ಪಿಎಫ್ ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ ಶುರು; ನಿಮ್ಮ ಖಾತೆಗೆ ಬಂದಿದೆಯಾ ಬಡ್ಡಿ?

|

Updated on: Nov 10, 2023 | 2:21 PM

EPFO Interest Deposits: ಪಿಎಫ್ ಖಾತೆಗಳಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಜಮೆ ಆಗತೊಡಗಿದೆ. ಇಪಿಎಫ್​ಒದಿಂದ ಬಡ್ಡಿ ಹಣ ವರ್ಗಾವಣೆ ಆಗುತ್ತಿದೆ. ಈ ವರ್ಷ ಎಲ್ಲಾ ಪಿಎಫ್ ಖಾತೆಗಳಿಗೂ ಶೇ. 8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಕೆಲ ಪಿಎಫ್ ಖಾತೆಗಳಿಗೆ ಈಗಾಗಲೇ ಬಡ್ಡಿ ಜಮೆ ಆಗಿರುವುದು ತಿಳಿದುಬಂದಿದೆ.

ಪಿಎಫ್ ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ ಶುರು; ನಿಮ್ಮ ಖಾತೆಗೆ ಬಂದಿದೆಯಾ ಬಡ್ಡಿ?
ಇಪಿಎಫ್​ಒ
Follow us on

ನವದೆಹಲಿ, ನವೆಂಬರ್ 10: ಪಿಎಫ್ ಖಾತೆಗಳಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ (Interest amount) ಜಮೆ ಆಗತೊಡಗಿದೆ. ಇಪಿಎಫ್​ಒದಿಂದ ಬಡ್ಡಿ ಹಣ ವರ್ಗಾವಣೆ ಆಗುತ್ತಿದೆ. ಈ ವರ್ಷ ಎಲ್ಲಾ ಪಿಎಫ್ ಖಾತೆಗಳಿಗೂ (EPF account) ಶೇ. 8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಕೆಲ ಪಿಎಫ್ ಖಾತೆಗಳಿಗೆ ಈಗಾಗಲೇ ಬಡ್ಡಿ ಜಮೆ ಆಗಿರುವುದು ತಿಳಿದುಬಂದಿದೆ. ಕೆಲ ದಿನಗಳಲ್ಲಿ ಎಲ್ಲಾ ಪಿಎಫ್ ಖಾತೆದಾರರಿಗೂ ಬಡ್ಡಿಹಣ ಸಿಗಲಿದೆ. ಕೆಲವರಿಗೆ ವಿಳಂಬವಾಗಿ ಠೇವಣಿಯಾಗಬಹುದು, ಕೆಲವರಿಗೆ ಬೇಗ ಆಗಬಹುದು. ಯಾವಾಗಲೇ ಜಮೆಯಾದರೂ ಬಡ್ಡಿ ಮೊತ್ತದಲ್ಲಿ ವ್ಯತ್ಯಾಸ ಆಗುವುದಿಲ್ಲ. ಇಡೀ ವರ್ಷಕ್ಕೆ ನಿಗದಿತವಾದ ಬಡ್ಡಿಮೊತ್ತವನ್ನೇ ಇಪಿಎಫ್​ಒ ಹಾಕುತ್ತದೆ.

‘ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ಪಿಎಫ್ ಖಾತೆಯಲ್ಲಿ ಆ ಹಣವನ್ನು ಕಾಣಬಹುದು. ಯಾವಾಗಲೇ ಬಡ್ಡಿ ಕ್ರೆಡಿಟ್ ಆದರೂ, ಪೂರ್ಣವಾಗಿ ನೀಡಲಾಗುತ್ತದೆ. ಬಡ್ಡಿ ಹಣ ಕಡಿಮೆ ಆಗುವುದಿಲ್ಲ. ದಯವಿಟ್ಟು ಸಂಯಮ ತೋರಿ,’ ಎಂದು ಇಪಿಎಫ್​ಒ ತನ್ನ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರು 24 ಕೋಟಿಗೂ ಹೆಚ್ಚು ಪಿಎಫ್ ಖಾತೆಗಳಿಗೆ ಬಡ್ಡಿ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಐದು ವರ್ಷದೊಳಗೆ ಪಿಎಫ್ ಹಣ ಹಿಂಪಡೆದರೆ ತೆರಿಗೆ ಕಡಿತ; ಈ ಇಪಿಎಫ್ ನಿಯಮಗಳು ತಿಳಿದಿರಲಿ

ಇಪಿಎಫ್​ಒದಿಂದ ಬಡ್ಡಿ ಜಮೆ ಆದ ಬಳಿಕ ಅದು ಪಿಎಫ್ ಖಾತೆಯಲ್ಲಿ ಕಾಣುತ್ತದೆ. ಇಪಿಎಫ್​ಒ ವೆಬ್​ಸೈಟ್ ಅಥವಾ ಉಮಂಗ್ ಆ್ಯಪ್​ನಲ್ಲಿ ನಿಮ್ಮ ಪಿಎಫ್ ಖಾತೆಗೆ ಲಾಗಿನ್ ಆಗಿ ಪಾಸ್​ಬುಕ್ ಅನ್ನು ತೆರೆದು ನೋಡಿದರೆ ಬಡ್ಡಿ ಜಮೆ ಆಗಿರುವುದನ್ನು ಕಾಣಬಹುದು. ಮಿಸ್ಡ್ ಕಾಲ್, ಎಸ್ಸೆಮ್ಮೆಸ್ ಇತ್ಯಾದಿ ಬೇರೆ ಮಾರ್ಗಗಳ ಮೂಲಕವೂ ಪಿಎಫ್ ಬ್ಯಾಲನ್ಸ್ ಪರಿಶೀಲಿಸಬಹುದು.

ಪಿಎಫ್​ಗೆ ಎಷ್ಟು ಬಡ್ಡಿ ನೀಡಬೇಕು ಎಂಬುದನ್ನು ಇಪಿಎಫ್​ಒ ಪ್ರತೀ ವರ್ಷವೂ ಘೋಷಿಸುತ್ತದೆ. ಇಪಿಎಫ್​ಒನ ಸೆಂಟ್ರಲ್ ಟ್ರಸ್ಟೀ ಬೋರ್ಡ್ (ಸಿಬಿಟಿ) ಮತ್ತು ಹಣಕಾಸು ಸಚಿವಾಲಯಗಳು ಸಮಾಲೋಚನೆ ನಡೆಸಿ ವರ್ಷದ ಬಡ್ಡಿದರ ನಿಶ್ಚಯಿಸುತ್ತವೆ.

ಇದನ್ನೂ ಓದಿ: ಇಪಿಎಫ್ ಕ್ಲೈಮ್ ಅಥವಾ ರೀಫಂಡ್​ನಲ್ಲಿ ಸಮಸ್ಯೆಯಾಗಿದೆಯೇ? ದೂರುಗಳಿಗೆಂದೇ ಇಪಿಎಫ್​ನಿಂದ ವಿಶೇಷ ಪೋರ್ಟಲ್; ಇಲ್ಲಿ ಕಂಪ್ಲೇಂಟ್ ದಾಖಲಿಸುವ ಪ್ರಕ್ರಿಯೆ ತಿಳಿಯಿರಿ

ಇತ್ತೀಚಿನ ವರ್ಷಗಳಲ್ಲಿ ಪಿಎಫ್ ಮೇಲಿನ ಬಡ್ಡಿದರ ತುಸು ಕೆಳಗಿನ ಮಟ್ಟದಲ್ಲೇ ಇದೆ. 2020-21ರಲ್ಲಿ ಶೇ. 8.5ರಷ್ಟು ಬಡ್ಡಿ ಘೋಷಿಸಲಾಗಿತ್ತು. 2021-22ರಲ್ಲಿ ಶೇ. 8.10ಕ್ಕೆ ಬಡ್ಡಿದರ ಇಳಿಸಲಾಗಿತ್ತು. ಕಳೆದ 4 ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರ ಅದಾಗಿತ್ತು. 1977-78ರ ವರ್ಷಕ್ಕೆ ಇಪಿಎಫ್ ಬಡ್ಡಿದರ ಶೇ. 8ರಷ್ಟಿತ್ತು. ಅದಾದ ಬಳಿಕ 2021-22ರಲ್ಲಿ ಪ್ರಕಟಿಸಲಾದ ಶೇ. 8.1ರಷ್ಟು ಬಡ್ಡಿ ಅತ್ಯಂತ ಕಡಿಮೆಯದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ