Avtar Saini: ಸೈಕ್ಲಿಂಗ್ ವೇಳೆ ಅಪಘಾತ; ಮಾಜಿ ಇಂಟೆಲ್ ಇಂಡಿಯಾ ಮುಖ್ಯಸ್ಥ ಅವತಾರ್ ಸೈನಿ ದುರ್ಮರಣ; ಪೆಂಟಿಯಂ ಪ್ರೋಸಸರ್ ಹಿಂದಿನ ಮಾಸ್ಟರ್​ಮೈಂಡ್ ಇವರು

|

Updated on: Feb 29, 2024 | 4:10 PM

Former Intel India Chief Avtar Saini Succumbs to Injury: ಇಂಟೆಲ್ ಇಂಡಿಯಾದ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮುಂಬೈನಲ್ಲಿ ಸೈಕಲ್​ನಲ್ಲಿ ಹೋಗುವಾಗ ಟ್ಯಾಕ್ಸಿ ಗುದ್ದಿ ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. 68 ವರ್ಷದ ಸೈನಿ ಅವರು ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ. ಪತ್ನಿ ಮೂರು ವರ್ಷದ ಹಿಂದೆ ಸ್ವರ್ಗಸ್ಥರಾಗಿದ್ದರು. ಅವತಾರ್ ಸೈನಿ ಚಿಪ್ ಡಿಸೈನಿಂಗ್​ನಲ್ಲಿ ನಿಷ್ಣಾತರಾಗಿದ್ದ ಇಂಟೆಲ್​ನ ಪ್ರಮುಖ ಪ್ರೋಸಸರ್​ಗಳ ಸೃಷ್ಟಿಗೆ ಕಾರಣರಾಗಿದ್ದರು.

Avtar Saini: ಸೈಕ್ಲಿಂಗ್ ವೇಳೆ ಅಪಘಾತ; ಮಾಜಿ ಇಂಟೆಲ್ ಇಂಡಿಯಾ ಮುಖ್ಯಸ್ಥ ಅವತಾರ್ ಸೈನಿ ದುರ್ಮರಣ; ಪೆಂಟಿಯಂ ಪ್ರೋಸಸರ್ ಹಿಂದಿನ ಮಾಸ್ಟರ್​ಮೈಂಡ್ ಇವರು
ಅವತಾರ್ ಸೈನಿ
Follow us on

ಮುಂಬೈ, ಫೆಬ್ರುವರಿ 29: ಇಂಟೆಲ್ ಸಂಸ್ಥೆಯ ಭಾರತ ವಿಭಾಗದ ಮಾಜಿ ಮುಖ್ಯಸ್ಥ ಅವತಾರ್ ಸೈನಿ (Avtar Saini) ಅಪಘಾತದಲ್ಲಿ (accident) ಮೃತಪಟ್ಟಿರುವ ದಾರುಣ ಘಟನೆ ನಿನ್ನೆ (ಫೆ. 28) ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ನವಿ ಮುಂಬೈನಲ್ಲಿ ತಮ್ಮ ಸೈಕ್ಲಿಸ್ಟ್ ಗ್ರೂಪ್ ಜೊತೆ ಸೈಕ್ಲಿಂಗ್ ಮಾಡುವಾಗ ಬುಧವಾರ ಬೆಳಗ್ಗಿನ ಜಾವ 5:50ರ ವೇಳೆ ಟ್ಯಾಕ್ಸಿ ಗುದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ತಲುಪುವ ಮುನ್ನವೇ ಅಸು ನೀಗಿದ್ದಾರೆ. ಆ ಅಪಘಾತದಲ್ಲಿ 68 ವರ್ಷದ ಅವತಾರ್ ಸೈನಿ ಅವರಿಗೆ ಸಾಕಷ್ಟು ಗಂಭೀರ ಗಾಯಗಳಾಗಿದ್ದವು. ಅವತಾರ್ ಸೈನಿ ಅವರು ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ. ಅವರ ಪತ್ನಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಮಗಳು ಅಮೆರಿಕದಲ್ಲಿ ಇದ್ದಾರೆ.

ನವಿ ಮುಂಬೈನ ನೇರುಲ್ ಜಂಕ್ಷನ್ ಮತ್ತು ಎನ್​ಆರ್​ಐ ಸೀವುಡ್ಸ್ ಸಿಗ್ನಲ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಸೈಕ್ಲಿಂಗ್ ಮಾಡುವ ವೇಳೆ ಸೈನಿ ಅವರ ಸೈಕಲ್​ಗೆ ಹಿಂಬದಿಯಿಂದ ಟ್ಯಾಕ್ಸಿ ಹೋಗಿ ಗುದ್ದಿದೆ. ಅದರ ಪರಿಣಾಮವಾಗಿ ಸೈನಿ ಅವರು ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ರಭಸ ಎಷ್ಟಿತ್ತೆಂದರೆ ಕ್ಯಾಬ್​ನ ಫ್ರಂಟ್ ವೀಲ್ ಅಡಿಗೆ ಸೈಕಲ್ ಸಿಕ್ಕಿಕೊಳ್ಳುತ್ತದೆ. ಆ ಸ್ಥಿತಿಯಲ್ಲೇ ಕ್ಯಾಬ್ ಡ್ರೈವರ್ ಕಾರು ಚಲಾಯಿಸಿಕೊಂಡು ಹೋಗುತ್ತಾರೆ. ಒಂದು ಕಿಲೋಮೀಟರ್ ದೂರ ಹೋದ ಬಳಿಕ ಕಾರನ್ನು ತಡೆಯಲಾಗುತ್ತದೆ.

ಇದನ್ನೂ ಓದಿ: ರೆಬೆಲ್ ಭಾರತ; ಅತ್ತ ಅಮೆರಿಕಕ್ಕೂ ಜಗ್ಗದು, ಇತ್ತ ಚೀನಾಗೂ ಜಗ್ಗದು; ಡಬ್ಲ್ಯುಟಿಒ ಸಭೆಯ ರೋಚಕ ಅಂಶಗಳು

ಇಂಟೆಲ್ ಪ್ರೋಸಸರ್​ನ ಮಾಸ್ಟರ್ ಮೈಂಡ್

68 ವರ್ಷದ ಅವತಾರ್ ಸೈನಿ ಅವರು ಚಿಪ್ ಡಿಸೈನಿಂಗ್​ನಲ್ಲಿ ಹೆಸರುವಾಸಿಯಾಗಿದ್ದಾರೆ. 90ರ ದಶಕದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಇಂಟೆಲ್ 386 ಮತ್ತು 486 ಮತ್ತು ಪೆಂಟಿಯಂ ಪ್ರೋಸಸರ್​ಗಳ ಡಿಸೈನಿಂಗ್​ನಲ್ಲಿ ಇವರ ಪಾತ್ರ ಬಹಳ ಮಹತ್ವದ್ದಿತ್ತು.

ಮುಂಬೈ ಸಂಜಾತರೇ ಆದ ಸೈನಿ ಮೆನ್ನೆಸೋಟ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮಾಡಿ, 1982ರಲ್ಲಿ ಇಂಟೆಲ್ ಸಂಸ್ಥೆಗೆ ಉದ್ಯೋಗಕ್ಕೆ ಸೇರಿದರು. ಆಗ 16 ಬಿಟ್ ಪ್ರೋಸಸರ್ ಮತ್ತು 32 ಬಿಟ್ ಪ್ರೋಸಸರ್​ಗಳ ಕಾಲವಿತ್ತು. 64 ಬಿಟ್ ಪ್ರೋಸಸರ್​ಗಳನ್ನು ತಯಾರಿಸಲು ಸೈನಿ ಅವರ ಎಂಜಿನಿಯರಿಂಗ್ ಕೌಶಲ್ಯ ಸಹಾಯಕ್ಕೆ ಬಂದಿತ್ತು.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಈ ಬಾರಿ ಬಂದಿಲ್ಲವಾ? ಇಲ್ಲಿ ವಿಚಾರಿಸಿ

1999ರಲ್ಲಿ ಅವತಾರ್ ಸೈನಿ ಇಂಟೆಲ್ ಸೌತ್ ಏಷ್ಯಾದ ನಿರ್ದೇಶಕರಾಗಿ ಬೆಂಗಳೂರಿಗೆ ಬಂದರು. ಇವರ ಮುಂದಾಳತ್ವದಲ್ಲಿ ಇಂಟೆಲ್ ಇಟಾನಿಯಮ್ ಚಿಪ್ ತಯಾರಿಕೆ ನಡೆಸಲಾಯಿತು. ಇದರಲ್ಲಿ ಸೈನಿ 5 ಪೇಟೆಂಟ್ ಪಡೆಯುವಲ್ಲಿ ಯಶಸ್ವಿಯಾಗದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ