ಹಬ್ಬದ ಸೀಸನ್ ನಡೆಯುತ್ತಿದೆ. ದಸರಾ ಹಬ್ಬ ಚಾಲನೆಯಲ್ಲಿದೆ. ದೀಪಾವಳಿ ಮುಗಿಯುವವರೆಗೂ ಭಾರತೀಯರಿಗೆ ಹಬ್ಬದ ಸಡಗರ, ಗಡಿಬಿಡಿ, ಓಡಾಟ ಇದ್ದೇ ಇರುತ್ತದೆ. ಊರಿಗೆ ಹೋಗಿ ಬರುವವರ ಸಂಖ್ಯೆ ಈ ಅವಧಿಯಲ್ಲಿ ಹೆಚ್ಚು. ಹಬ್ಬದ ಸೀಸನ್ನಲ್ಲಿ (festival season) ಶಾಪಿಂಗ್ ಜೊತೆಗೆ ಊರಿಗೆ ಹೋಗಿಬರುವವರ ಸಂಖ್ಯೆ ಹೆಚ್ಚು. ಅಂತೆಯೇ, ಬಸ್ಸು, ರೈಲು ಮತ್ತು ವಿಮಾನಗಳಿಗೆ ಈ ಅವಧಿಯಲ್ಲಿ ಬೇಡಿಕೆ ಹೆಚ್ಚು. ಶಾಪಿಂಗ್ನಲ್ಲಿ ವ್ಯಾಪಾರ ಹೆಚ್ಚಿದಂತೆ ಡಿಸ್ಕೌಂಟ್ ಸಿಗುತ್ತದೆ. ಆದರೆ, ಸಾರಿಗೆ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ಇಲ್ಲಿ ಟಿಕೆಟ್ ಬೆಲೆ ದುಬಾರಿ ಆಗುತ್ತದೆ. ಇಂಥ ಸಂದರ್ಭದಲ್ಲಿ ಕೆಲ ಸಂಸ್ಥೆಗಳು ಗ್ರಾಹಕರಿಗಾಗಿ ಕೆಲ ಕೊಡುಗೆ ನೀಡುತ್ತವೆ. ಆನ್ಲೈನ್ ಬಸ್ ಟಿಕೆಟ್ ಪ್ಲಾಟ್ಫಾರ್ಮ್ ಎನಿಸಿರುವ ಅಭಿಬಸ್ (AbhiBus) ಭರ್ಜರಿ ಘೋಷಣೆ ಮಾಡಿ ಗಮನ ಸೆಳೆದಿದೆ.
ಬಸ್ ಟಿಕೆಟ್ ಬುಕಿಂಗ್ ಆ್ಯಪ್ ಅಭಿಬಸ್ ಈ ಬಾರಿ ಹಬ್ಬದ ಸೀಸನ್ಗಾಗಿ ಸಖತ್ ಗಿಫ್ಟ್ ಪ್ರಕಟಿಸಿದೆ. ಯಾವುದೇ ಸ್ಥಳಕ್ಕೆ ಟಿಕೆಟ್ ಬುಕ್ ಮಾಡಿ, ಬೆಲೆ ಕೇವಲ 1 ರೂ ಮಾತ್ರ. ಅಕ್ಟೋಬರ್ 19ರಿಂದ ಅಕ್ಟೋಬರ್ 25ರವರೆಗೆ ಏಳು ದಿನಗಳವರೆಗೆ ಮಾತ್ರ ಅವಕಾಶ.
ಇದನ್ನೂ ಓದಿ: ಕೇವಲ 699 ರುಪಾಯಿಗೆ 10 ಸಿನಿಮಾ ನೋಡಿ; ಪಿವಿಆರ್ ಐನಾಕ್ಸ್ನಿಂದ ಆಕರ್ಷಕ ಸಬ್ಸ್ಕ್ರಿಪ್ಷನ್ ಆಫರ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಸರಾ ಪ್ರಯುಕ್ತ ವಿಶೇಷ ದರ್ಶನ ಪ್ಯಾಕೇಜ್ ನಡೆಸುತ್ತಿದೆ. ಧಾರ್ಮಿಕ ಸ್ಥಳಗಳ ದರ್ಶನ ಮಾಡಿಸಲಾಗುತ್ತಿದೆ. ಪಂಚದುರ್ಗೆಯರ ದರ್ಶನ, ಮಂಗಳೂರು, ಕೊಲ್ಲೂರು, ಮಡಿಕೇರಿ ಇತ್ಯಾದಿ ವಿವಿಧೆಡೆ ಇರುವ ಧಾರ್ಮಿಕ ಸ್ಥಳಗಳ ದರ್ಶನಕ್ಕೆ ವಿವಿಧ ಪ್ಯಾಕೇಜ್ಗಳಿದ್ದು, ವೋಲ್ವೋ ಇತ್ಯಾದಿ ಬಸ್ಸುಗಳನ್ನು ಬಳಸಲಾಗುತ್ತಿದೆ. ಅಕ್ಟೋಬರ್ 15ರಂದು ಆರಂಭವಾದ ಈ ವಿಶೇಷ ಸೇವೆ ಅಕ್ಟೋಬರ್ 25ರವರೆಗೂ ಇರುತ್ತದೆ.
ಆಂಧ್ರ ರಸ್ತೆ ಸಾರಿಗೆ ಸಂಸ್ಥೆ ಎಪಿಎಸ್ಸಾರ್ಟಿಸಿಯ 5,500 ಬಸ್ಸುಗಳನ್ನು ಹಬ್ಬದ ಸೀಸನ್ಗಾಗಿ ಅಣಿಗೊಳಿಸಲಾಗಿದೆ. ಅಕ್ಟೋಬರ್ 13ರಿಂದ 26ರವರೆಗೂ ಆಂಧ್ರದ ವಿವಿಧ ಸ್ಥಳಗಳಲ್ಲಿ ಬಸ್ಸುಗಳು ಸಂಚರಿಸಲಿವೆ. ಬೆಂಗಳೂರು ಮತ್ತು ಚೆನ್ನೈ ಇತ್ಯಾದಿ ನಗರಗಳಿಗೂ ಆಂಧ್ರ ಬಸ್ಸುಗಳು ಓಡಾಡುತ್ತವೆ. ವಿಶೇವೆಂದರೆ ರಿಟರ್ನ್ ಟಿಕೆಟ್ ಬುಕ್ ಮಾಡಿದರೆ ಎರಡೂ ಟಿಕೆಟ್ ಮೇಲೆ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ರೈಲುಗಳಿಗೆ ವಿಶೇಷ ಬೇಡಿಕೆ ಇರುವುದರಿಂದ ಸೆಂಟ್ರಲ್ ರೈಲ್ವೆ 30 ವಿಶೇಷ ರೈಲುಗಳನ್ನು ನವೆಂಬರ್ವರೆಗೂ ನಿಯೋಜಿಸಿದೆ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?
ಹಬ್ಬದ ಸೀಸನ್ಗೆ ರಜೆ ಪಡೆದುಕೊಂಡು ವಿದೇಶಗಳಿಗೆ ಪ್ರವಾಸ ಹೋಗುವವರಿಗೆ ಖುಷಿ ಸುದ್ದಿ ಇದೆ. ಏರ್ ಇಂಡಿಯಾ ಸಂಸ್ಥೆ ಯೂರೋಪ್ಗೆ ರೌಂಡ್ ಟ್ರಿಪ್ ಫ್ಲೈಟ್ ಸೇವೆಗಳನ್ನು ನೀಡುತ್ತಿದ್ದು, ಕೇವಲ 40,000 ರೂನಿಂದ ಇದು ಶುರುವಾಗುತ್ತದೆ. ಪ್ಯಾರಿಸ್, ಮಿಲಾನ್, ಲಂಡನ್, ಕೋಪನ್ಹೇಗನ್ ಇತ್ಯಾದಿ ಯೂರೋಪ್ನ ಪ್ರಮುಖ ಸ್ಥಳಗಳಿಗೆ ಟಿಕೆಟ್ ಬೆಲೆ ಕೇವಲ 25,000 ರೂ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ