AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Phone: ಕ್ವಾಲ್​ಕಾಮ್, ಜಿಯೋದಿಂದ ಕೇವಲ 99 ಡಾಲರ್​ಗೆ 5ಜಿ ಸ್ಮಾರ್ಟ್​ಫೋನ್?; ಕಡಿಮೆ ಬೆಲೆಗೆ ಚಿಪ್​ಸೆಟ್ ಕೊಡಲಿರುವ ಅಮೆರಿಕನ್ ಕಂಪನಿ

Qualcomm To Supply Low price powerful chipset: ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಈಗ ಅಮೆರಿಕದ ಚಿಪ್ ಮೇಕರ್ ಕ್ವಾಲ್​ಕಾಮ್ ಜೊತೆ ಸೇರಿ 5ಜಿ ಸ್ಮಾರ್ಟ್​ಫೋನ್ ತಯಾರಿಸಲಿದೆ. ವರದಿ ಪ್ರಕಾರ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿರುವ ಜಿಯೋ ಫೋನ್​ನ ಬೆಲೆ 99 ಡಾಲರ್​ಗಿಂತ ಕಡಿಮೆ ಇರಲಿದೆ ಎನ್ನಲಾಗುತ್ತಿದೆ. ಕ್ವಾಲ್​ಕಾಮ್ ಸಂಸ್ಥೆ ಅಗ್ಗದ ದರದಲ್ಲಿ ಶಕ್ತಿಶಾಲಿಯಾದ ಚಿಪ್​ಸೆಟ್ ತಯಾರಿಸಿಕೊಡಲಿದೆ.

Jio Phone: ಕ್ವಾಲ್​ಕಾಮ್, ಜಿಯೋದಿಂದ ಕೇವಲ 99 ಡಾಲರ್​ಗೆ 5ಜಿ ಸ್ಮಾರ್ಟ್​ಫೋನ್?; ಕಡಿಮೆ ಬೆಲೆಗೆ ಚಿಪ್​ಸೆಟ್ ಕೊಡಲಿರುವ ಅಮೆರಿಕನ್ ಕಂಪನಿ
ಕ್ವಾಲ್​ಕಾಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 27, 2024 | 4:01 PM

Share

ನವದೆಹಲಿ, ಫೆಬ್ರುವರಿ 27: ಭಾರತದಲ್ಲಿ ಸದ್ಯದಲ್ಲೇ ಅಗ್ಗದ ದರದಲ್ಲಿ 5ಜಿ ಸ್ಮಾರ್ಟ್​ಫೋನ್​ಗಳು ಸಿಗಲಿವೆ. ಅಮೆರಿಕದ ಪ್ರಮುಖ ಚಿಪ್ ತಯಾರಕ ಕಂಪನಿ ಎನಿಸಿದ ಕ್ವಾಲ್​ಕಾಮ್ (Qualcomm) ಭಾರತೀಯ ಮಾರುಕಟ್ಟೆಗೆ ಹೊಸ ಚಿಪ್​ಸೆಟ್ ಬಿಡುಗಡೆ ಮಾಡಲು ಯೋಜಿಸಿದೆ. ಅಗ್ಗದ ದರದ ಈ ಚಿಪ್​ಸೆಟ್​ನಿಂದಾಗಿ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್ ತಯಾರಿಸಲು ಸಾಧ್ಯವಾಗುತ್ತದೆ. ಕ್ವಾಲ್​ಕಾಮ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಜಿಯೋ (Reliance Jio) ಸದ್ಯದಲ್ಲೇ 5ಜಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಲಿದೆ. ವರದಿ ಪ್ರಕಾರ, ಈ ವರ್ಷಾಂತಕ್ಕೆ ಜಿಯೋ ಫೋನ್​ಗಳು ಬರಲಿವೆ. ಇದರ ಬೆಲೆ 99 ಡಾಲರ್​ಗಿಂತ ಕಡಿಮೆ ಎನ್ನಲಾಗಿದೆ. ಅಂದರೆ 8,500 ರೂಗಿಂತ ಕಡಿಮೆ ಬೆಲೆಗೆ 5ಜಿ ಜಿಯೋ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಸಿಗುವ ನಿರೀಕ್ಷೆ ಇದೆ.

ಕ್ವಾಲ್​ಕಾಮ್​ನಿಂದ ತಯಾರಾಗುವ ಚಿಪ್ ಮೂಲಕ ಅಗ್ಗದ ಬೆಲೆಯಲ್ಲಿ ಶಕ್ತಿಶಾಲಿ ಪ್ರೋಸಸರ್ ಸಿದ್ಧವಾಗಲಿದೆ. 5ಜಿ ನೆಟ್ವರ್ಕ್​ನಲ್ಲಿ ಗೀಗಾಬಿಟ್ ಸ್ಪೀಡ್ ತರಲು ಈ ಆಕ್ಟಿಕೆಕ್ಚರ್​ನಿಂದ ಸಾಧ್ಯ ಎನ್ನಲಾಗಿದೆ.

2022ರ ಆಗಸ್ಟ್ ತಿಂಗಳಲ್ಲಿ ನಡೆದ ರಿಲಾಯನ್ಸ್ ಇಂಡಸ್ಟ್ರೀಸ್​ನ 45ನೇ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಅವರು ರಿಲಾಯನ್ಸ್ ಜಿಯೋ ಮತ್ತು ಕ್ವಾಲ್​ಕಾಮ್ ನಡುವಿನ ಒಪ್ಪಂದದ ಬಗ್ಗೆ ಮಾತನಾಡಿದ್ದರು. ಭಾರತದಲ್ಲಿ 5ಜಿ ಉತ್ಪನ್ನಗಳನ್ನು ತಯಾರಿಸಿ, ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೆ ರಫ್ತು ಮಾಡುವ ಯೋಜನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ಸರ್ಕಾರದಿಂದ ಸಿಎನ್​ಎಪಿ ಅಸ್ತ್ರ; ಟ್ರೂಕಾಲರ್​ಗೆ ಇದು ಮಾರಕಾಸ್ತ್ರವಾ? ಟೆಲಿಕಾಂ ಕಂಪನಿಗಳಿಗೂ ತಲೆನೋವು

ಕ್ವಾಲ್​ಕಾಮ್ ಅಮೆರಿಕದ ಪ್ರಮುಖ ಚಿಪ್ ಮೇಕರ್ ಆಗಿದೆ. ಭಾರತದಲ್ಲಿ ಇದರ ಆರ್ ಅಂಡ್ ಡಿ ಕೇಂದ್ರಗಳಿವೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ನೋಯಿಡಾದಲ್ಲಿ ಇದರ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಚೆನ್ನೈನಲ್ಲಿ 177 ಕೋಟಿ ರೂ ಹೂಡಿಕೆಯಲ್ಲಿ ಚಿಪ್ ಡಿಸೈನ್ ಸೆಂಟರ್ ತೆರೆಯಲು ಕ್ವಾಲ್​ಕಾಮ್ ಸಿದ್ಧವಾಗಿದೆ.

ರಿಲಾಯನ್ಸ್ ಜಿಯೋದ ಚುಕ್ಕಾಣಿ ಮುಕೇಶ್ ಅಂಬಾನಿ ಬಳಿ ಇದೆಯಾದರೂ ಅವರ ಹಿರಿಯ ಮಗ ಆಕಾಶ್ ಅಂಬಾನಿ ಜಿಯೋದ ಭವಿಷ್ಯದ ನಾಯಕನಾಗಿ ಬೆಳೆಯುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 27 February 24

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು