ಯುಪಿಐ ಆ್ಯಪ್​ನಲ್ಲಿ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಪಡೆಯುವುದು ಹೇಗೆ? ಈ ವರ್ಷ ಆಗಿರುವ ಇತರ ಯುಪಿಐ ಬದಲಾವಣೆಗಳನ್ನು ತಿಳಿದಿರಿ

UPI Updates: ದೇಶದ ಪ್ರಮುಖ ಡಿಜಿಟಲ್ ವಹಿವಾಟು ವಿಧಾನವಾದ ಯುಪಿಐನಲ್ಲಿ ಆಗಾಗ್ಗೆ ಮಾರ್ಪಾಡು, ಸುಧಾರಣೆಗಳು ಆಗುತ್ತಿರುತ್ತವೆ. ಈ ವರ್ಷದಿಂದ ಕೆಲ ಪ್ರಮುಖ ಯುಪಿಐ ಬದಲಾವಣೆಗಳ ಬಗ್ಗೆ ಪರಿಚಯ ಇಲ್ಲಿದೆ. ಯುಪಿಐ ಪ್ರೀ ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್, ಅಗತ್ಯ ವಹಿವಾಟುಗಳಿಗೆ ಹಣದ ಮಿತಿ ಹೆಚ್ಚಳ, ಷೇರು ವಹಿವಾಟಿನಲ್ಲಿ ಯುಪಿಐ ಬಳಕೆ ಇತ್ಯಾದಿ ಸೌಲಭ್ಯ ಇವೆ.

ಯುಪಿಐ ಆ್ಯಪ್​ನಲ್ಲಿ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಪಡೆಯುವುದು ಹೇಗೆ? ಈ ವರ್ಷ ಆಗಿರುವ ಇತರ ಯುಪಿಐ ಬದಲಾವಣೆಗಳನ್ನು ತಿಳಿದಿರಿ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2024 | 12:15 PM

ಯುಪಿಐ ಅಥವಾ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI- Unified Payments Interface) ಎಂಬುದು ಹಣ ಪಾವತಿಸುವ ಹಲವು ವಿಧಾನಗಳಲ್ಲಿ ಒಂದು. ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಮತ್ತು ಯುಪಿಐ ಅನ್ನು ಜೋಡಿಸುವುದು, ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಗೂಗಲ್ ಪೇ, ಫೋನ್​ಪೇ, ಪೇಟಿಎಂ ಇತ್ಯಾದಿ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಿ ಅವಕ್ಕೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದರೆ ಸಾಕು ಸುಲಭವಾಗಿ ಪೇಮೆಂಟ್ ಮಾಡಬಹುದು. ಇವತ್ತು ಯುಪಿಐ ಮೂಲಕ ದೇಶಾದ್ಯಂತ ಒಂದು ದಿನದಲ್ಲಿ ಕೋಟ್ಯಂತರ ವಹಿವಾಟುಗಳು ನಡೆಯುತ್ತವೆ. ಸಾವಿರಾರು ಕೋಟಿ ರೂ ಮೊತ್ತದ ಹಣ ವರ್ಗಾವಣೆಗಳು ಆಗುತ್ತವೆ. ಈ ವರ್ಷ ಯುಪಿಐ ಪಾವತಿ ವಿಚಾರದಲ್ಲಿ ಕೆಲವಿಷ್ಟು ಗಮನಾರ್ಹ ಬದಲಾವಣೆಗಳಾಗಿವೆ. ಅವುಗಳೇನು ಎಂಬ ವಿವರ ಇಲ್ಲಿದೆ…

ಯುಪಿಐನಲ್ಲಿ ಪೂರ್ವ ಅನುಮೋದಿತ ಸಾಲ

ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ರೀತಿ ಸಾಲ ಸೌಲಭ್ಯ ಕೊಡಲಾಗುತ್ತದೆ. ಇದಕ್ಕೆ ಪ್ರೀ ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್ ಎನ್ನುತ್ತಾರೆ. ಬ್ಯಾಂಕ್ ಖಾತೆಯಲ್ಲಿ ಹಣದ ಬ್ಯಾಲನ್ಸ್ ಇಲ್ಲದಿದ್ದರೂ ನಿರ್ದಿಷ್ಟ ಮಿತಿಯವರೆಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

ಆಸ್ಪತ್ರೆ, ಶಿಕ್ಷಣ ವೆಚ್ಚಕ್ಕೆ ಯುಪಿಐ ವಹಿವಾಟು ಮಿತಿ ಹೆಚ್ಚಳ

ಯುಪಿಐನಲ್ಲಿ ದಿನವೊಂದಕ್ಕೆ 1 ಲಕ್ಷ ರೂವರೆಗೆ ವಹಿವಾಟು ನಡೆಸಲು ಅವಕಾಶ ಇದೆ. ಆದರೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹಣ ಪಾವತಿಸುವುದಿದ್ದರೆ ಈ ಮಿತಿಯನ್ನು 5 ಲಕ್ಷ ರೂಗೆ ಏರಿಸಲಾಗಿದೆ.

ಇದನ್ನೂ ಓದಿ: 40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!

ಷೇರು ಮಾರುಕಟ್ಟೆಯಲ್ಲಿ ಯುಪಿಐ

ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ‘ಯುಪಿಐ ಫಾರ್ ಸೆಕಂಡರಿ ಮಾರ್ಕೆಟ್’ ಎಂಬ ಫೀಚರ್ ಹೊರತಂದಿದೆ. ಸೆಕಂಡರಿ ಮಾರ್ಕೆಟ್ ಎಂದರೆ ಷೇರು, ಬಾಂಡ್ ಇತ್ಯಾದಿ ವಹಿವಾಟುಗಳು ನಡೆಯುವ ಷೇರು ವಿನಿಮಯ ಕೇಂದ್ರ. ಇಲ್ಲಿ ವಹಿವಾಟಿನ ತರುವಾಯ ಹಣ ಪಾವತಿಗೆ ಯುಪಿಐ ಬಳಸಲು ಅವಕಾಶ ಕೊಡಲಾಗುತ್ತಿದೆ. ಇನ್ನೂ ಇದು ಬೀಟಾ ಹಂತದಲ್ಲಿದೆ.

ಯುಪಿಐ ಎಟಿಎಂಗಳು

ಎಟಿಎಂಗಳಲ್ಲಿ ನಗದು ಹಣ ಪಡೆಯಲು ಕಾರ್ಡ್ ಬೇಕು. ಆದರೆ, ಯುಪಿಐ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಕ್ಯಾಷ್ ಪಡೆಯಬಹುದು. ಇಂಥ ಎಟಿಎಂಗಳಲ್ಲಿ ಕ್ಯುಆರ್ ಕೋಡ್ ಇರುತ್ತದೆ. ಪೇಟಿಎಂ, ಫೋನ್ ಪೆ ಇತ್ಯಾದಿ ಆ್ಯಪ್​ನಿಂದ ಈ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ನಿರ್ದಿಷ್ಟ ಮೊತ್ತದವರೆಗಿನ ಹಣವನ್ನು ವಿತ್​ಡ್ರಾ ಮಾಡಬಹುದು.

ಹಣ ವರ್ಗಾವಣೆಯಲ್ಲಿ ಕೂಲಿಂಗ್ ಅವಧಿ

ಆಕಸ್ಮಿಕವಾಗಿ ತಪ್ಪಾಗಿ ಹಣ ವರ್ಗಾವಣೆ ಆಗುವ ಸಂಭವ ಇರುತ್ತದೆ. ಇದನ್ನು ತಪ್ಪಿಸಲು 4 ಗಂಟೆಯ ಕೂಲಿಂಗ್ ಪೀರಿಯಡ್ ಫೀಚರ್ ಅನ್ನು ಆರ್​ಬಿಐ ಪ್ರಸ್ತಾಪಿಸಿದೆ. ಮೊದಲ ಬಾರಿಗೆ ಯಾರಿಗಾದರೂ ಯುಪಿಐ ಮೂಲಕ ಹಣ ಕಳುಹಿಸಿದಾಗ ಆ ಹಣ 4 ಗಂಟೆಯವರೆಗೆ ಸ್ಟ್ಯಾಂಡ್​ಬೈನಲ್ಲಿ ಇರುತ್ತದೆ. ನೀವು ಈ ಅವಧಿಯೊಳಗೆ ಹಣವನ್ನು ಹಿಂಪಡೆಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: Tax: ದೇಶದ ಅರ್ಧದಷ್ಟು ಜನ ಟ್ಯಾಕ್ಸ್ ಕಟ್ಟಲ್ಲ! ತೆರಿಗೆ ಕಟ್ಟಲು ಬಯಸುವವರ ಸಂಖ್ಯೆ ತೀರಾ ಕಡಿಮೆ

ಯುಪಿಐನಲ್ಲಿ ಕ್ರೆಡಿಟ್ ಲೈನ್ ಪಡೆಯುವುದು ಹೇಗೆ?

ಯುಪಿಐ ಆ್ಯಪ್​ನಲ್ಲಿ ನೀವು ಕ್ರೆಡಿಟ್ ಲೈನ್ ಪಡೆಯಬಯಸಿದರೆ ಬ್ಯಾಂಕ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅಂದರೆ ನಿಮ್ಮ ಯುಪಿಐ ಆ್ಯಪ್​ನಲ್ಲಿ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಕಚೇರಿಗೆ ಹೋಗಿ ಕ್ರೆಡಿಟ್ ಲೈನ್​ಗಾಗಿ ಅರ್ಜಿ ಸಲ್ಲಿಸಬೇಕು. ಕ್ರೆಡಿಟ್ ಕಾರ್ಡ್​ಗೆ ಇರುವಂತೆ ನಿಮ್ಮ ಯುಪಿಐ ಕ್ರೆಡಿಟ್ ಲೈನ್​ಗೆ ಬ್ಯಾಂಕು ನಿರ್ದಿಷ್ಟ ಹಣದ ಮಿತಿ ನಿರ್ಧರಿಸುತ್ತದೆ.

ಇದು ನಿಮ್ಮ ಹಣಕಾಸು ಪರಿಸ್ಥಿತಿ, ಕ್ರೆಡಿಟ್ ಸ್ಕೋರ್ ಇತ್ಯಾದಿ ಮೇಲೆ ಅವಲಂಬಿತವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ