Dunzo: ಬಾಕಿ ಹಣ ಪಾವತಿಸಿಲ್ಲವೆಂದು ಡುಂಜೋಗೆ ಲೀಗಲ್ ನೋಟಿಸ್ ಕೊಟ್ಟ ಬೆಂಗಳೂರಿನ ಲಿನೇನ್ಸೋ ಮತ್ತು ಫೇಸ್​ಬುಕ್

|

Updated on: Jul 21, 2023 | 10:23 AM

Legal Notice: ಹಣ ಪಾವತಿ ಮಾಡಿಲ್ಲವೆಂದು ಗೂಗಲ್​ನಿಂದ ನೋಟೀಸ್ ಪಡೆದಿದ್ದ ಡುಂಜೋ ಸಂಸ್ಥೆಗೆ ಈಗ ಫೇಸ್​ಬುಕ್ ಮತ್ತು ಲಿನೇನ್ಸೋದಿಂದಲೂ ಲೀಗಲ್ ನೋಟೀಸ್ ಸಿಕ್ಕಿದೆ. ಒಟ್ಟು ಐದಾರು ಕೋಟಿ ರೂನಷ್ಟು ಹಣ ಬಾಕಿ ಉಳಿಸಿಕೊಂಡಿದೆ ಡುಂಜೋ.

Dunzo: ಬಾಕಿ ಹಣ ಪಾವತಿಸಿಲ್ಲವೆಂದು ಡುಂಜೋಗೆ ಲೀಗಲ್ ನೋಟಿಸ್ ಕೊಟ್ಟ ಬೆಂಗಳೂರಿನ ಲಿನೇನ್ಸೋ ಮತ್ತು ಫೇಸ್​ಬುಕ್
ಡುಂಜೋ
Follow us on

ಬೆಂಗಳೂರು, ಜುಲೈ 20: ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ಬಂಡವಾಳದಲ್ಲಿ ನಡೆಯುತ್ತಿರುವ ಡೆಲಿವರಿ ಕಂಪನಿ ಡುಂಜೋ (Dunzo) ವಿರುದ್ಧ ಎರಡು ಸಂಸ್ಥೆಗಳು ಲೀಗಲ್ ನೋಟೀಸ್ ಕಳುಹಿಸಿವೆ. ತಮಗೆ ಕೊಡಬೇಕಿರುವ ಹಣ ಬಾಕಿ ಉಳಿಸಿಕೊಂಡಿದೆ ಎಂದು ಫೇಸ್​ಬುಕ್ ಮತ್ತು ನಿಲೇನ್ಸೋ ಸಂಸ್ಥೆಗಳು ಡುಂಜೋಗೆ ನೋಟೀಸ್ ಜಾರಿ ಮಾಡಿವೆ ಎಂದು ಮನಿಕಂಟ್ರೋಲ್ ಜಾಲತಾಣ ವರದಿ ಮಾಡಿದೆ. ಡುಂಜೋ ಬಾಕಿ ಉಳಿಸಿಕೊಂಡಿರುವ ಹಣ 5ರಿಂದ 6 ಕೋಟಿ ಇರಬಹುದು ಎಂದು ಹೇಳಲಾಗುತ್ತಿದೆ.

ಡುಂಜೋ ತನಗೆ 1.5 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ ಎಂದು ಫೇಸ್​ಬುಕ್ ಇಂಡಿಯಾ ಆನ್ಲೈನ್ ಸರ್ವಿಸಸ್ ಪ್ರೈ ಲಿ (ಎಫ್​ಬಿಐ) ಹೇಳಿದೆ. ಫೇಸ್ಬುಕ್​ನ ಅಡ್ವರ್ಟೈಸಿಂಗ್ ಸೇವೆಗಳನ್ನು ಉಪಯೋಗಿಸಿದ್ದ ಡುಂಜೋ, ಅದಕ್ಕೆ ಪೂರ್ಣ ಮೊತ್ತವನ್ನು ಪಾವತಿಸಿರಲಿಲ್ಲ. ಮಾತುಕತೆ ಬಳಿಕ ಡುಂಜೋ ಒಂದಷ್ಟು ಹಣ ಪಾವತಿಸಿತಾದರೂ ಇನ್ನೂ 1.5 ಕೋಟಿ ರೂನಷ್ಟು ಬಾಕಿ ಇದೆ ಎಂದು ಎಫ್​ಬಿಐ ಸಂಸ್ಥೆ ಹೇಳಿದೆ.

ಇದನ್ನೂ ಓದಿTax Evasion: ತೆರಿಗೆ ಕಳ್ಳತನದಲ್ಲಿ ಎಚ್​ಡಿಎಫ್​ಸಿ ಲೈಫ್, ಬಜಾಜ್ ಅಲಾಯನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್ ಸೇರಿ 15 ಕಂಪನಿಗಳು

ಬೆಂಗಳೂರಿನ ಕನ್ಸಲ್ಟೆನ್ಸಿ ಕಂಪನಿ ನಿಲೆನ್ಸೋಗೆ ಕೊಡಬೇಕಾದ್ದು 2.5 ಕೋಟಿ ರೂ?

ಬೆಂಗಳೂರಿನ ಕನ್ಸಲ್ಟೆನ್ಸಿ ಸಂಸ್ಥೆ ನಿಲೆನ್ಸೋ ಕೂಡ ಡುಂಜೋಗೆ ನೋಟೀಸ್ ಕೊಟ್ಟಿದ್ದು, ತನಗೆ 2.5 ಕೋಟಿ ರೂ ಬರುವುದು ಬಾಕಿ ಇದೆ ಎಂದು ಹೇಳಿದೆ. ನಿಲೆನ್ಸೋ ಸಂಸ್ಥೆ ಸಾಫ್ಟ್​ವೇರ್ ಎಂಜಿನಿಯರುಗಳನ್ನು ಗುತ್ತಿಗೆ ಆಧಾರದ ಮೇಲೆ ವಿವಿಧ ಐಟಿ ಕಂಪನಿಗಳಿಗೆ ಸರಬರಾಜು ಮಾಡುತ್ತದೆ. ಡುಂಜೋ ಕೂಡ ಗುತ್ತಿಗೆಗೆ ಸಾಫ್ಟ್​ವೇರ್ ಎಂಜಿನಿಯರುಗಳ ಸೇವೆ ಪಡೆದಿತ್ತು. ಇದರ ಹಣ ಪಾವತಿ ಪೂರ್ಣ ಮಾಡಿಲ್ಲದಿರುವುದು ತಿಳಿದುಬದಿದೆ. ಬಾಕಿ ಇದ್ದ 3.5 ಕೋಟಿ ರೂ ಹಣದಲ್ಲಿ 1 ಕೋಟಿಯನ್ನು ಡುಂಜೋ ಪಾವತಿಸಿದೆ. ಇನ್ನೂ 2.5 ಕೋಟಿ ರೂ ಬಾಕಿ ಇದೆ ಎನ್ನಲಾಗಿದೆ.

ಇದನ್ನೂ ಓದಿIndia’s Richest MLA: ಡಿಕೆ ಶಿವಕುಮಾರ್ ಭಾರತದ ಅತಿ ಶ್ರೀಮಂತ ಶಾಸಕ; ಅತಿಹೆಚ್ಚು ಬಿಲಿಯನೇರ್ ಶಾಸಕರು ಕರ್ನಾಟಕದವರೇ

ಕುತೂಹಲ ಎಂದರೆ ಡುಂಜೋಗೆ ಬಂಡವಾಳ ಹೂಡಿರುವ ಗೂಗಲ್ ಸಂಸ್ಥೆ ಕೂಡ ಈ ಹಿಂದೆ ಲೀಗಲ್ ನೋಟೀಸ್ ಕೊಟ್ಟಿತ್ತು. ಗೂಗಲ್​ಗೆ ಡುಂಜೋ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Thu, 20 July 23