ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ತಾಳ್ಮೆಯು ಪ್ರಮುಖ ಗುಣವಾಗಿರಬೇಕು. ತಜ್ಞರ ಪ್ರಕಾರ, ಒಬ್ಬರು ಎಷ್ಟು ಸಾಧ್ಯವೋ ಅಲ್ಲಿಯವರೆಗೆ ಸ್ಟಾಕ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಈ ದೀರ್ಘಾವಧಿಯ ಹೂಡಿಕೆಯ ತಂತ್ರವು ಅಪಾಯವನ್ನು ಕಡಿಮೆ ಮಾಡಲು ಸಹಾಯ ಆಗುವುದು ಮಾತ್ರ ಅಲ್ಲ, ಜತೆಗೆ ಹೂಡಿಕೆಯ ಮೇಲೆ ಲಾಭದ ಮೇಲೆ ಲಾಭ ದೊರೆಯುತ್ತದೆ. ದೀರ್ಘಕಾಲೀನ ಹೂಡಿಕೆಯು ಹಣವನ್ನು ಹಲವು ಪಟ್ಟು ಹೆಚ್ಚಿಸಬಹುದು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ ಅಂದರೆ ಬಜಾಜ್ ಫೈನಾನ್ಸ್ ಷೇರು. ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ 10 ವರ್ಷಗಳಲ್ಲಿ ಪ್ರತಿ ಷೇರಿಗೆ 63 ರೂಪಾಯಿಂದ 7786.45 ರೂಪಾಯಿಗೆ ಏರಿಕೆ ಆಗಿದೆ- ಆ ಮೂಲಕ ಷೇರುದಾರರಿಗೆ ಸುಮಾರು ಶೇ 12,260ರಷ್ಟು ಲಾಭವನ್ನು ತಂದಿದೆ.
ಬಜಾಜ್ ಫೈನಾನ್ಸ್ ಷೇರಿನ ಬೆಲೆ ಇತಿಹಾಸ
ಕಳೆದ ಒಂದು ವಾರದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಪ್ರತಿ ಷೇರಿಗೆ 7386.60 ರೂಪಾಯಿಂದ 7786.45 ರೂಪಾಯಿ ಮಟ್ಟಕ್ಕೆ ಹೆಚ್ಚಳ ಆಗಿದ್ದು, ಈ ಅವಧಿಯಲ್ಲಿ ಸುಮಾರು ಶೇ 5.40ರಷ್ಟು ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ರೂ. 6944.95ರಿಂದ ರೂ. 7786.45ಕ್ಕೆ ಏರಿದೆ. ಅಲ್ಲಿಗೆ ಶೇ 12ರಷ್ಟು ಏರಿಕೆ ಕಂಡಿದೆ. ಅದೇ ರೀತಿ, ಕಳೆದ 6 ತಿಂಗಳಲ್ಲಿ ಈ ಸ್ಟಾಕ್ ಪ್ರತಿ ಷೇರಿಗೆ ರೂ. 5122.20 ಮಟ್ಟದಿಂದ ರೂ. 7786.45ಕ್ಕೆ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಶೇ 52ರಷ್ಟು ಹೆಚ್ಚಳ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಬಜಾಜ್ ಫೈನಾನ್ಸ್ ಷೇರುಗಳು ಮಲ್ಟಿಬ್ಯಾಗರ್ ರಿಟರ್ನ್ಸ್ ಅನ್ನು ನೀಡಿವೆ. ಪ್ರತಿ ಷೇರು ರೂ. 3138.95ರಿಂದ ರೂ. 7786.45ಕ್ಕೆ ಏರಿದೆ. ಆ ಮೂಲಕ ಶೇ 150ರ ರಿಟರ್ನ್ಸ್ ನೀಡಿದೆ.
ಕಳೆದ 5 ವರ್ಷಗಳಲ್ಲಿ ತಲಾ ರೂ. 1055.90ರಿಂದ ರೂ. 7786.45ಕ್ಕೆ ಹೆಚ್ಚಳ ಆಗಿದೆ. ಅಂದರೆ ಶೇ 637ರಷ್ಟು ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ ಬಜಾಜ್ ಫೈನಾನ್ಸ್ ಷೇರಿನ ಬೆಲೆ ನೋಡುವುದಾದರೆ, 16 ಸೆಪ್ಟೆಂಬರ್ 2011ರಂದು NSEಯಲ್ಲಿ 63 ರೂಪಾಯಿಗೆ ಕ್ಲೋಸ್ ಆಗಿತ್ತು. ಅದೀಗ ಸೆಪ್ಟೆಂಬರ್ 24, 2021ರಂದು NSEಯಲ್ಲಿ ಪ್ರತಿ ಷೇರಿಗೆ ರೂ. 7786.45ಕ್ಕೆ ಕೊನೆಯಾಗಿದೆ. ಆ ಮೂಲಕ ಈ ಅವಧಿಯಲ್ಲಿ 123 ಪಟ್ಟು ಬೆಳೆದಿದೆ.
ಹೂಡಿಕೆಯ ಮೇಲೆ ಪರಿಣಾಮ
ಬಜಾಜ್ ಫೈನಾನ್ಸ್ ಷೇರಿನ ಮೇಲೆ ಒಂದು ತಿಂಗಳ ಹಿಂದೆ ಹೂಡಿಕೆದಾರರು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು 1.12 ಲಕ್ಷ ರೂಪಾಯಿ ಆಗಿರುತ್ತಿತ್ತು. 6 ತಿಂಗಳ ಹಿಂದೆ ಹೂಡಿಕೆದಾರರು ಇದೇ ಮೊತ್ತ ಹಾಕಿದ್ದರೆ ಅದು 1.52 ಲಕ್ಷ ರೂಪಾಯಿ ಆಗಿರುತ್ತಿತ್ತು. ಇನ್ನು ವರ್ಷದ ಹಿಂದೆ ಈ ಬಜಾಜ್ ಗ್ರೂಪ್ ಸ್ಟಾಕ್ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಅದು 2.50 ಲಕ್ಷ ರೂಪಾಯಿ ಆಗಿರುತ್ತಿತ್ತು. ಹೂಡಿಕೆದಾರರು 5 ವರ್ಷಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ 7.37 ಲಕ್ಷಕ್ಕೆ ತಲುಪಿರುತ್ತಿತ್ತು. 10 ವರ್ಷಗಳ ಹಿಂದೆ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್ ಬಜಾಜ್ ಫೈನಾನ್ಸ್ ಷೇರಿನ ಮೇಲೆ 63 ರೂಪಾಯಿಯಂತೆ 1 ಲಕ್ಷ ಹೂಡಿದ್ದರೆ ಅದು 1.23 ಕೋಟಿ ರೂಪಾಯಿ ಆಗಿರುತ್ತದೆ.
ಬಜಾಜ್ ಫೈನಾನ್ಸ್ ಷೇರಿನ ಮುಂದಿನ ಹಾದಿ
ಬಜಾಜ್ ಫೈನಾನ್ಸ್ ಷೇರುಗಳಲ್ಲಿ ಮತ್ತಷ್ಟು ಏರಿಕೆ ನಿರೀಕ್ಷಿಸಲಾಗಿದೆ. ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಹೇಳಿರುವಂತೆ, “ಬಜಾಜ್ ಫೈನಾನ್ಸ್ ಷೇರಿನ ಬೆಲೆಯು ಚಾರ್ಟ್ ಮಾದರಿಯಲ್ಲಿ ಸಕಾರಾತ್ಮಕವಾಗಿ ಕಾಣುವುದರಿಂದ ಮತ್ತಷ್ಟು ಮುಂದುವರಿಯಬಹುದು. ಈ ಕೌಂಟರ್ ಅನ್ನು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ 8200 ರಿಂದ 8250 ರುಪಾಯಿ ತಲುಪಬಹುದು. 7650 ರೂಪಾಯಿ ಮಟ್ಟಕ್ಕೆ ಸ್ಟಾಪ್ ಲಾಸ್ ಇಟ್ಟುಕೊಳ್ಳಬಹುದು,” ಎಂದಿದ್ದಾರೆ.
ಇದನ್ನೂ ಓದಿ: Stock Market Tips: 60 ಸಾವಿರ ಪಾಯಿಂಟ್ಸ್ ತಲುಪಿದ ನಂತರ ಷೇರು ಮಾರ್ಕೆಟ್ ಮುಂದೆ ಏನಾಗಬಹುದು?
(Financial Company Stock Bajaj Finance Investment Of Rs 1 Lakh Become Rs 1.23 Crore In 10 Years)