ಇಪಿಎಫ್ ಕ್ಲೈಮ್ ಅಥವಾ ರೀಫಂಡ್​ನಲ್ಲಿ ಸಮಸ್ಯೆಯಾಗಿದೆಯೇ? ದೂರುಗಳಿಗೆಂದೇ ಇಪಿಎಫ್​ನಿಂದ ವಿಶೇಷ ಪೋರ್ಟಲ್; ಇಲ್ಲಿ ಕಂಪ್ಲೇಂಟ್ ದಾಖಲಿಸುವ ಪ್ರಕ್ರಿಯೆ ತಿಳಿಯಿರಿ

How To Register EPF Complaint on Grievance Portal: ನಿಮ್ಮ ಇಪಿಎಫ್ ಖಾತೆಯಲ್ಲಿ ಯಾವುದೇ ಸಮಸ್ಯೆಯಾಗಿದ್ದಲ್ಲಿ, ಕ್ಲೈಮ್ ಮಾಡಲು ಕಷ್ಟವಾದಲ್ಲಿ, ರೀಫಂಡ್ ಸಿಗುತ್ತಿಲ್ಲದಿದ್ದಲ್ಲಿ ಹೀಗೆ ಏನೇ ಸಮಸ್ಯೆಯಾಗಿದ್ದರೂ ದೂರು ದಾಖಲಿಸಲೆಂದು ಇಪಿಎಫ್​ಒದಿಂದ ವಿಶೇಷ ಪೋರ್ಟಲ್​ವೊಂದನ್ನು ರಚಿಸಲಾಗಿದೆ. ಈ ಪೋರ್ಟಲ್​ನಲ್ಲಿ ನಿಮ್ಮ ದೂರು ದಾಖಲಿಸುವುದು ಬಹಳ ಸುಲಭವಿದೆ. ಈ ನಿಟ್ಟಿನಲ್ಲಿ ಆ ಹಂತಹಂತದ ಪ್ರಕ್ರಿಯೆಗಳ ವಿವರ ಇಲ್ಲಿದೆ.

ಇಪಿಎಫ್ ಕ್ಲೈಮ್ ಅಥವಾ ರೀಫಂಡ್​ನಲ್ಲಿ ಸಮಸ್ಯೆಯಾಗಿದೆಯೇ? ದೂರುಗಳಿಗೆಂದೇ ಇಪಿಎಫ್​ನಿಂದ ವಿಶೇಷ ಪೋರ್ಟಲ್; ಇಲ್ಲಿ ಕಂಪ್ಲೇಂಟ್ ದಾಖಲಿಸುವ ಪ್ರಕ್ರಿಯೆ ತಿಳಿಯಿರಿ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2023 | 4:15 PM

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಅಥವಾ ಇಪಿಎಫ್ ಎಂಬುದು ಭಾರತದ ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ ಕಡ್ಡಾಯಪಡಿಸಲಾಗಿರುವ ಉದ್ಯೋಗಿ ಭವಿಷ್ಯ ಯೋಜನೆಯಾಗಿದೆ. ಪ್ರತಿಯೊಬ್ಬ ಉದ್ಯೋಗಿಯ ಹೆಸರಿನಲ್ಲೂ ಕಂಪನಿಗಳು ಪಿಎಫ್ (EPF) ಖಾತೆ ತೆರೆಯಬೇಕೆನ್ನುತ್ತದೆ ನಿಯಮ. ಈ ಖಾತೆಗೆ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಭಾಗದ ಹಣ ಸೇರ್ಪಡೆಯಾಗುತ್ತಿರಬೇಕು. ಇಷ್ಟೇ ಮೊತ್ತದ ಹಣವನ್ನು ಕಂಪನಿ ಸೇರಿಸಿ ತುಂಬಬೇಕು. ಸರ್ಕಾರ ಈ ಖಾತೆಯಲ್ಲಿರುವ ಹಣಕ್ಕೆ ವರ್ಷಕ್ಕೊಮ್ಮೆ ನಿರ್ದಿಷ್ಟ ಬಡ್ಡಿಹಣ ಜಮೆ ಮಾಡುತ್ತಾ ಹೋಗುತ್ತದೆ. ಹೀಗೆ, ಒಬ್ಬ ಉದ್ಯೋಗಿಯು ನಿವೃತ್ತಿಯಾಗುವಷ್ಟರಲ್ಲಿ ಅತನ ಇಪಿಎಫ್ ಖಾತೆಯಲ್ಲಿ ಸಾಕಷ್ಟು ಹಣ ಭರ್ತಿಯಾಗಿರುತ್ತದೆ. ಅವರ ನಿವೃತ್ತಿನಂತರದ ಬದುಕಿಗೆ ಈ ಉಳಿತಾಯ ಹಣ ಬಹಳ ಉಪಯುಕ್ತವಾಗುತ್ತದೆ.

ಕೆಲವೊಮ್ಮೆ ನಮ್ಮ ಇಪಿಎಫ್ ಖಾತೆಯಲ್ಲಿ ಸಮಸ್ಯೆಗಳು ತಲೆದೋರಬಹುದು. ಹಣ ಜಮೆ ಆಗುತ್ತಿಲ್ಲದೇ ಇರಬಹುದು. ನಿವೃತ್ತಿಗೆ ಮೊದಲು ಇಪಿಎಫ್ ಹಣದಲ್ಲಿ ಕೆಲ ಭಾಗವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಹಾಗೆ ಕ್ಲೈಮ್ ಮಾಡಿಕೊಳ್ಳಲು ಏನೋ ತಾಂತ್ರಿಕ ಸಮಸ್ಯೆ ತಲೆದೋರಬಹುದು. ಇಂಥ ಸಂದರ್ಭದಲ್ಲಿ ದೂರು ನೀಡಲು ಇಪಿಎಫ್​ಒ ಕಚೇರಿಗೆ ಹೋಗುವುದು ಅನಿವಾರ್ಯವಲ್ಲ. ಆನ್​ಲೈನ್ ಮೂಲಕವೇ ದೂರುಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಇಪಿಎಫ್​ಒದಿಂದ ಇದಕ್ಕಾಗಿಯೇ ಐ ಗ್ರೀವೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ ಎಂಬ ವಿಶೇಷ ಪೋರ್ಟಲ್ ಆರಂಭಿಸಿದೆ. ಇಲ್ಲಿ ಇಪಿಎಫ್ ಸದಸ್ಯರು ತಮ್ಮ ದೂರುಗಳನ್ನು ದಾಖಲಿಸಬಹುದು. ಅಥವಾ ಯಾವುದಾದರೂ ಇಪಿಎಫ್ ವಿಷಯದ ಬಗ್ಗೆ ಅನುಮಾನಗಳಿದ್ದರೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

ಇಪಿಎಫ್ ಗ್ರೀವೆನ್ಸ್ ಪೋರ್ಟಲ್​ನಲ್ಲಿ ದೂರು ದಾಖಲಿಸುವ ಪ್ರಕ್ರಿಯೆಗಳು

  • ಇಪಿಎಫ್​ನ ಐ-ಗ್ರೀವೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ ಎಂಬ ಸ್ಪೆಷಲ್ ಪೋರ್ಟಲ್​ಗೆ ಹೋಗಿ. ಅದರ ವಿಳಾಸ ಇಂತಿದೆ: epfigms.gov.in
  • ಈ ಪೋರ್ಟಲ್​ನ ಮುಖ್ಯಪುಟದ ಮೆನುನಲ್ಲಿ ‘ರಿಜಿಸ್ಟರ್ ಗ್ರೀವೆನ್ಸ್’ ಅನ್ನು ಕ್ಲಿಕ್ ಮಾಡಿ
  • ಇಲ್ಲಿ ನಿಮಗೆ 4 ಸ್ಟೇಟಸ್ ಆಯ್ಕೆಗಳಿರುತ್ತವೆ. ನಿಮಗೆ ಅನ್ವಯ ಆಗುವ ಒಂದು ಆಯ್ಕೆ ಮಾಡಿಕೊಳ್ಳಿ.
  • ನೀವು ಉದ್ಯೋಗಿಯಾಗಿದ್ದಲ್ಲಿ ಮತ್ತು ಇಪಿಎಫ್​ಗೆ ಯುಎಎನ್ ನಂಬರ್ ಹೊಂದಿದ್ದಲ್ಲಿ ‘ಪಿಎಫ್ ಮೆಂಬರ್’ ಅನ್ನು ಆಯ್ಕೆ ಮಾಡಿ
  • ಕ್ಲೈಮ್ ಐಡಿ ಇದ್ದರೆ ಅದನ್ನು ಹಾಕಿ. ಇಲ್ಲವಾದರೆ ಯುಎಎನ್ ನಂಬರ್ ನಮೂದಿಸಿ, ಗೆಟ್ ಡೀಟೇಲ್ಸ್ ಒತ್ತಬೇಕು.
  • ಆಗ ನಿಮ್ಮ ಹೆಸರು, ಯುಎಎನ್, ಮೊಬೈಲ್ ನಂಬರ್, ಇಮೇಲ್ ಐಡಿ ವಿವರಗಳು ಪರದೆ ಮೇಲೆ ಕಾಣುತ್ತವೆ.
  • ಗೆಟ್ ಒಟಿಪಿ ಮೂಲಕ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಪಡೆದು ನಮೂದಿಸಿ.

ಇದನ್ನೂ ಓದಿ: ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?

  • ಪರ್ಸನಲ್ ಡೀಟೇಲ್ಸ್ ಸೆಕ್ಷನ್​ಗೆ ಹೋಗಿ ಪಿಎಫ್ ನಂಬರ್ ಅನ್ನು ಆಯ್ದುಕೊಳ್ಳಿ.
  • ಗ್ರೀವೆನ್ಸ್ ಡೀಟೇಲ್ಸ್ ಸೆಕ್ಷನ್​ಗೆ ಹೋಗಿ, ಅಲ್ಲಿ ನೀವು ಯಾವ ರೀತಿಯ ದೂರು ಸಲ್ಲಿಸಬೇಕು ಎಂಬುದನ್ನು ಆರಿಸಿಕೊಂಡು ಸರಿಯಾದ ವಿವರ ಕೊಡಿ.
  • ಅಗತ್ಯಬಿದ್ದಲ್ಲಿ ಪೂರಕ ದಾಖಲೆಗಳನ್ನು ಅಪ್​ಲೋಡ್ ಮಾಡಬಹುದು.

ಇದರೊಂದಿಗೆ ನಿಮ್ಮ ದೂರು ಈ ಪೋರ್ಟಲ್​ನಲ್ಲಿ ದಾಖಲಾಗುತ್ತದೆ. ರಿಜಿಸ್ಟ್ರೇಶನ್ ನಂಬರ್ ಅನ್ನು ಕಾಪಿ ಮಾಡಿಟ್ಟುಕೊಳ್ಳಿ. ನಿಮ್ಮ ಕಂಪ್ಲೇಂಟ್ ಸ್ಟೇಟಸ್ ಪರಿಶೀಲಿಸಲು ಇದು ಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್