
ನವದೆಹಲಿ, ಸೆಪ್ಟೆಂಬರ್ 24: ಇಪಿಎಫ್ಒ (EPFO) ಸದಸ್ಯರು ತಮ್ಮ ಹಣವನ್ನು ಹಿಂಪಡೆಯುವ ಕಾರ್ಯ ಮುಂದಿನ ದಿನಗಳಲ್ಲಿ ಬಹಳ ಸುಲಭವಾಗಲಿದೆ. ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಎಟಿಎಂ ವಿತ್ಡ್ರಾಯಲ್ ಸೌಲಭ್ಯ 2026ರ ಜನವರಿಯಲ್ಲಿ ಲಭ್ಯ ಇರಲಿದೆ. ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ಎಟಿಎಂನಿಂದ ನೇರವಾಗಿ ವಿತ್ಡ್ರಾ ಮಾಡಲು ಸಾಧ್ಯವಾಗಲಿದೆ. ಮನಿ ಕಂಟ್ರೋಲ್ ವರದಿ ಪ್ರಕಾರ ಇಪಿಎಫ್ಒನ ಕೇಂದ್ರೀಯ ಟ್ರಸ್ಟೀಗ ಮಂಡಳಿಯ ಮುಂದಿನ ಸಭೆಯಲ್ಲಿ ಎಟಿಎಂ ವಿತ್ಡ್ರಾಯಲ್ ಸೌಲಭ್ಯಕ್ಕೆ ಅನುಮೋದನೆ ಕೊಡುವ ನಿರೀಕ್ಷೆ ಇದೆ.
ಎಟಿಎಂ ಮೂಲಕ ಪಿಎಫ್ ಹಣ ವಿತ್ಡ್ರಾ ಮಾಡಲು ಅನುವಾಗುವಂತೆ ಇಪಿಎಫ್ಒನ ಐಟಿ ಇನ್ಫ್ರಾಸ್ಟ್ರಕ್ಚರ್ ಸಿದ್ಧವಾಗಿದೆ. ಅದಕ್ಕೆ ಅನುಮೋದನೆ ಸಿಗಬಹುದು. 2026ರ ಜನವರಿಯಿಂದ ಈ ಸೌಲಭ್ಯ ಸಿಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ
ಆದರೆ, ಎಟಿಎಂಗಳಲ್ಲಿ ಪಿಎಫ್ ಹಣ ಹೇಗೆ ವಿತ್ಡ್ರಾ ಮಾಡಬಹುದು, ಎಷ್ಟು ವಿತ್ಡ್ರಾಯಲ್ ಮಿತಿ ಇರುತ್ತದೆ ಎಂಬಿತ್ಯಾದಿ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ.
ಸದ್ಯ ಇರುವ ವ್ಯವಸ್ಥೆಯಲ್ಲಿ ಇಪಿಎಫ್ ಸದಸ್ಯರು ತಮ್ಮ ಅಕೌಂಟ್ನಲ್ಲಿರುವ ಹಣವನ್ನು ಹಿಂಪಡಯಬೇಕೆಂದರೆ ಒಂದಷ್ಟು ಪ್ರಕ್ರಿಯೆಗಳಿವೆ. ಮೊದಲಿಗೆ ಹಣಕ್ಕೆ ಕ್ಲೇಮ್ ಸಲ್ಲಿಸಬೇಕು. ಅದಕ್ಕೆ ಅನುಮೋದನೆ ಸಿಕ್ಕರೆ ಆ ಹಣವು ಬ್ಯಾಂಕ್ ಅಕೌಂಟ್ಗೆ ಜಮೆ ಆಗುತ್ತದೆ. ಅದನ್ನು ಉದ್ಯೋಗಿಗಗಳು ವಿತ್ಡ್ರಾ ಮಾಡಿಕೊಳ್ಳಬಹುದು.
ಆದರೆ, ಎಟಿಎಂ ಫೀಚರ್ನಲ್ಲಿ ಸದಸ್ಯರು ನೇರವಾಗಿ ಹಣ ವಿತ್ಡ್ರಾ ಮಾಡಲು ಸಾಧ್ಯವಾಗಬಹುದು. ಬ್ಯಾಂಕ್ ಅಕೌಂಟ್ನಲ್ಲಿರುವ ಹಣವನ್ನು ಎಟಿಎಂ ಕಾರ್ಡ್ ಮೂಲಕ ಹಿಂಪಡೆಯಲಾಗುವಂತೆ ಈ ವ್ಯವಸ್ಥೆ ಇರಬಹುದು. ಹಿಂದೆ ಬಂದ ವರದಿಯೊಂದರ ಪ್ರಕಾರ, ಇಪಿಎಫ್ಒದಿಂದ ಎಲ್ಲಾ ಸದಸ್ಯರಿಗೂ ಎಟಿಎಂ ಕಾರ್ಡ್ ರೀತಿ ಇಪಿಎಫ್ ಕಾರ್ಡ್ ನೀಡಲಾಗಬಹುದು. ಅದನ್ನು ಬಳಸಿ ಎಟಿಎಂಗಳಲ್ಲಿ ಹಣ ವಿತ್ಡ್ರಾ ಮಾಡಲು ಸಾಧ್ಯ ಎನ್ನಲಾಗಿದೆ.
ಇದನ್ನೂ ಓದಿ: ಇಪಿಎಫ್ಒನಲ್ಲಿ ಹೊಸ ಫೀಚರ್ಸ್; ಪಾಸ್ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ
ಈ ಬಗ್ಗೆ ಇಪಿಎಫ್ಒದಿದ ಯಾವ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಎಟಿಎಂ ವಿತ್ಡ್ರಾಯಲ್ ಸೌಲಭ್ಯ ಬರಲಿರುವ ವಿಚಾರ ಮಾತ್ರ ಅಧಿಕೃತವಿದೆ. ಹಣವನ್ನು ಹೇಗೆ ವಿತ್ಡ್ರಾ ಮಾಡುವುದು, ಎಷ್ಟು ಹಣ ವಿತ್ಡ್ರಾ ಮಾಡುವುದು ಇತ್ಯಾದಿ ವಿವರಗಳು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ