ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು?

EPFO decides interest rate for EPF accounts for 26fy: ಪ್ರಸಕ್ತ ಹಣಕಾಸು ವರ್ಷವಾದ 2025-26ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ ನೀಡುವುದೆಂದು ಇಪಿಎಫ್​ಒ ನಿರ್ಧರಿಸಿದೆ. ಹಣಕಾಸು ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಇಪಿಎಫ್ ಸದಸ್ಯರ ಅಕೌಂಟ್​ಗಳಿಗೆ ಬಡ್ಡಿ ಹಣ ಜಮೆ ಆಗಲಿದೆ. ಕಳೆದ ಮೂರು ವರ್ಷಗಳಿಂದ ಇದೇ ಬಡ್ಡಿ ದರ ಇದೆ.

ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು?
ಇಪಿಎಫ್

Updated on: Mar 02, 2026 | 8:37 PM

ನವದೆಹಲಿ, ಮಾರ್ಚ್ 2: ಈ ಹಣಕಾಸು ವರ್ಷಕ್ಕೆ ಇಪಿಎಫ್ ಅಕೌಂಟ್​ಗಳಿಗೆ ನೀಡಬೇಕಿರುವ ಬಡ್ಡಿ ಹಣವನ್ನು (EPF interest rate) ನಿರ್ಧರಿಸಲಾಗಿದೆ. ವರದಿ ಪ್ರಕಾರ 2025-26ರ ವರ್ಷಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿದರ ನಿಗದಿ ಮಾಡಲಾಗಿದೆ. ಕಳೆದ ವರ್ಷವೂ ಇಷ್ಟೇ ಬಡ್ಡಿ ದರ ಇತ್ತು. ಸತತ ಮೂರು ವರ್ಷದಿಂದ ಇಪಿಎಫ್​ಒ ಶೇ. 8.25 ಬಡ್ಡಿ ನೀಡುತ್ತಿದೆ. 2022-23ರಲ್ಲಿ ಇಪಿಎಫ್ ವಾರ್ಷಿಕ ಬಡ್ಡಿ ದರ ಶೇ. 8.15 ಇತ್ತು. 2023-24ರಲ್ಲಿ ಅದನ್ನು ಶೇ. 8.25ಕ್ಕೆ ಏರಿಸಲಾಯಿತು. ನಂತರ ಅದೇ ದರವನ್ನು ಮುಂದುವರಿಸಿಕೊಂಡು ಬರಲಾಗಿದೆ.

ಇಪಿಎಫ್​ಒದ ಕೇಂದ್ರೀಯ ಟ್ರಸ್ಟ್​ಗಳ ಮಂಡಳಿಯ (ಸಿಬಿಟಿ) 239ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನಸುಖ್ ಮಾಂಡವೀಯ ನೇತೃತ್ವದಲ್ಲಿ ಈ ಸಭೆ ನಡೆದಿದೆ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

ಹಿಂದಿನ ವರ್ಷಗಳಲ್ಲಿ ಇದ್ದ ಇಪಿಎಫ್ ಬಡ್ಡಿದರಗಳು

  • 2025-26: ಶೇ. 8.25
  • 2024-25: ಶೇ. 8.25
  • 2023-24: ಶೇ. 8.25
  • 2022-23: ಶೇ. 8.15
  • 2021-22: ಶೇ. 8.10
  • 2020-21: ಶೇ. 8.50
  • 2019-20: ಶೇ. 8.50
  • 2018-19: ಶೇ. 8.65
  • 2017-18: ಶೇ. 8.55
  • 2016-17: ಶೇ. 8.65
  • 2015-16: ಶೇ. 8.8
  • 2014-15: ಶೇ. 8.75
  • 2013-14: ಶೇ. 8.75
  • 2012-13: ಶೇ. 8.5
  • 2011-12: ಶೇ. 8.25

ಈ ಹಣಕಾಸು ವರ್ಷ ಮುಗಿದ ಬಳಿಕ ಇಪಿಎಫ್ ಹಣಕ್ಕೆ ಬಡ್ಡಿ ಹಣ ಸೇರ್ಪಡೆಯಾಗುತ್ತದೆ. ಅಂದರೆ ಮಾರ್ಚ್ ಕಳೆದ ನಂತರ ಇಪಿಎಫ್ ಬಡ್ಡಿ ಹಣ ಜಮೆ ಆಗುವುದನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಇಪಿಎಫ್ ಬಡ್ಡಿ ದರ ಹೇಗೆ ನಿರ್ಧಾರವಾಗುತ್ತದೆ?

ಇಪಿಎಫ್​ಒ ಸಂಸ್ಥೆ ತನ್ನ ನಿಧಿಯಲ್ಲಿರುವ ಎಲ್ಲಾ ಹಣವನ್ನೂ ನಿರ್ದಿಷ್ಟ ಹೂಡಿಕೆಗಳಿಗೆ ಹಾಕುತ್ತದೆ. ಅದರಲ್ಲಿ ಬಂದಿರುವ ಆದಾಯವನ್ನು ಆಧಾರವಾಗಿಟ್ಟುಕೊಂಡು ಬಡ್ಡಿ ಹಣ ನಿರ್ಧರಿಸುತ್ತದೆ. ಪ್ರತಿಯೊಂದು ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಈ ಬಡ್ಡಿ ಹಣ ಸೇರ್ಪಡೆಯಾಗುತ್ತದೆ.

ನೀವು ಉಮಾಂಗ್ ಆ್ಯಪ್ ಅಥವಾ ಇಪಿಎಫ್ ವೆಬ್​ಸೈಟ್​ಗೆ ಹೋಗಿ ಲಾಗಿನ್ ಆಗಿ, ಅಲ್ಲಿ ಪಾಸ್​ಬುಕ್ ಓಪನ್ ಮಾಡಿ ಪಿಎಫ್ ಬ್ಯಾಲನ್ಸ್ ಪರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us