ESIC: ನವೆಂಬರ್ ತಿಂಗಳಲ್ಲಿ 15.92 ಲಕ್ಷ ಹೊಸ ಇಎಸ್​ಐ ಸದಸ್ಯರ ಸೇರ್ಪಡೆ; 24 ವರ್ಷದೊಳಗಿನವರು ಶೇ. 47

|

Updated on: Jan 16, 2024 | 3:39 PM

Employees' State Insurance Corporation: ಉದ್ಯೋಗಿಗಳಿಗೆ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ಒದಗಿಸುವ ಇಎಸ್​ಐಸಿಗೆ 2023ರ ನವೆಂಬರ್​ನಲ್ಲಿ 15.92 ಲಕ್ಷ ಹೊಸ ಸದಸ್ಯರ ಸೇರ್ಪಡೆಯಾಗಿದೆ. 25 ವರ್ಷ ವಯೋಮಾನದವರಾದ 7.47 ಲಕ್ಷ ಮಂದಿ ಇಎಸ್​ಐಸಿಯ ಹೊಸ ಸದಸ್ಯರ ಪೈಕಿ ಇದ್ದಾರೆ. 21,000 ರೂ ಹಾಗೂ ಅದಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮೆಡಿಕಲ್ ಇನ್ಷೂರೆನ್ಸ್ ಒದಗಿಸುತ್ತದೆ ಇಎಸ್​ಐಸಿ.

ESIC: ನವೆಂಬರ್ ತಿಂಗಳಲ್ಲಿ 15.92 ಲಕ್ಷ ಹೊಸ ಇಎಸ್​ಐ ಸದಸ್ಯರ ಸೇರ್ಪಡೆ; 24 ವರ್ಷದೊಳಗಿನವರು ಶೇ. 47
ಇಎಸ್​ಐ
Follow us on

ನವದೆಹಲಿ, ಜನವರಿ 16: ಸರ್ಕಾರಿ ನಿಯಂತ್ರಣದ ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಶನ್ (ESIC- Employees’ State Insurance Corporation) 2023ರ ನವೆಂಬರ್ ತಿಂಗಳಲ್ಲಿ 15.92 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿದೆ. ಇಎಸ್​ಐಸಿ ವ್ಯಾಪ್ತಿಗೆ ಆ ತಿಂಗಳಲ್ಲಿ 20,830 ಹೊಸ ಸಂಸ್ಥೆಗಳು ಸೇರಿವೆ. ಇಂದು ಮಂಗಳವಾರ (ಜ. 16) ಬಿಡುಗಡೆ ಮಾಡಲಾದ ದತ್ತಾಂಶದ ಪ್ರಕಾರ, ಇಎಸ್​ಐಸಿಗೆ ಸೇರ್ಪಡೆಯಾದ 15.92 ಲಕ್ಷ ಹೊಸ ಉದ್ಯೋಗಿಗಳ ಪೈಕಿ ಶೇ 47ರಷ್ಟು ಮಂದಿ 25 ವರ್ಷ ವಯೋಮಾನಕ್ಕೆ ಸೇರಿದವರಾಗಿದ್ದಾರೆ. 7.47 ಲಕ್ಷ ಹೊಸ ಸದಸ್ಯರು 24 ವರ್ಷದೊಳಗಿನ ವಯಸ್ಸಿನವರೇ ಆಗಿದ್ದಾರೆ.

ಇನ್ನು, ಇಎಸ್​ಐಸಿಗೆ ಹೊಸ ಸದಸ್ಯತ್ವ ಪಡೆದವರ ಪೈಕಿ ಮಹಿಳಾ ಉದ್ಯೋಗಿಗಳ ಸಂಖ್ಯೆ 3.17 ಲಕ್ಷ ಇದೆ. ಹಾಗೆಯೇ, 58 ಲಿಂಗ ಪರ್ತಿತ ವ್ಯಕ್ತಿಗಳೂ ಇದರಲ್ಲಿ ಇದ್ದಾರೆ.

ಏನಿದು ಇಎಸ್​ಐಸಿ?

ಇಎಸ್​ಐಸಿ ಎಂಬುದು ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆ. ಇಪಿಎಫ್​ಒಗೆ ಜೋಡಿತವಾಗುವ ರೀತಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಇಎಸ್​ಐಸಿಗೆ ಜೋಡಿತಗೊಂಡಿರುತ್ತವೆ. ಇದು ತಿಂಗಳಿಗೆ 25,000 ರೂಗಿಂತ ಕಡಿಮೆ ಸಂಬಳ ಹೊಂದಿರುವ ಉದ್ಯೋಗಿಗಳಿಗೆ ಮೆಡಿಕಲ್ ಇನ್ಷೂರೆನ್ಸ್ ಒದಗಿಸಲಾಗುತ್ತದೆ.

ಇದನ್ನೂ ಓದಿ: ಯುಪಿಐ ಆ್ಯಪ್​ನಲ್ಲಿ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಪಡೆಯುವುದು ಹೇಗೆ? ಈ ವರ್ಷ ಆಗಿರುವ ಇತರ ಯುಪಿಐ ಬದಲಾವಣೆಗಳನ್ನು ತಿಳಿದಿರಿ

ಈ ಸ್ಕೀಮ್​ನಲ್ಲಿ ಉದ್ಯೋಗಿಯ ಸಂಬಳದ ಶೇ. 0.75ರಷ್ಟು ವೇತನವನ್ನು ಪ್ರತೀ ತಿಂಗಳು ಇಎಸ್​ಐಗೆ ಮುರಿದುಕೊಳ್ಳಲಾಗುತ್ತದೆ. ಸಂಸ್ಥೆ ವತಿಯಿಂದ ಶೇ. 3.25ರಷ್ಟು ಹಣವನ್ನು ಇಎಸ್​ಐ ಅಕೌಂಟ್​ಗೆ ಜಮೆ ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ಉದ್ಯೋಗಿಗೆ 20,000 ರೂ ಸಂಬಳ ಬರುತ್ತಿದ್ದರೆ, ಸಂಬಳದಲ್ಲಿ 150 ರೂವನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ ಸಂಸ್ಥೆ 650 ರೂ ಹಣವನ್ನು ಸೇರಿಸಿ ಹಾಕುತ್ತದೆ.

ಇಎಸ್​ಐ ಒಂದು ಮೆಡಿಕಲ್ ಇನ್ಷೂರೆನ್ಸ್ ಸ್ಕೀಮ್ ಆಗಿದೆ. ದೇಶಾದ್ಯಂತ ಇರುವ ಇಎಸ್​ಐ ಆಸ್ಪತ್ರೆಗಳಲ್ಲಿ ಉದ್ಯೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಅಥವಾ ಇಎಸ್​ಐ ಆಸ್ಪತ್ರೆಯ ವೈದ್ಯರ ಶಿಫಾರಸು ಮೇರೆಗೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ