PF Interest Rate: ಇಪಿಎಫ್​ ಬಡ್ಡಿ ದರ ಶೇ 8.1ಕ್ಕೆ ಇಳಿಕೆ; 45 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ

| Updated By: Srinivas Mata

Updated on: Mar 12, 2022 | 2:34 PM

ಎಂಪ್ಲಾಯೀಸ್​ ಪ್ರಾವಿಡೆಂಟ್​ ಫಂಡ್​ ಬಡ್ಡಿ ದರವನ್ನು ಶೇ 7.1ಕ್ಕೆ ನಿಗದಿ ಮಾಡಲಾಗಿದ್ದು, ಈ ಮೂಲಕವಾಗಿ 45 ವರ್ಷಗಳಲ್ಲೇ ಕನಿಷ್ಠ ಮಟ್ಟವನ್ನು ಮುಟ್ಟಿದೆ.

PF Interest Rate: ಇಪಿಎಫ್​ ಬಡ್ಡಿ ದರ ಶೇ 8.1ಕ್ಕೆ ಇಳಿಕೆ; 45 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ
ಸಾಂದರ್ಭಿಕ ಚಿತ್ರ
Follow us on

2021-22ರ ಉದ್ಯೋಗಿಗಳ ಭವಿಷ್ಯ ನಿಧಿ (EPF) ಬಡ್ಡಿ ದರವನ್ನು ಈಗಿನ ಅಸ್ತಿತ್ವದಲ್ಲಿರುವ ಶೇಕಡಾ 8.5ರಿಂದ ಶೇ 8.1ಕ್ಕೆ ಶನಿವಾರ ಕಡಿತಗೊಳಿಸಲಾಗಿದೆ. 1977-78ರಲ್ಲಿ ಶೇ 8ರಷ್ಟಿದ್ದ ನಂತರದಲ್ಲಿ ಅತ್ಯಂತ ಕಡಿಮೆ ದರ ಇದಾಗಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಸುಮಾರು ಐದು ಕೋಟಿ ಚಂದಾದಾರರಿದ್ದಾರೆ. ಗುವಾಹತಿಯಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಮಂಡಳಿ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಂಡಳಿಯ ಶಿಫಾರಸನ್ನು ಶೀಘ್ರದಲ್ಲೇ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು. 2020-21ರಲ್ಲಿ ಬಡ್ಡಿ ದರವು ಶೇಕಡಾ 8.5ರಷ್ಟಿತ್ತು. ಒಮ್ಮೆ ಹಣಕಾಸು ಸಚಿವಾಲಯವು ಮಂಡಳಿಯ ನಿರ್ಧಾರವನ್ನು ಅನುಮೋದಿಸಿದ ನಂತರ, ಇಪಿಎಫ್​ಒ ​​ತನ್ನ ಕ್ಷೇತ್ರ ಕಚೇರಿಗಳಿಗೆ 2021-22ರ ಹೊಸ ದರದಲ್ಲಿ ಶೇ 8.1ರ ಬಡ್ಡಿ ಆದಾಯವನ್ನು ಚಂದಾದಾರರ ಖಾತೆಗಳಲ್ಲಿ ಕ್ರೆಡಿಟ್ ಮಾಡಲು ನಿರ್ದೇಶಿಸುತ್ತದೆ.

2020ರ ಮಾರ್ಚ್​ನಲ್ಲಿ ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19ಕ್ಕೆ ಒದಗಿಸಿದ ಶೇ 8.65ರಿಂದ 2019-20ಕ್ಕೆ ಏಳು ವರ್ಷಗಳ ಕನಿಷ್ಠ ಶೇ 8.5ಕ್ಕೆ ಇಳಿಸಿದೆ. 2019-20ಕ್ಕೆ ಒದಗಿಸಲಾದ ಇಪಿಎಫ್ ಬಡ್ಡಿ ದರವು 2012-13ರ ನಂತರ ಅತ್ಯಂತ ಕಡಿಮೆಯಾಗಿದ್ದು, ಅದನ್ನು ಶೇ.8.5ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: LIC Premium: ಇಪಿಎಫ್​ನಿಂದ ಎಲ್​ಐಸಿ ಪ್ರೀಮಿಯಂ ಪಾವತಿಸುವುದು ಹೇಗೆ ಎಂಬ ವಿವರ ಇಲ್ಲಿದೆ

Published On - 2:00 pm, Sat, 12 March 22