ಇಎಲ್​ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್​ಗೆ ಲಿಂಕ್ ಮಾಡಲು ಡೆಡ್​ಲೈನ್ ವಿಸ್ತರಣೆ

|

Updated on: Dec 24, 2024 | 12:52 PM

Employment linked incentive scheme: ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಅಡಿ ವಿವಿಧ ಯೋಜನೆಗಳ ಲಾಭ ಪಡೆಯಬೇಕಾದರೆ ಉದ್ಯೋಗಿಗಳ ಯುಎಎನ್ ಆ್ಯಕ್ಟಿವೇಟ್ ಆಗಿರಬೇಕು. ಉದ್ಯೋಗಿಗಳ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಸೀಡ್ ಆಗಿರಬೇಕು. ಇದಕ್ಕೆ ಇದ್ದ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿದೆ. ಜನವರಿ 15ರವರೆಗೂ ಕಾಲಾವಕಾಶ ಕೊಡಲಾಗಿದೆ. 2024ರ ಜುಲೈ ಬಜೆಟ್​ನಲ್ಲಿ ಸರ್ಕಾರವು ಇಎಲ್​ಐ ಸ್ಕೀಮ್ ಅನ್ನು ಘೋಷಣೆ ಮಾಡಿತ್ತು.

ಇಎಲ್​ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್​ಗೆ ಲಿಂಕ್ ಮಾಡಲು ಡೆಡ್​ಲೈನ್ ವಿಸ್ತರಣೆ
ಇಪಿಎಫ್​ಒ
Follow us on

ನವದೆಹಲಿ, ಡಿಸೆಂಬರ್ 24: ಉದ್ಯೋಗ ಆಧಾರಿತ ಭತ್ಯೆ (ಇಎಲ್​ಐ) ಯೋಜನೆ ಅಡಿ ಸರ್ಕಾರದಿಂದ ನೀಡಲಾಗುವ ಲಾಭಗಳನ್ನು ಪಡೆಯಲು ಉದ್ಯೋಗಿಗಳ ಇಪಿಎಫ್ ಖಾತೆಗೆ ಯುಎಎನ್ ಸಕ್ರಿಯಗೊಳಿಸಬೇಕು. ಅವರ ಬ್ಯಾಂಕ್ ಖಾತೆಗಳು ಆಧಾರ್​ಗೆ ಲಿಂಕ್ ಆಗಿರಬೇಕು. ಈ ಕಾರ್ಯಕ್ಕೆ ನಿಗದಿ ಮಾಡಲಾಗಿದ್ದ ಕಾಲಾವಕಾಶವನ್ನು ಇಪಿಎಫ್​ಒ ವಿಸ್ತರಿಸಿದೆ. ಈ ಮೊದಲು ನವೆಂಬರ್ 30ಕ್ಕೆ ಡೆಡ್​ಲೈನ್ ಇತ್ತು. ಅದನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಲಾಗಿತ್ತು. ಈಗ ಜನವರಿ 15ರವರೆಗೂ ಕಾಲಾವಕಾಶ ಹೆಚ್ಚಿಸಲಾಗಿದೆ.

ಏನಿದು ಯುಎಎನ್?

ಯೂನಿವರ್ಸಲ್ ಅಕೌಂಟ್ ನಂಬರ್ ಅಥವಾ ಯುಎಎನ್ ಎಂಬುದು ಇಪಿಎಫ್​ಒ ಸರ್ವಿಸ್​ಗಳನ್ನು ಆನ್​ಲೈನ್​ನಲ್ಲಿ ಪಡೆಯಲು ಉದ್ಯೋಗಿಗೆ ನೀಡಲಾಗುವ 12 ಅಂಕಿಗಳ ಒಂದು ಅನನ್ಯ ಸಂಖ್ಯೆ. ಆಧಾರ್ ನಂಬರ್​ನಂತೆ ಇದು ಒಬ್ಬ ಉದ್ಯೋಗಿಗೆ ಇರುವ ವಿಶೇಷ ಸಂಖ್ಯೆಯಾಗಿರುತ್ತದೆ. ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆಯಾದರೂ ಅದೇ ಯುಎಎನ್ ನಂಬರ್ ಅನ್ನು ಮುಂದುವರಿಸಬಹುದು. ಒಂದೇ ಯುಎಎನ್ ನಂಬರ್ ಅಡಿ ಉದ್ಯೋಗಿಯ ಎಲ್ಲಾ ಇಪಿಎಫ್ ಅಕೌಂಟ್​ಗಳು ಲಿಸ್ಟ್ ಆಗಿರುತ್ತವೆ.

ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ

ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಬೇಕು…

ಇಪಿಎಫ್ ಅಕೌಂಟ್​ನಿಂದ ಹಣವನ್ನು ಹಿಂಪಡೆದಾಗ ಅದು ನೇರವಾಗಿ ಬ್ಯಾಂಕ್ ಖಾತೆಗೆ ರವಾನೆಯಾಗಬೇಕೆಂದರೆ ಆ ಖಾತೆಗೆ ಉದ್ಯೋಗಿಯ ಆಧಾರ್ ಜೋಡಣೆ ಆಗಿರಬೇಕು. ಎಲ್ಲಾ ಡಿಬಿಟಿ ಸ್ಕೀಮ್​ಗಳಲ್ಲೂ ಇದು ಅವಶ್ಯಕ.

ಏನಿದು ಇಎಲ್​ಐ ಸ್ಕೀಮ್?

ಕಳೆದ ಬಜೆಟ್​ನಲ್ಲಿ (2024ರ ಜುಲೈ) ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯನ್ನು ಪ್ರಕಟಿಸಲಾಗಿದೆ. ಇದರಡಿ ಮೂರು ಸ್ಕೀಮ್​ಗಳನ್ನು ಘೋಷಿಸಲಾಗಿದೆ. ಹೊಸದಾಗಿ ಉದ್ಯೋಗಿಗಳಾಗಿರುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರವೇ ನೀಡುತ್ತದೆ. ಇನ್ನೆರಡು ಸ್ಕೀಮ್​ಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶ ನೀಡುವ ಕಂಪನಿಗಳಿಗೆ ಸರ್ಕಾರ ಪ್ರೋತ್ಸಾಹಕ ಧನ ಒದಗಿಸುತ್ತದೆ.

ಇದನ್ನೂ ಓದಿ: ಕುಗ್ಗದ ಅದಾನಿ; ವಾಯುಯಾನ ಕ್ಷೇತ್ರಕ್ಕೆ ಇನ್ನೊಂದು ಹೆಜ್ಜೆ; ಬೃಹತ್ ಸೂಪರ್ ವಿದ್ಯುತ್ ಸ್ಥಾವರ ಸ್ಥಾಪನೆಗೂ ಯೋಜನೆ

ಈ ಸ್ಕೀಮ್​ಗಳ ಲಾಭ ಸಿಗಬೇಕಾದರೆ ಉದ್ಯೋಗಿಗಳಿಗೆ ಯುಎಎನ್ ಸಕ್ರಿಯಗೊಳ್ಳಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಆಗಿರಬೇಕು. ಅದಕ್ಕೆ ಡೆಡ್​ಲೈನ್ ಜನವರಿ 15ಕ್ಕೆ ನಿಗದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ