ನವದೆಹಲಿ, ಡಿಸೆಂಬರ್ 27: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿದರ (fd rates) ಹೆಚ್ಚಿಸಿದೆ. 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಈ ದರ ಬದಲಾವಣೆ ಅನ್ವಯ ಆಗುತ್ತದೆ. ಒಂದರಿಂದ ಮೂರು ವರ್ಷ, ಹಾಗೂ ಐದರಿಂದ ಹತ್ತು ವರ್ಷದ ಅವಧಿಯವರೆಗಿನ ಠೇವಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಎಫ್ಡಿಗಳಿಗೂ ಎಸ್ಬಿಐ ಬಡ್ಡಿ ದರ ಹೆಚ್ಚಿಸಿದೆ. ಹೊಸ ದರಗಳು ಇವತ್ತಿನಿಂದಲೇ (ಡಿ. 27) ಜಾರಿಗೆ ಬರುತ್ತವೆ.
ದರ ಪರಿಷ್ಕರಣೆ ಬಳಿಕ ಎಸ್ಬಿಐನಲ್ಲಿ ಠೇವಣಿಗಳಿಗೆ ಬಡ್ಡಿ ದರ ಶೇ. 3.50ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 4ರಿಂದ ಶೇ. 7.50ಯವರೆಗೂ ಬಡ್ಡಿದರ ಇದೆ. ಆದರೆ, ಎಸ್ಬಿಐ ವಿಶೇಷ ಠೇವಣಿ ಸ್ಕೀಮ್ ಆದ 400 ದಿನಗಳ ಅಮೃತ್ ಕಳಶ್ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು ಶೇ. 7.10ರಷ್ಟು ಬಡ್ಡಿ, ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿ ಪಡೆಯಬಹುದಾಗಿದೆ.
ಕನಿಷ್ಠ ಡೆಪಾಸಿಟ್ ಅವಧಿಯಾದ ಏಳು ದಿನದಿಂದ 45 ದಿನದವರೆಗಿನ ಠೇವಣಿಗಳಿಗೆ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಲಾಗಿದೆ. 46ದಿದ 179 ದಿನದವರೆಗಿನ ಠೇವಣಿಗೆ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 180 ದಿನದಂದ 210 ದಿನದವರೆಗಿನ ಅವಧಿಯ ಠೇವಣಿಗಳಿಗೂ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಪ್ರಾಪ್ತವಾಗುತ್ತದೆ.
ಇದನ್ನೂ ಓದಿ: ನಾಲ್ಕು ಬ್ಯಾಂಕುಗಳಿಂದ ಎಫ್ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ