆರಡರ ಪೈಕಿ ಯಾವುದು ಕಡಿಮೆಯೋ ಅದನ್ನು ಹಿಂಪಡೆಯಬಹುದು. ಇಲ್ಲಿ, ಇಪಿಎಫ್ ಬಾಕಿ ಉಳಿದಿರುವುದು ಅಂದರೆ ಉದ್ಯೋಗಿಗಳ ಪಾಲು, ಉದ್ಯೋಗದಾತರ ಪಾಲು ಮತ್ತು ಇಪಿಎಫ್​ ಬಡ್ಡಿ. ಇಪಿಎಫ್​ಒ ವೆಬ್‌ಸೈಟ್‌ನಲ್ಲಿ ಹಾಕಿರುವ FAQ’s (ಪದೇ ಪದೇ ಕೇಳಲಾಗುವ ಪ್ರಶ್ನೆಗಳಲ್ಲಿ) ಪ್ರಕಾರ, ಆನ್‌ಲೈನ್ ಕ್ಲೇಮ್ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿದ್ದರೆ ಮತ್ತು ಕ್ಲೇಮ್​ದಾರರು ಅರ್ಹತೆ ಸ್ಥಿತಿಯನ್ನು ಪೂರೈಸಿದರೆ ಭವಿಷ್ಯ ನಿಧಿ ನಿಯಂತ್ರಕರು ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್​ ಮುಂಗಡವನ್ನು ಮೂರು ಕೆಲಸದ ದಿನಗಳಲ್ಲಿ ಪಡೆಯಬಹುದು ಎಂದು ಹೇಳಲಾಗಿದೆ.

ಇಪಿಎಫ್​ ನಾನ್​ ರೀಫಂಡಬಲ್ ಕ್ಲೇಮ್: ಅರ್ಹತೆಯ ಷರತ್ತುಗಳು

ಇಪಿಎಫ್‌ಒ ಇತ್ತೀಚೆಗೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ ಮತ್ತು ಇಪಿಎಫ್ ಖಾತೆದಾರರು ಮರುಪಾವತಿ ಅಗತ್ಯ ಇಲ್ಲದ ಇಪಿಎಫ್ ಮುಂಗಡವನ್ನು ಪಡೆಯಲು ಅರ್ಹರಾಗುವುದಕ್ಕೆ ಕೆಲವು ಷರತ್ತುಗಳನ್ನು ಪೂರೈಸಬೇಕು ಎಂದು ಮಾಹಿತಿ ನೀಡಿದೆ. ಆ ಷರತ್ತುಗಳೆಂದರೆ — ಗೃಹ ಸಾಲ/ ನಿವೇಶನ/ಮನೆ/ಫ್ಲಾಟ್ ಖರೀದಿ ಅಥವಾ ನಿರ್ಮಾಣ/ಸೇರ್ಪಡೆಗಾಗಿ, ಅಸ್ತಿತ್ವದಲ್ಲಿರುವ ಮನೆಯಲ್ಲಿ ಬದಲಾವಣೆ/ಗೃಹ ಸಾಲ ಮರುಪಾವತಿ, ಅವರ ಕುಟುಂಬದ ಸದಸ್ಯರ- ಇಪಿಎಫ್​ಒ ​​ಸದಸ್ಯನ ಅನಾರೋಗ್ಯ, ಸ್ವಯಂ, ಮಗ, ಮಗಳು, ಸಹೋದರ ಅಥವಾ ಸಹೋದರಿಯ ವಿವಾಹ, ಮಕ್ಕಳ ಮೆಟ್ರಿಕ್ಯುಲೇಷನ್ ನಂತರದ ಶಿಕ್ಷಣ, ಪ್ರಕೃತಿ ವಿಕೋಪ, ಒಂದು ತಿಂಗಳಿಗಿಂತ ಕಡಿಮೆಯಿಲ್ಲದ ನಿರುದ್ಯೋಗ, ವರಿಷ್ಠ ಪಿಂಚಣಿ ಬಿಮಾ ಯೋಜನೆಯಲ್ಲಿ ಹೂಡಿಕೆ ಇತ್ಯಾದಿ.

ಮರುಪಾವತಿಸಲಾಗದ ಇಪಿಎಫ್ ಮುಂಗಡವನ್ನು ಆನ್‌ಲೈನ್‌ನಲ್ಲಿ ಕ್ಲೇಮ್ ಮಾಡುವುದು ಹೇಗೆ?

ಇಪಿಎಫ್​ಒ ಟ್ವೀಟ್ ಪ್ರಕಾರ, “#EPF #ಸದಸ್ಯರು ವಿವಿಧ ಪ್ರಯೋಜನಗಳನ್ನು ಪಡೆಯಲು ಏಕೀಕೃತ ಸದಸ್ಯ ಪೋರ್ಟಲ್ ಅಥವಾ #UMANG ಅಪ್ಲಿಕೇಷನ್ ಮೂಲಕ ಮರುಪಾವತಿಸಲಾಗದ ಇಪಿಎಫ್ ಮುಂಗಡಕ್ಕಾಗಿ ಅರ್ಜಿ ಸಲ್ಲಿಸಬಹುದು.”

ಮರುಪಾವತಿಸುವ ಅಗತ್ಯ ಇಲ್ಲದ ಇಪಿಎಫ್ ಮುಂಗಡ ಹಿಂಪಡೆಯುವಿಕೆಯನ್ನು ಕ್ಲೇಮ್ ಮಾಡಲು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ:

1] ಏಕೀಕೃತ ಇಪಿಎಫ್​ಒ ​​ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ – unifiedportal-mem.epfindia.gov.in/memberinterface;

2] ಆನ್‌ಲೈನ್ ಸೇವಾ ಕ್ಲೇಮ್‌ಗೆ ತೆರಳಿ (ಫಾರ್ಮ್ 31, 19, 10C & 10D);

3] ನಿಮ್ಮ ಹೆಸರನ್ನು ನಮೂದಿಸಿರುವ ಬ್ಯಾಂಕ್ ಚೆಕ್ ಲೀಫ್ ಅನ್ನು ಅಪ್‌ಲೋಡ್ ಮಾಡಿ;

4] ‘submit’ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಫಾರ್ಮ್ ಅನ್ನು ಸಲ್ಲಿಸಿ.

ಇಪಿಎಫ್‌ಒ ಸದಸ್ಯರು ಉಮಾಂಗ್ ಆ್ಯಪ್ ಡೌನ್‌ಲೋಡ್ ಮಾಡುವ ಮೂಲಕ ಆಂಡ್ರಾಯ್ಡ್ ಫೋನ್ ಅಥವಾ ಸ್ಮಾರ್ಟ್‌ಫೋನ್ ಬಳಸಿ ಈ ಇಪಿಎಫ್ ರೀಫಂಡ್ ಕ್ಲೇಮ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಪಡೆದ UAN ಮತ್ತು OTP ಬಳಸಿಕೊಂಡು ಉಮಾಂಗ್ ಅಪ್ಲಿಕೇಷನ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕ ಮೇಲೆ ತಿಳಿಸಿದ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: PF Interest: ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪಿಎಫ್​ ಬಡ್ಡಿ ದರ ಶೇ 8.1ಕ್ಕೆ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್