ನವದೆಹಲಿ, ಜನವರಿ 30: ಹೆದ್ದಾರಿ ಬಳಸುವ ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ಯಾಗ್ (FASTag) ಸೌಲಭ್ಯ ಒದಗಿಸಲಾಗಿದೆ. ಟಾಲ್ ಪ್ಲಾಜಾಗಳಲ್ಲಿ ಸಮಯ ವ್ಯಯವಾಗುವುದನ್ನು ತಪ್ಪಿಸಲು ಸರ್ಕಾರ ಕೆಲ ವರ್ಷಗಳ ಹಿಂದೆ ಈ ಹೊಸ ವ್ಯವಸ್ಥೆ ತಂದಿದೆ. ಫಾಸ್ಟ್ಯಾಗ್ ಇದ್ದರೆ ಟೋಲ್ ಬೂತ್ಗಳ ಸಮೀಪ ಅಳವಡಿಸಿರುವ ಸ್ಕ್ಯಾನರ್ಗಳ ಮೂಲಕ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತಗೊಳ್ಳುತ್ತದೆ. ಇದರಿಂದ ಸಮಯ ಉಳಿತಾಯ ಆಗುತ್ತದೆ. ಇದೀಗ ಫಾಸ್ಟ್ಯಾಗ್ನ ಕೆವೈಸಿಯನ್ನು (FASTag KYC) ಅಪ್ಡೇಟ್ ಮಾಡಲು ಈ ತಿಂಗಳು ಡೆಡ್ಲೈನ್ ಇದೆ. ಜನವರಿ 31ರೊಳಗೆ ಫಾಸ್ಟ್ಯಾಗ್ ಅಪ್ಡೇಟ್ ಮಾಡಬೇಕಿದೆ. ಈ ಕಾರ್ಯ ಆಗದಿದ್ದರೆ ಫಾಸ್ಟ್ಯಾಗ್ ಡೀ ಆ್ಯಕ್ಟಿವೇಟ್ ಆಗುತ್ತದೆ.
ವಾಹನ ಚಲಿಸುತ್ತಿರುವಾಗಲೇ ಸ್ಕ್ಯಾನರ್ಗಳು ಫಾಸ್ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತವೆ. ನಿಗದಿತ ಟೋಲ್ ಹಣವನ್ನು ಅಕೌಂಟ್ನಿಂದ ಕಡಿತಗೊಳಿಸಲಾಗುತ್ತದೆ. ಈ ಫಾಸ್ಟ್ಯಾಗ್ ಸಾಧನದಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಅದರ ಟ್ಯಾಗ್ ಅನ್ನು ವಾಹನದ ವಿಂಡ್ಸ್ಕ್ರೀನ್ಗೆ ಅಂಟಿಸಲಾಗಿರುತ್ತದೆ. ಟೋಲ್ ಪ್ಲಾಜಾ ಬಳಿ ಸ್ಕ್ಯಾನರ್ ಈ ಟ್ಯಾಗ್ ಅನ್ನು ಸ್ಕ್ಯಾನ್ ಮಾಡಿ ಗುರುತಿಸುತ್ತದೆ.
ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?
ಈ ಪ್ರಕ್ರಿಯೆ ಮುಗಿದ ಬಳಿಕ 7 ಕಾರ್ಯ ದಿನಗಳಲ್ಲಿ ಕೆವೈಸಿ ಅಪ್ಡೇಟ್ ಆಗುತ್ತದೆ.
ಇದನ್ನೂ ಓದಿ: New IMPS Rules: ಫೆ. 1ರಿಂದ ಹೊಸ ಐಎಂಪಿಎಸ್ ನಿಯಮ; ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ ಹಾಗೂ ಉಪಯುಕ್ತ
ಕೆವೈಸಿ ಎಂದರೆ ನೋ ಯುವರ್ ಕಸ್ಟಮರ್ ಎಂದು. ಅಂದರೆ ಗ್ರಾಹಕರ ಬಗ್ಗೆ ಸಂಸ್ಥೆಗಳು ಆಗಾಗ್ಗೆ ಮಾಹಿತಿ ಅಪ್ಡೇಟ್ ಮಾಡುತ್ತಿರಬೇಕು. ಈ ಕೆಳಗಿನ ದಾಖಲೆಗಳು ಫಾಸ್ಟ್ಯಾಗ್ ಕೆವೈಸಿಗೆ ಬೇಕಾಗಬಹುದು:
ಇಲ್ಲಿ ಐಡಿ ಮತ್ತು ಅಡ್ರೆಸ್ ಪ್ರೂಫ್ಗೆ ಪಾಸ್ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಡಿಎಲ್ ಅಥವಾ ಪ್ಯಾನ್ ಕಾರ್ಡ್ ಅನ್ನು ಬಳಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Tue, 30 January 24