ಈ ಹಣಕಾಸು ವರ್ಷ ನೇರ ತೆರಿಗೆ ಸಂಗ್ರಹ 12.37 ಲಕ್ಷಕೋಟಿ ರೂ; ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಳ

Direct Tax Collections: 2023-24ರ ಹಣಕಾಸು ವರ್ಷದಲ್ಲಿ18 ಲಕ್ಷ ಕೋಟಿ ರೂಗಿಂತ ಹೆಚ್ಚು ನೇರ ತೆರಿಗೆ ಸಂಗ್ರಹ ಆಗಬಹುದು ಎಂದು ಕಳೆದ ಬಜೆಟ್​ನಲ್ಲಿ ಅಂದಾಜು ಮಾಡಲಾಗಿತ್ತು. ಈ ಹಣಕಾಸು ವರ್ಷದ ಮೊದಲಾರ್ಧದಲ್ಲೇ 12.37 ಲಕ್ಷಕೋಟಿ ರೂ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಟ್ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾದುದಕ್ಕಿಂತ ಶೇ. 18.59ರಷ್ಟು ಹೆಚ್ಚು ತೆರಿಗೆ ಈಗ ಸಿಕ್ಕಿದೆ.

ಈ ಹಣಕಾಸು ವರ್ಷ ನೇರ ತೆರಿಗೆ ಸಂಗ್ರಹ 12.37 ಲಕ್ಷಕೋಟಿ ರೂ; ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಳ
ನೇರ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2023 | 4:54 PM

ನವದೆಹಲಿ, ನವೆಂಬರ್ 10: ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್​ನಲ್ಲಿ ಅಂದಾಜು ಮಾಡಿದ್ದಕ್ಕಿಂತ ನೇರ ತೆರಿಗೆ ಸಂಗ್ರಹ (direct tax collections) ಭರ್ಜರಿಯಾಗಿದೆ. ಏಪ್ರಿಲ್ 1ರಂದು ಆರಂಭವಾಗಿ ನವೆಂಬರ್ 9ರವರೆಗಿನ ಅಂಕಿ ಅಂಶದ ಪ್ರಕಾರ 12.37 ಲಕ್ಷ ಕೋಟಿ ರೂ ಮೊತ್ತದಷ್ಟು ಡೈರೆಕ್ಟ್ ಟ್ಯಾಕ್ಸ್​ಗಳು ಸಂಗ್ರಹಗೊಂಡಿವೆ. ಇದರಲ್ಲಿ ನಿವ್ವಳ ತೆರಿಗೆ ಮೊತ್ತ 10.60 ಲಕ್ಷ ಕೋಟಿ ರೂ ಇದೆ. 1.77 ಲಕ್ಷ ಕೋಟಿ ರೂನಷ್ಟು ಹಣವನ್ನು ರೀಫಂಡ್ ಮಾಡಲಾಗಿದೆ.

ಏನಿದು ನೇರ ತೆರಿಗೆ?

ಇದು ಆದಾಯ ಮತ್ತು ಸಂಪತ್ತುವೃದ್ಧಿಗೆ ವಿಧಿಸುವ ತೆರಿಗೆಯಾಗಿದೆ. ಇನ್ಕಮ್ ಟ್ಯಾಕ್ಸ್, ಪ್ರಾಪರ್ಟಿ ಟ್ಯಾಕ್ಸ್, ಗಿಫ್ಟ್ ಟ್ಯಾಕ್ಸ್, ಕಾರ್ಪೊರೇಶನ್ ಟ್ಯಾಕ್ಸ್, ಇನ್​ಹೆರಿಟೆನ್ಸ್ ಟ್ಯಾಕ್ಸ್ ಇತ್ಯಾದಿಯವು ಡೈರೆಕ್ಟ್ ಟ್ಯಾಕ್ಸ್ ಕೆಟಗರಿಗೆ ಸೇರುತ್ತವೆ. ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇತ್ಯಾದಿ ಕೂಡ ಇದೇ ವಿಭಾಗಕ್ಕೆ ಸೇರುತ್ತವೆ.

ಉತ್ಪನ್ನಗಳು ಮತ್ತು ಸೇವೆಗಳಿಗೆ ವಿಧಿಸುವ ಜಿಎಸ್​ಟಿ ಇತ್ಯಾದಿ ತೆರಿಗೆಗಳು ಇನ್​ಡೈರೆಕ್ಟ್ ಟ್ಯಾಕ್ಸ್ ಅಥವಾ ಪರೋಕ್ಷ ತೆರಿಗೆ ವ್ಯವಸ್ಥೆಗೆ ಬರುತ್ತವೆ.

ಇದನ್ನೂ ಓದಿ: Direct Tax Collection: ಜಿಎಸ್​ಟಿ ಮಾತ್ರವಲ್ಲ, ಈ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಹೆಚ್ಚಳ; ಇಲ್ಲಿದೆ ಡೀಟೇಲ್ಸ್

ಬಜೆಟ್ ಅಂದಾಜಿಗಿಂತ ಬಹಳ ಹೆಚ್ಚು

2023-24ರ ಹಣಕಾಸು ವರ್ಷದಲ್ಲಿ18 ಲಕ್ಷ ಕೋಟಿ ರೂಗಿಂತ ಹೆಚ್ಚು ನೇರ ತೆರಿಗೆ ಸಂಗ್ರಹ ಆಗಬಹುದು ಎಂದು ಕಳೆದ ಬಜೆಟ್​ನಲ್ಲಿ ಅಂದಾಜು ಮಾಡಲಾಗಿತ್ತು. ಈ ಹಣಕಾಸು ವರ್ಷದ ಮೊದಲಾರ್ಧದಲ್ಲೇ 12.37 ಲಕ್ಷಕೋಟಿ ರೂ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಟ್ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾದುದಕ್ಕಿಂತ ಶೇ. 18.59ರಷ್ಟು ಹೆಚ್ಚು ತೆರಿಗೆ ಈಗ ಸಿಕ್ಕಿದೆ. ಇದರೊಂದಿಗೆ, ಈ ಹಣಕಾಸು ವರ್ಷದಲ್ಲಿ ಬಜೆಟ್ ನಿರೀಕ್ಷೆಯನ್ನು ಮೀರಿ ತೆರಿಗೆ ಸಂಗ್ರಹ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Income Tax: ಹೊಸ ಅದಾಯ ತೆರಿಗೆ ವ್ಯವಸ್ಥೆಯೋ ಹಳೆಯದ್ದೋ? ಆಯ್ಕೆ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? ಸಿಬಿಡಿಟಿ ಹೊಸ ನೋಟೀಸ್​ನಲ್ಲಿ ಏನು ಹೇಳಿದೆ?

ಈ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ ಮತ್ತು ಪರ್ಸನಲ್ ಇನ್ಕಮ್ ಟ್ಯಾಕ್ಸ್ ಸಂಗ್ರಹವೂ ಕ್ರಮವಾಗಿ ಶೇ. 12.48 ಮತ್ತು ಶೇ. 31.77ರಷ್ಟು ಹೆಚ್ಚಳ ಕಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ