Q1 Results: ತ್ರೈಮಾಸಿಕ ವರದಿ: ಇನ್ಫೋಸಿಸ್ ಶೇ. 10.9, ಹೆಚ್​ಯುಎಎಲ್ ಶೇ. 6.9ರಷ್ಟು ನಿವ್ವಳ ಲಾಭ ಹೆಚ್ಚಳ

Infosys and HUL Net Profit: 2023ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ 5,945 ಕೋಟಿ ರೂ ನಿವ್ವಳ ಲಾಭ ತೋರಿಸಿದರೆ, ಹಿಂದೂಸ್ತಾನ್ ಯೂನಿಲಿವರ್ ಲಿ ಸಂಸ್ಥೆ ನಿವ್ವಳ ಲಾಭ 2,556ಕೋಟಿಗೆ ಏರಿದೆ.

Q1 Results: ತ್ರೈಮಾಸಿಕ ವರದಿ: ಇನ್ಫೋಸಿಸ್ ಶೇ. 10.9, ಹೆಚ್​ಯುಎಎಲ್ ಶೇ. 6.9ರಷ್ಟು ನಿವ್ವಳ ಲಾಭ ಹೆಚ್ಚಳ
ತ್ರೈಮಾಸಿಕ ಲಾಭ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2023 | 5:53 PM

ನವದೆಹಲಿ, ಜುಲೈ 20: ಭಾರತದ ಐಟಿ ದಿಗ್ಗಜ ಇನ್ಫೋಸಿಸ್ (Infosys Technologies) ಮತ್ತು ಎಫ್​ಎಂಸಿಜಿ ದೈತ್ಯ ಹಿಂದೂಸ್ತಾನ್ ಯೂನಿಲಿವರ್ ಲಿ (Hindustan Uniliver Ltd) ಸಂಸ್ಥೆಗಳ ಮೊದಲ ತ್ರೈಮಾಸಿಕ ವರದಿ ಬಿಡುಗಡೆ ಆಗಿದೆ. ಎರಡೂ ಕೂಡ ಕ್ರಮವಾಗಿ ಶೇ. 10.9 ಮತ್ತು ಶೇ. 6.9ರಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳ ತೋರಿಸಿವೆ. ಇನ್ಫೋಸಿಸ್ ಸಂಸ್ಥೆ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ 5,945 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ. ಇನ್ನು, ಹೆಚ್​ಯುಎಲ್ ಸಂಸ್ಥೆ ಇದೇ ಕ್ವಾರ್ಟರ್​ನಲ್ಲಿ 2,556 ಕೋಟಿ ರೂನಷ್ಟು ನಿವ್ವಳ ಲಾಭ ಪಡೆದಿದೆ.

ಹಿಂದಿನ ಕ್ವಾರ್ಟರ್​ಗಿಂತ ಇನ್ಫೋಸಿಸ್ ಕಡಿಮೆ ಲಾಭ

ಇನ್ಫೋಸಿಸ್ 2022ರ ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ 5,362 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು. ಅದು ಈ ವರ್ಷ 5,945 ಕೋಟಿ ರುಪಾಯಿಗೆ ಏರಿದೆ. ಆದರೆ, 2023ರ ಜನವರಿಯಿಂದ ಮಾರರ್ಚ್​ವರೆಗಿನ ಕ್ವಾರ್ಟರ್​ಗೆ ಹೋಲಿಸಿದರೆ ಇನ್ಫೋಸಿಸ್​ನ ನಿವ್ವಳ ಲಾಭದಲ್ಲಿ ಶೇ. 3ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿHDFC: ಎಚ್​ಡಿಎಫ್​ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ

2023ರ ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಇನ್ಫೋಸಿಸ್​ನ ಒಟ್ಟಾರೆ ಆದಾಯ 37,933 ಕೋಟಿ ರೂ ನಷ್ಟು ಇದೆ. ಇದರಲ್ಲಿ ತೆರಿಗೆ ಪಾವತಿ ಎಲ್ಲವನ್ನೂ ಕಳೆದು ಅದು ಗಳಿಸಿದ ನಿವ್ವಳ ಲಾಭ 5,945 ಕೋಟಿ ರೂ ಆಗಿದೆ. 2023-23ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್​ಗೆ ನಿರೀಕ್ಷಿತ ಆದಾಯ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ಹಣಕಾಸು ವರ್ಷದಲ್ಲಿ ಶೇ. 4ರಿಂದ 7ರಷ್ಟು ಆದಾಯವೃದ್ದಿಸಬಹುದು ಎಂದು ಕೆಲ ತಿಂಗಳ ಹಿಂದೆ ಇನ್ಫೋಸಿಸ್ ಅಂದಾಜು ಮಾಡಿತ್ತು. ಆದರೆ, ಈಗ ಸೆಬಿಗೆ ಸಲ್ಲಿಸಿರುವ ಫೈಲಿಂಗ್ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಅದರ ಅದಾಯ ಶೇ. 1ರಿಂದ ಶೇ. 3.5ರವರೆಗೆ ಮಾತ್ರವೇ ಹೆಚ್ಚಬಹುದು ಎಂದು ಹೇಳಿದೆ.

ಇದನ್ನೂ ಓದಿReliance: ಆರ್​ಐಎಲ್​ನಿಂದ ಡೀಮರ್ಜ್ ಆದ ಜಿಯೋ ಫೈನಾನ್ಷಿಯಲ್; 273 ರೂ ಷೇರುಬೆಲೆ ಪಡೆದ ಜೆಎಫ್​ಎಸ್​ಎಲ್

ಹಿಂದೂಸ್ಥಾನ್ ಯೂನಿಲಿವರ್ ಲಿ ಲಾಭ ವರದಿ

ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ವಲಯದ ದಿಗ್ಗ ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆ ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ 2,556 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಅದು 2,391 ಕೋಟಿ ರೂ ನಿವ್ವಳ ಲಾಭ ಪಡೆದಿತ್ತು. ಇನ್ನು, ಆದಾಯದಲ್ಲೂ 14,757 ಕೋಟಿ ರೂನಿಂದ 15,679 ಕೋಟಿ ರೂಗೆ ಜಂಪ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ