5G Service: 5ಜಿ ಸೇವೆ ಒದಗಿಸಲು ರಿಲಯನ್ಸ್ ಜಿಯೊ ಜತೆ ಎರಿಕ್ಸನ್ ಒಪ್ಪಂದ

|

Updated on: Oct 18, 2022 | 4:59 PM

ದೇಶದಲ್ಲಿ 5ಜಿ ಸೇವೆ ಒದಗಿಸಲು ರಿಲಯನ್ಸ್ ಜಿಯೊ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಎರಿಕ್ಸನ್ ಸೋಮವಾರ ಘೋಷಿಸಿದೆ.

5G Service: 5ಜಿ ಸೇವೆ ಒದಗಿಸಲು ರಿಲಯನ್ಸ್ ಜಿಯೊ ಜತೆ ಎರಿಕ್ಸನ್ ಒಪ್ಪಂದ
ರಿಲಯನ್ಸ್ ಜಿಯೊ
Follow us on

ನವದೆಹಲಿ: ದೇಶದಲ್ಲಿ 5ಜಿ ಸೇವೆ (5G Service) ಒದಗಿಸಲು ರಿಲಯನ್ಸ್ ಜಿಯೊ (Reliance Jio) ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಎರಿಕ್ಸನ್ (Ericsson) ಸೋಮವಾರ ಘೋಷಿಸಿದೆ. ದೇಶದಲ್ಲಿ ನೆಟ್​ವರ್ಕ್ ಸ್ಥಾಪನೆಗಾಗಿ ಎರಿಕ್ಸನ್ ಮತ್ತು ಜಿಯೊ ನಡುವೆ ಏರ್ಪಟ್ಟಿರುವ ಮೊದಲ ಒಪ್ಪಂದ ಇದಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ದೇಶದಲ್ಲಿ ಇತ್ತೀಚೆಗಷ್ಟೇ 5ಜಿ ತರಂಗಗುಚ್ಛ ಹರಾಜು ಪ್ರಕ್ರಿಯೆ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ರಿಲಯನ್ಸ್ ಜಿಯೊ ಹಾಗೂ ಎರಿಕ್ಸನ್ ನಡುವೆ ಒಪ್ಪಂದ ಏರ್ಪಟ್ಟಿದೆ.

‘5ಜಿ ಸೇವೆಗಾಗಿ ಎರಿಕ್ಸನ್ ಜತೆ ಸಹಭಾಗಿತ್ವ ಹೊಂದಿರುವುದು ಸಂತಸದ ವಿಚಾರ. ಎಲ್​ಟಿಇ ಸೇವೆ ಆರಂಭಿಸುವ ಮೂಲಕ 2016ರಲ್ಲಿ ಭಾರತದಲ್ಲಿ ಜಿಯೊ ಡಿಜಿಟಲ್​ ಕ್ರಾಂತಿಗೆ ಹೊಸ ಆಯಾಮ ನೀಡಿತ್ತು. 5ಜಿ ಸೇವೆಯು ಭಾರತದ ಡಿಜಿಟಲೀಕರಣ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಲಿದೆ. ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಪೂರಕವಾಗಲಿದೆ ಎಂಬ ಭರವಸೆ ನಮಗಿದೆ’ ಎಂದು ರಿಲಯನ್ಸ್ ಜಿಯೊ ಚೇರ್ಮನ್ ಆಕಾಶ್ ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ: 5G in India: ಭಾರತ 5ಜಿ ಸೇವೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ; ಪ್ರಧಾನಿ ನರೇಂದ್ರ ಮೋದಿ ಬಣ್ಣನೆ 

ಇದನ್ನೂ ಓದಿ
PM Kisan Samman Nidhi: ಪಿಎಂ ಕಿಸಾನ್​ ಯೋಜನೆಯ 12ನೇ ಕಂತು ಬಿಡುಗಡೆ: ಹಣ ಬಂದಿದೆಯೇ ಎಂದು ನೋಡುವುದು ಹೇಗೆ?
SBI Interest Hike: ನೀವು ಎಸ್​ಬಿಐ ಗ್ರಾಹಕರೇ? ಹೆಚ್ಚು ಮೊತ್ತದ ಇಎಂಐ ಪಾವತಿಸಲು ಸಿದ್ಧರಾಗಿ
PM Kisan 2022: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ, 12ನೇ ಕಂತಿನ ಹಣ ಬಿಡುಗಡೆ
Wheat Exports: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಗೋಧಿ ರಫ್ತು ದ್ವಿಗುಣ

ಜಿಯೊದ 5ಜಿ ಜಾಲವು ಗ್ರಾಹಕರಿಗೆ ಮತ್ತು ಉದ್ದಿಮೆಗಳಿಗೆ ಅತ್ಯುತ್ತಮ ಸೇವೆ ಒದಗಿಸಲಿದೆ. ಎರಿಕ್ಸನ್​ನ ದಕ್ಷ 5ಜಿ ರೇಡಿಯೊ ಆ್ಯಕ್ಟಿವ್ ನೆಟ್​ವರ್ಕ್ (ಆರ್​ಎಎನ್) ಉತ್ಪನ್ನಗಳು ಮತ್ತು ರೇಡಿಯೊ ಸಿಸ್ಟಂ ಹಾಗೂ ಇ-ಬಾಂಡ್ ಮೈಕ್ರೋವೇವ್ ಮೊಬೈಲ್ ಟ್ರಾನ್ಸ್​ಪೋರ್ಟ್ ಸೊಲ್ಯೂಷನ್​ ಅನ್ನು ಜಿಯೊದ 5ಜಿ ನೆಟ್​ವರ್ಕ್​ನಲ್ಲಿ ಅಳವಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.

‘ಭಾರತವು ಅನ್ವೇಷಣೆ, ಉದ್ಯೋಗ ಸೃಷ್ಟಿ, ಉದ್ಯಶೀಲತೆಗೆ ಪೂರಕವಾದ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ದೇಶದಾದ್ಯಂತ ನಿರ್ಮಿಸುತ್ತಿದೆ. ಜಿಯೊ ಸಹಭಾಗಿತ್ವದೊಂದಿಗೆ 5ಜಿ ಸೇವೆ ನೀಡಲು ಉತ್ಸುಕರಾಗಿದ್ದೇವೆ’ ಎಂದು ಎರಿಕ್ಸನ್​ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬೊರ್ಜೆ ಎಕ್​ಹಾಮ್ ಹೇಳಿದ್ದಾರೆ.

ಭಾರತದಲ್ಲಿ 5ಜಿ

ಮುಂದಿನ 2 ವರ್ಷದ ಒಳಗಾಗಿ ದೇಶದಾದ್ಯಂತ 5ಜಿ ಸೇವೆ ಆರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್ ಇತ್ತೀಚೆಗೆ ಹೇಳಿದ್ದರು. ಆಗಸ್ಟ್ ಮಧ್ಯ ಭಾಗದಲ್ಲಿ 5ಜಿ ತರಂಗಗುಚ್ಛ ಹರಾಜು ಪ್ರಕ್ರಿಯೆ ನಡೆದಿತ್ತು.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ನಾಗ್ಪುರ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ 5ಜಿ ಸೇವೆ ಆರಂಭಿಸಿರುವುದಾಗಿಯೂ 2023ರ ವೇಳೆಗೆ ದೇಶದ ಎಲ್ಲ ನಗರಗಳಲ್ಲಿಯೂ ಸೇವೆ ಒದಗಿಸುವುದಾಗಿ ಭಾರ್ತಿ ಏರ್​ಟೆಲ್ ಇತ್ತೀಚೆಗೆ ಹೇಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Mon, 17 October 22