ಉದ್ಯೋಗಿಗಳ ಪಿಎಫ್ ಖಾತೆಗೆ ಹಣ ಹಾಕದ ಸಂಸ್ಥೆಗಳ ಮೇಲೆ ಕ್ರಮ; ಇಪಿಎಫ್​ಒದಿಂದ ಸ್ಪೆಷಲ್ ಡ್ರೈವ್

EPFO Special Drive: ಬಹಳಷ್ಟು ಸಂಸ್ಥೆಗಳು ಉದ್ಯೋಗಿಗಳ ಪಿಎಫ್ ಖಾತೆಗಳಿಗೆ ನಿಯಮಿತವಾಗಿ ಹಣ ತುಂಬಿಸುತ್ತಿಲ್ಲ. ಸಾಕಷ್ಟು ಬಾಕಿ ಉಳಿದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್​ಒದಿಂದ ವಿಶೇಷ ಅಭಿಯಾನ ನಡೆಯುತ್ತಿದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆಯುವ ಈ ಸ್ಪೆಷಲ್ ಡ್ರೈವ್​ನಲ್ಲಿ ಪಿಎಫ್ ಹಣ ಬಾಕಿ ಉಳಿಸಿಕೊಂಡ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬಹುದು.

ಉದ್ಯೋಗಿಗಳ ಪಿಎಫ್ ಖಾತೆಗೆ ಹಣ ಹಾಕದ ಸಂಸ್ಥೆಗಳ ಮೇಲೆ ಕ್ರಮ; ಇಪಿಎಫ್​ಒದಿಂದ ಸ್ಪೆಷಲ್ ಡ್ರೈವ್
ಇಪಿಎಫ್​ಒ

Updated on: Nov 13, 2023 | 2:23 PM

ನವದೆಹಲಿ, ನವೆಂಬರ್ 13: ಉದ್ಯೋಗಿಗಳ ಇಪಿಎಫ್ ಖಾತೆಗಳಿಗೆ ಹಣ ಹಾಕದ ಸಂಸ್ಥೆಗಳ (employers) ಮೇಲೆ ಕ್ರಮ ಕೈಗೊಳ್ಳಲು ಇಪಿಎಫ್​ಒ ಮುಂದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್​ಒ ಮುಂದಿನ ತಿಂಗಳಿಂದ ಸ್ಪೆಷಲ್ ಡ್ರೈವ್ (EPFO special drive) ನಡೆಸಲಿದೆ. ಡಿಸೆಂಬರ್​ನಿಂದ ಶುರುವಾಗಿ 2024ರ ಫೆಬ್ರವರಿವರೆಗೂ ನಡೆಯುವ ಈ ಡ್ರೈವ್​ನಲ್ಲಿ ಸಂಸ್ಥೆಗಳಿಂದ ಪಿಎಫ್ ಬಾಕಿ ಹಣವನ್ನು ವಸೂಲಿ ಮಾಡಲಾಗುತ್ತದೆ. ನವೆಂಬರ್ 10ರಂದು ಚೆನ್ನೈ ವಿಭಾಗದ ಪಿಐಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಸಂಗತಿಯನ್ನು ತಿಳಿಸಲಾಗಿದೆ.

‘ಇಪಿಎಫ್​ಒಗೆ ಸಬ್​ಸ್ಕ್ರೈಬ್ ಆಗಿರುವ ಎಲ್ಲಾ ಸಂಸ್ಥೆಗಳು ಇಪಿಎಫ್​ಗೆ ನೀಡಬೇಕಿರುವ ಬಾಕಿ ಹಣವನ್ನು ಸಲ್ಲಿಸಬೇಕು ಎಂದು ಈ ಮೂಲಕ ಸಲಹೆ ನೀಡಲಾಗುತ್ತಿದೆ,’ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಇಪಿಎಫ್ ಹಣ ತುಂಬಿಸದಿದ್ದರೆ ಸಂಸ್ಥೆಯ ಚಿರಾಸ್ತಿ, ಚರಾಸ್ತಿ, ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಲಾಗುತ್ತದೆ ಎಂದೂ ಈ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: PF  Updates: ಪಿಎಫ್ ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ ಶುರು; ನಿಮ್ಮ ಖಾತೆಗೆ ಬಂದಿದೆಯಾ ಬಡ್ಡಿ?

ಬಹಳಷ್ಟು ಸಂಸ್ಥೆಗಳು ಉದ್ಯೋಗಿಗಳ ಪಿಎಫ್ ಖಾತೆಗಳಿಗೆ ನಿಯಮಿತವಾಗಿ ಹಣ ತುಂಬಿಸುತ್ತಿಲ್ಲ. ಸಾಕಷ್ಟು ಬಾಕಿ ಉಳಿದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್​ಒದಿಂದ ವಿಶೇಷ ಅಭಿಯಾನ ನಡೆಯುತ್ತಿದೆ. ಇಪಿಎಫ್​ಒದ ವಿವಿಧ ಪ್ರಾದೇಶಿಕ ವಿಭಾಗಗಳು ವಾರಕ್ಕೊಮ್ಮೆ ಈ ಅಭಿಯಾನದ ಪ್ರಗತಿ ಬಗ್ಗೆ ವರದಿ ನೀಡಬೇಕೆಂದೂ ಸೂಚಿಸಲಾಗಿದೆ.

ಭಾರತದಲ್ಲಿ ಇಪಿಎಫ್​ಒಗೆ 6 ಕೋಟಿ ಸಬ್​ಸ್ಕ್ರೈಬರ್​ಗಳಿದ್ದಾರೆ. ಒಟ್ಟಾರೆ 12 ಲಕ್ಷಕೋಟಿ ರೂ ನಿಧಿ ಅದರಲ್ಲಿದೆ. ಮೂರು ಇಪಿಎಫ್ ಸ್ಕೀಮ್​ಗಳ ಮೂಲಕ ಪ್ರಾವಿಡೆಂಟ್ ಫಂಡ್, ಪೆನ್ಷನ್ ಮತ್ತು ಇನ್ಷೂರೆನ್ಸ್ ಸೇವೆಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಐದು ವರ್ಷದೊಳಗೆ ಪಿಎಫ್ ಹಣ ಹಿಂಪಡೆದರೆ ತೆರಿಗೆ ಕಡಿತ; ಈ ಇಪಿಎಫ್ ನಿಯಮಗಳು ತಿಳಿದಿರಲಿ

ಸರ್ಕಾರ ಎಲ್ಲಾ ಪಿಎಫ್ ಖಾತೆಗಳಲ್ಲಿರುವ ಹಣಕ್ಕೂ ವರ್ಷಕ್ಕೊಮ್ಮೆ ಬಡ್ಡಿ ಹಣ ಸೇರಿಸುತ್ತದೆ. ಈ ವರ್ಷ ಶೇ. 8.15ರಷ್ಟು ಬಡ್ಡಿ ನಿಗದಿಯಾಗಿದೆ. ಶೀಘ್ರದಲ್ಲೇ ಬಡ್ಡಿಹಣವನ್ನು ಪಿಎಫ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us