ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ ಎನಿಸುತ್ತದೆ. ಸಾಲ ಪಡೆಯಲು ಮಾತ್ರವಲ್ಲ, ಕಡಿಮೆ ಬಡ್ಡಿದರಕ್ಕೆ ಸಾಲ ಸಿಗಲು ಇದು ಕಾರಣವಾಗುತ್ತದೆ. ಅಂತೆಯೇ, ಕ್ರೆಡಿಟ್ ಸ್ಕೋರ್ (credit score) ಬಹಳ ಮುಖ್ಯ. ಏನಿದು ಕ್ರೆಡಿಟ್ ಸ್ಕೋರ್? ಇದು ನಮ್ಮ ಸಾಲ ತೀರಿಸುವಿಕೆ ಶಕ್ತಿಯ ಮಾಪಕ. ನಮ್ಮ ಎಲ್ಲಾ ಸಾಲದ ಇತಿಹಾಸವನ್ನು ಪರಿಗಣಿಸಿ ನೀಡಲಾಗುವ ಸ್ಕೋರ್. ಸಾಲ ತೀರಿಸುವಿಕೆಯಲ್ಲಿ ತಪ್ಪೆಸಗಿದ್ದರೆ ಸ್ಕೋರ್ ಕಡಿಮೆ ಆಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಿಗೆ ಬ್ಯಾಂಕುಗಳು ಸಾಲ ಕೊಡಲು ಹಿಂದೇಟು ಹಾಕುತ್ತವೆ. ಅಡಮಾನ ಸಾಲ ಕೂಡ ಸಿಗುವುದು ಅನುಮಾನಾಸ್ಪದವಾಗಿರುತ್ತದೆ.
ಕ್ರೆಡಿಟ್ ಸ್ಕೋರ್ 300 ಅಂಕಗಳಿಂದ 900 ಅಂಕಗಳವರೆಗೆ ಇರುತ್ತದೆ. 300 ಅಂಕ ಎನ್ನುವುದು ಕನಿಷ್ಠ. ಈ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ಸಾಲ ಪಡೆಯಲು ಅರ್ಹ ಇರುವುದಿಲ್ಲ ಎಂದೇ ಭಾವಿಸಲಾಗುತ್ತದೆ. 700ಕ್ಕೂ ಹೆಚ್ಚು ಕ್ರೆಡಿಟ್ ಸ್ಕೋರ್ ಇರುವ ವ್ಯಕ್ತಿಗಳಿಗೆ ಸುಲಭವಾಗಿ ಸಾಲ ಸಿಗುತ್ತದೆ. ಕಡಿಮೆ ಬಡ್ಡಿದರದಲ್ಲೇ ಸಾಲ ಪ್ರಾಪ್ತವಾಗುತ್ತದೆ.
ಇದನ್ನೂ ಓದಿ: FD Rates: ಎಸ್ಬಿಐ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ; ವಿವಿಧ ಎಫ್ಡಿ ದರಗಳ ಹೆಚ್ಚಳ
ಒಟ್ಟಾರೆ, ಹಣಕಾಸು ಸಂಸ್ಥೆಗಳು ನೀವು ಸಾಲ ಪಡೆಯಲು ಅರ್ಹರಿದ್ದೀರೋ ಇಲ್ಲವೋ, ನಿಮ್ಮನ್ನು ಎಷ್ಟು ನಂಬಬಹುದು ಇವೆಲ್ಲವನ್ನೂ ಪರಿಶೀಲಿಸುತ್ತವೆ. ಅದಕ್ಕೆ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಬ್ಯಾಂಕುಗಳು ಪರಿಶೀಲನೆ ಮಾಡಿಯೇ ನಿಮಗೆ ಲೋನ್ ಸ್ಯಾಂಕ್ಷನ್ ಮಾಡುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ