Ration Card: ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಹೀಗೆ ಕಂಡು ಹಿಡಿಯಿರಿ

ಪಡಿತರ ಚೀಟಿ ಕೇವಲ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರವಲ್ಲದೆ, ಗುರುತಿನ ಚೀಟಿಯಾಗಿ ಮತ್ತು ಇತರ ಸರ್ಕಾರಿ ಸೌಲಭ್ಯಗಳಿಗೆ ಈ ದಾಖಲೆ ಅತ್ಯಗತ್ಯವಾಗಿ ಬೇಕು. ಕಳೆದು ಹೋದ ರೇಷನ್ ಕಾರ್ಡ್ ನಂಬರ್ ಮೊಬೈಲ್ ನಲ್ಲೇ ಸುಲಭವಾಗಿ ಕಂಡುಹಿಡಿಯಬಹುದು. ಆದರೆ ನಿಮ್ಮ ರೇಷನ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದು ಕಡ್ಡಾಯ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Ration Card: ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಹೀಗೆ ಕಂಡು ಹಿಡಿಯಿರಿ
ಸಾಂದರ್ಭಿಕ ಚಿತ್ರ
Image Credit source: Getty Images/ Pixabledemo
Edited By:

Updated on: Jul 09, 2026 | 2:35 PM

ಮುಖ್ಯಾಂಶಗಳು

  • ಭಾರತದಲ್ಲಿ ಅತ್ಯಂತ ಪ್ರಮುಖವಾದ ಸರ್ಕಾರಿ ದಾಖಲೆಯಲ್ಲಿ ರೇಷನ್ ಕಾರ್ಡ್ ಕೂಡ ಒಂದು
  • ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕಬಹುದು.
  • ರೇಷನ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದು ಕಡ್ಡಾಯ

ಅತ್ಯಂತ ಪ್ರಮುಖವಾದ ಸರ್ಕಾರಿ ದಾಖಲೆಯಲ್ಲಿ ರೇಷನ್ ಕಾರ್ಡ್ (Ration Card) ಕೂಡ ಒಂದು. ಸಬ್ಸಿಡಿ ದರದ ಆಹಾರ ಧಾನ್ಯಗಳನ್ನು ಪಡೆಯುವುದರ ಜತೆಗೆ ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್, ವೋಟರ್ ಐಡಿ, ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈ  ಗುರುತಿನ ಪುರಾವೆ ಬೇಕೇ ಬೇಕು. ಒಂದು ವೇಳೆ ನಿಮ್ಮ ಬಳಿಯಿದ್ದ ರೇಷನ್ ಕಾರ್ಡ್ ಕಳೆದು ಹೋಗಿದ್ದರೆ ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಕಳೆದು ಹೋದ ರೇಷನ್ ಕಾರ್ಡ್ ನಂಬರನ್ನು ಮೊಬೈಲ್ ನಲ್ಲೇ (mobile) ಈ ಕೆಳಗಿನ ಮೂರು ವಿಧಾನಗಳ ಮೂಲಕ ಕಂಡು ಹಿಡಿಯಬಹುದು.

ಕಳೆದುಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಹೇಗೆ?

ವಿಧಾನ 1 :

 

ಹಂತ 1:  ಮೇರಾ ರೇಷನ್ ಆಪ್‌ನ್ನು ನಿಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

 

ಹಂತ 2: ಆಪ್ ತೆರೆದು ಆಧಾರ್ ಸೆಂಡಿಂಗ್ ಆಯ್ಕೆಯನ್ನು ಆರಿಸಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಹಾಗೂ ಸಬ್ಮಿಟ್‌ ಮಾಡಿ.


ಹಂತ 3:
ಸ್ಕ್ರೀನ್‌ ಮೇಲೆ ನಿಮಗೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕುಟುಂಬದ ಸದಸ್ಯರ ವಿವರಗಳು ಕಾಣಿಸುತ್ತದೆ.

 

ವಿಧಾನ 2:

 

ಹಂತ 1: ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಆಹಾರ ಇಲಾಖೆ ವೆಬ್‌ಸೈಟ್‌ಗೆ ನೀಡಿ.


ಹಂತ 2:
ಈ ಸೈಟ್ ನಲ್ಲಿ ಇ – ಸರ್ವಿಸಸ್ ಮೆನು ಆಯ್ಕೆ ಮಾಡಿದರೆ, ಅದರಲ್ಲಿ ಕಾಣಿಸುವ ಸ್ಟೇಟಸ್ ಆಫ್ ರೇಷನ್ ಕಾರ್ಡ್ ಅಥವಾ ಶೋ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.


ಹಂತ 3:
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ರೇಷನ್ ಕಾರ್ಡ್ ಸಂಖ್ಯೆ ಹಾಗೂ ವಿವರವಾದ ಮಾಹಿತಿ ದೊರೆಯುತ್ತದೆ.

 

ವಿಧಾನ 3:

 

ಹಂತ 1: ನಿಮ್ಮ ಮೊಬೈಲ್‌ನಲ್ಲಿ ಡಿಜಿಲಾಕರ್ ಆಪ್ ತೆರೆಯಿರಿ. ಈ ಆಪ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ.


ಹಂತ 2:
ಇಶ್ಯೂಡ್ ಡಾಕ್ಯುಮೆಂಟ್ಸ್ ವಿಭಾಗದಲ್ಲಿ ಸರ್ಚ್ ಡಾಕ್ಯುಮೆಂಟ್ಸ್ ಗೆ ಹೋಗಿ ರೇಷನ್ ಕಾರ್ಡ್ ಎಂದು ಸರ್ಚ್ ಮಾಡಿ.


ಹಂತ 3:
ನಿಮ್ಮ ರಾಜ್ಯ ಆಯ್ಕೆ ಮಾಡಿಕೊಂಡು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದರೆ ನಿಮ್ಮ ಡಿಜಿಟಲ್ ರೇಷನ್ ಕಾರ್ಡ್ ನೊಂದಿಗೆ ನಂಬರ್ ದೊರೆಯುತ್ತದೆ.

 

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

 

ಪ್ರಶ್ನೆ: ರೇಷನ್ ಕಾರ್ಡ್ ಕಳೆದು ಹೋದರೆ ಮೊದಲು ಏನು ಮಾಡಬೇಕು?

ಉತ್ತರ: ರೇಷನ್ ಕಾರ್ಡ್ ಕಳೆದುಹೋದರೆ, ಮೊದಲು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸಬೇಕು.

ಪ್ರಶ್ನೆ: ಕಳೆದು ಹೋದ ರೇಷನ್ ಕಾರ್ಡ್ ಸಂಖ್ಯೆಯನ್ನು ಹುಡುಕುವುದು ಹೇಗೆ?

ಮೇರಾ ರೇಷನ್ ಆಪ್, ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಅಥವಾ ಡಿಜಿಲಾಕರ್ ಆಪ್ ಮೂಲಕ ರೇಷನ್ ಕಾರ್ಡ್ ನಂಬರ್ ಪಡೆಯಬಹುದು.

ಪ್ರಶ್ನೆ: ಕಳೆದು ಹೋದ ರೇಷನ್ ಕಾರ್ಡ್ ಸಂಖ್ಯೆ ಪಡೆಯಬೇಕೆಂದರೆ ಯಾವ ಕೆಲಸ ಮಾಡಿರಲೇಬೇಕು?

ರೇಷನ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಮಾತ್ರ ಕಳೆದು ಹೋದ ರೇಷನ್ ಕಾರ್ಡ್ ಸಂಖ್ಯೆ ಪಡೆಯಲು ಸಾಧ್ಯ.

Published On - 2:12 pm, Thu, 9 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us