AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wheat Exports: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಗೋಧಿ ರಫ್ತು ದ್ವಿಗುಣ

ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿ ದೇಶದ ಗೋಧಿ ರಫ್ತು ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿರುವುದು ಅಧಿಕೃತ ದತ್ತಾಂಶಗಳಿಂದ ತಿಳಿದುಬಂದಿದೆ.

Wheat Exports: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಗೋಧಿ ರಫ್ತು ದ್ವಿಗುಣ
ಸಾಂದರ್ಭಿಕ ಚಿತ್ರImage Credit source: The Indian Expres
TV9 Web
| Edited By: |

Updated on: Oct 17, 2022 | 11:08 AM

Share

ನವದೆಹಲಿ: ಪ್ರಸಕ್ತ ಹಣಕಾಸು ವರ್ಷ(Fianacial Year) ಮೊದಲ ಐದು ತಿಂಗಳುಗಳಲ್ಲಿ ದೇಶದ ಗೋಧಿ ರಫ್ತು (Wheat Exports) ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿರುವುದು ಅಧಿಕೃತ ದತ್ತಾಂಶಗಳಿಂದ ತಿಳಿದುಬಂದಿದೆ. ಮೇ ಮಧ್ಯದಲ್ಲಿ ಗೋಧಿ ರಫ್ತಿಗೆ ಸರ್ಕಾರವು ಹಠಾತ್ ನಿಷೇಧ ಹೇರಿತ್ತು. ಆದರೆ ಕೆಲವು ದೇಶಗಳಿಗೆ ಮಾತ್ರ ರಫ್ತು ಮಾಡಲು ಅನುಮತಿ ನೀಡಿತ್ತು. 2022-23ನೇ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ದೇಶವು 43.50 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಿರುವುದು ವಾಣಿಜ್ಯ ಇಲಾಖೆಯ ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.

ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಆರಂಭವಾದ ಬಳಿಕ ಗೋಧಿ ರಫ್ತು ಹೆಚ್ಚಳವಾಗಿತ್ತು. ಬೇಡಿಕೆಯಲ್ಲಿಯೂ ಗಣನೀಯ ಹೆಚ್ಚಳವಾಗಿತ್ತು. ಏಪ್ರಿಲ್​ನಲ್ಲಿ 14.71 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡಲಾಗಿತ್ತು. ಇದು ಮೇ ತಿಂಗಳಲ್ಲಿ ರಫ್ತು ನಿಷೇಧ ಹೇರಿದ ಬಳಿಕ 10.79 ಲಕ್ಷ ಮೆಟ್ರಿಕ್ ಟನ್​ಗೆ ಇಳಿಕೆಯಾಗಿತ್ತು. ಆದಾಗ್ಯೂ, ಕಳೆದ ವರ್ಷ ಮೇ ತಿಂಗಳ ರಫ್ತಿಗೆ ಹೋಲಿಸಿದರೆ ಶೇಕಡಾ 164ರಷ್ಟು ಹೆಚ್ಚಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ 4.08 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡಲಾಗಿತ್ತು.

ಇದನ್ನೂ ಓದಿ: ರೂಪಾಯಿ ಕುಸಿತವಲ್ಲ, ಡಾಲರ್​​ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ
Image
Credit Score: ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಹೇಗೆ? ಇಲ್ಲಿದೆ ಸಲಹೆ
Image
Gold Price Today: ಕುಸಿತವಾಗಿದ್ದ ಚಿನ್ನದ ಬೆಲೆ ಮತ್ತೆ 270 ರೂ. ಏರಿಕೆ; ಇಂದಿನ ಬೆಳ್ಳಿ ದರವೆಷ್ಟು ಗೊತ್ತಾ?
Image
ರೂಪಾಯಿ ಕುಸಿತವಲ್ಲ, ಡಾಲರ್​​ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Image
Digital Banking Units: ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲಿ ನೀವು ಏನೇನು ವ್ಯವಹಾರ ಮಾಡಬಹುದು?

ಮೇ ತಿಂಗಳಲ್ಲಿ ಇಳಿಕೆಯಾಗಿದ್ದ ರಫ್ತು ಪ್ರಮಾಣ ಜೂನ್​ನಲ್ಲಿ ಮತ್ತೂ ಕಡಿಮೆಯಾಗಿ 7.24 ಲಕ್ಷ ಮೆಟ್ರಿಕ್ ಟನ್​ಗೆ ಬಂದಿತ್ತು. ಜುಲೈಯಲ್ಲಿ 4.94 ಲಕ್ಷ ಮೆಟ್ರಿಕ್ ಟನ್, ಆಗಸ್ಟ್​ನಲ್ಲಿ 5.80 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತಾಗಿತ್ತು. 2021ರಲ್ಲಿ ಇದೇ ತಿಂಗಳುಗಳಲ್ಲಿ ಕ್ರಮವಾಗಿ 4.57 ಲಕ್ಷ ಮೆಟ್ರಿಕ್ ಟನ್, 3.75 ಲಕ್ಷ ಮೆಟ್ರಿಕ್ ಟನ್, 5.22 ಲಕ್ಷ ಮೆಟ್ರಿಕ್ ಟನ್ ಗೋಧಿ ರಫ್ತಾಗಿತ್ತು.

ಏಪ್ರಿಲ್​ನಲ್ಲಿ ಬಾಂಗ್ಲಾದೇಶ, ಯುಕೆ ಸೇರಿದಂತೆ 44 ದೇಶಗಳಿಗೆ ಗೋಧಿ ರಫ್ತು ಮಾಡಲಾಗಿತ್ತು. ಮೇ ತಿಂಗಳಲ್ಲಿ ರಫ್ತು ನಿಷೇಧದ ಬಳಿಕ ಕೆಲವೇ ದೇಶಗಳಿಗೆ ಮಾತ್ರ ರಫ್ತು ಮಾಡಲಾಗಿತ್ತು. ಜೂನ್​ನಲ್ಲಿ ಇಂಡೋನೇಷ್ಯಾ, ಬಾಂಗ್ಲಾದೇಶ, ಕೊರಿಯಾ, ಯುಎಇ ಹಾಗೂ ಅಂಗೋಲ ದೇಶಗಳಿಗೆ ಗೋಧಿ ರಫ್ತು ಮಾಡಲಾಗಿತ್ತು. ಸದ್ಯ ಇಂಡೋನೇಷ್ಯಾ ಭಾರತದಿಂದ ಅತಿಹೆಚ್ಚು ಗೋಧಿ ಆಮದು ಮಾಡಿಕೊಳ್ಳುತ್ತಿದೆ.

ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿಷಧೇ ಹೇರಿತ್ತು. ಆದರೆ, ಬೇರೆ ದೇಶಗಳ ಆಹಾರ ಸುರಕ್ಷತೆಗಾಗಿ ಆಯಾ ದೇಶಗಳ ಮನವಿಯ ಮೇರೆಗೆ ಭಾರತ ಸರ್ಕಾರದ ಅನುಮತಿ ಪಡೆದು ರಫ್ತು ಮಾಡಲು ಅನುಮತಿ ನೀಡಿತ್ತು.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ