ನವದೆಹಲಿ, ನವೆಂಬರ್ 30: ಇವತ್ತು ನವೆಂಬರ್ ತಿಂಗಳ ಕೊನೆಯ ದಿನ. ಡಿಸೆಂಬರ್ನಿಂದ ನಮ್ಮ ನಿತ್ಯದ ಬದುಕಿನ ಮತ್ತು ಹಣಕಾಸು ಚಟುವಟಿಕೆಯ (financial activities) ಮೇಲೆ ಸೀಮಿತ ಮಟ್ಟದಲ್ಲಿ ಪರಿಣಾಮ ಬೀರುವಂತಹ ಕೆಲ ನಿಯಮ ಬದಲಾವಣೆಗಳಿವೆ. ಬ್ಯಾಂಕ್ ಲಾಕರ್ ವಿಚಾರದಲ್ಲಿ ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಒಪ್ಪಂದದ ನವೀಕರಣ, ಯುಪಿಐ ಐಡಿ ನಿಷ್ಕ್ರಿಯಗೊಳ್ಳುವುದು, ಸಿಮ್ ಕಾರ್ಡ್ ವಿತರಣೆ ನಿರ್ಬಂಧ ಹೀಗೆ ಹಲವು ನಿಯಮ ಬದಲಾವಣೆಗಳು ಡಿಸೆಂಬರ್ನಲ್ಲಿ ಇವೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಸಿಮ್ ಕಾರ್ಡ್ ವಿತರಣೆ ಮೇಲೆ ಪರಿಣಾಮ ಬೀರುವಂತಹ ಕೆಲ ನಿಯಮಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ ಡಿಸೆಂಬರ್ 1ರಿಂದ ಜಾರಿಗೆ ತರುತ್ತಿದೆ. ಅದರ ಪ್ರಕಾರ, ಸಿಮ್ ಕಾರ್ಡ್ ಡೀಲರ್ಗಳು ಕಡ್ಡಾಯವಾಗಿ ವೆರಿಫಿಕೇಶನ್ ಪಡೆದುಕೊಳ್ಳಬೇಕು. ಬಲ್ಕ್ ಕನೆಕ್ಷನ್ ಕೊಡುವ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ನಿಯಮವನ್ನು ಆಗಸ್ಟ್ 1ರಿಂದಲೇ ಜಾರಿಗೊಳಿಸಬೇಕಿತ್ತು. ಆದರೆ, ಡಿಸೆಂಬರ್ 1ಕ್ಕೆ ಮುಂದೂಡಲಾಗಿತ್ತು.
ಇದನ್ನೂ ಓದಿ: ಬೈಜುಸ್ ಗಾಯಕ್ಕೆ ಬರೆ; 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಮಟ್ಟಕ್ಕಿಂತಲೂ ಕಡಿಮೆ
ಬ್ಯಾಂಕ್ಗಳು ಮತ್ತು ಗ್ರಾಹಕರ ನಡುವಿನ ಲಾಕರ್ ಒಪ್ಪಂದಗಳ ನವೀಕರಣಕ್ಕೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಈ ವರ್ಷದ ಜನವರಿ 1ರಂದೇ ಲಾಕರ್ ಅಗ್ರೀಮೆಂಟ್ ರಿನಿವಲ್ಗೆ ಡೆಡ್ಲೈನ್ ಇತ್ತು. ಆದರೆ, ಬಹಳಷ್ಟು ಮಂದಿ ಲಾಕರ್ ಒಪ್ಪಂದ ಇನ್ನೂ ನವೀಕರಿಸದೇ ಇದ್ದ ಹಿನ್ನೆಲೆಯಲ್ಲಿ ಡಿಸೆಂಬರ್ 31ರವರೆಗೂ ಅದನ್ನು ವಿಸ್ತರಿಸಲು ಆರ್ಬಿಐ ನಿರ್ಧರಿಸಿತ್ತು.
ಸಕ್ರಿಯವಾಗಿಲ್ಲದ ಯುಪಿಐ ಐಡಿಗಳನ್ನು ಡಿಸೆಂಬರ್ 31ರೊಳಗೆ ನಿಷ್ಕ್ರಿಯಗೊಳಿಸಬೇಕು ಎಂದು ಎನ್ಪಿಸಿಐ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಯುಪಿಐ ಬಳಕೆದಾರರು ಕೂಡಲೇ ತಮ್ಮ ನಿಷ್ಕ್ರಿಯ ಯುಪಿಐ ಐಡಿಯನ್ನು ಕೂಡಲೇ ಆ್ಯಕ್ಟಿವೇಟ್ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕ್ ಹಾಗೂ ಥರ್ಡ್ ಪಾರ್ಟ ಆ್ಯಪ್ಗಳು ನಿಮ್ಮ ಯುಪಿಐ ಐಡಿ ಬಳಕೆಯನ್ನು ಸ್ಥಗಿತಗೊಳಿಸಬಹುದು.
ಆಧಾರ್ನಲ್ಲಿರುವ ಮಾಹಿತಿಯನ್ನು ಉಚಿತವಾಗಿ, ಅಂದರೆ ಶುಲ್ಕರಹಿತವಾಗಿ ಅಪ್ಡೇಟ್ ಮಾಡಲು ಸರ್ಕಾರ ಡಿಸೆಂಬರ್ 14ರವರೆಗೂ ಕಾಲಾವಕಾಶ ಕೊಟ್ಟಿದೆ. ಮೈ ಆಧಾರ್ ಪೋರ್ಟಲ್ನಲ್ಲಿ ಈ ಸೌಲಭ್ಯ ಇದೆ. ಆದರೆ, ಡಿಸೆಂಬರ್ 15ರಿಂದ ಶುಲ್ಕ ಪಾವತಿಸಿಯೇ ಆಧಾರ್ ಮಾಹಿತಿ ಅಪ್ಡೇಟ್ ಮಾಡಬೇಕು.
ಇದನ್ನೂ ಓದಿ: UPI: ತಪ್ಪಾಗಿ ಯುಪಿಐನಲ್ಲಿ ಹಣ ಕಳುಹಿಸಿದ್ದೀರಾ? ಬರಲಿದೆ 4 ಗಂಟೆ ನಿಯಮ; ಸಿಗಲಿದೆ ಹಣ ಹಿಂಪಡೆಯುವ ದಾರಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿವೃತ್ತ ಉದ್ಯೋಗಿಗಳು ತಮ್ಮ ಪಿಂಚಣಿ ಪಡೆಯುವುದನ್ನು ಮುಂದುವರಿಸಲು ಪ್ರತೀ ವರ್ಷವೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಈ ಬಾರಿ ನವೆಂಬರ್ 30ರೊಳಗೆ ಜೀವನ್ ಪ್ರಮಾಣಪತ್ರ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಇವತ್ತು ಲೈಫ್ ಸರ್ಟಿಫಿಕೇಟ್ ಸಲ್ಲಿಸದಿದ್ದರೆ ಮುಂದಿನ ತಿಂಗಳ ಪಿಂಚಣಿ ನಿಮ್ಮ ಕೈಸೇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ