ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ 2024 ರ ಪಟ್ಟಿಯಲ್ಲಿ 100 ಮಂದಿ ಅತ್ಯಂತ ಪ್ರಬಲ ಮಹಿಳೆಯರನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ನಾಲ್ವರು ಭಾರತೀಯ ಮಹಿಳೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶ್ವದಲ್ಲೇ 28 ನೇ ಸ್ಥಾನದಲ್ಲಿದ್ದು, ಭಾರತದ ಅತ್ಯಂತ ಪ್ರಬಲ ಮಹಿಳೆಯರ ಸ್ಥಾನದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದಲ್ಲದೇ ಎಚ್‌ಸಿಎಲ್ ಕಾರ್ಪೊರೇಷನ್ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರು ಈ ಪಟ್ಟಿಯಲ್ಲಿ ಇರುವ ಇತರ ಭಾರತೀಯ ಮಹಿಳೆಯರು.
ಈ ಪಟ್ಟಿಯಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 28 ನೇ ಸ್ಥಾನದಲ್ಲಿದ್ದಾರೆ. 2023ರ ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು 32ನೇ ಶ್ರೇಯಾಂಕ ಪಡೆದಿದ್ದರು. 2017ರಿಂದ 2019ರ ವರೆಗೆ 28ನೇ ರಕ್ಷಣಾ ಸಚಿವೆಯಾದರು. ಜೂನ್ 2024 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಅವರನ್ನು ಮರುನೇಮಕ ಮಾಡಲಾಯಿತು. ಭಾರತದ ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಿರ್ವಹಿಸುವ ಕಾರ್ಯವನ್ನು ಇವರಿಗೆ ವಹಿಸಲಾಗಿದೆ.
ಫೋರ್ಬ್ಸ್ ಮೋಸ್ಟ್ ಪವರ್ಫುಲ್ ವುಮೆನ್ 2024 ರ ಪಟ್ಟಿಯಲ್ಲಿರುವ ಎರಡನೇ ಭಾರತೀಯ ಮಹಿಳೆ ಎಚ್‌ಸಿಎಲ್ ಕಾರ್ಪೊರೇಷನ್ನ ಸಿಇಒ ರೋಷನಿ ನಾದರ್ ಮಲ್ಹೋತ್ರಾ. ರೋಶ್ನಿ ನಾಡರ್ ಮಲ್ಹೋತ್ರಾ ಅವರು ಎಚ್‌ಸಿಎಲ್ ಸಂಸ್ಥಾಪಕ ಮತ್ತು ಕೈಗಾರಿಕೋದ್ಯಮಿ ಶಿವ ನಾಡರ್ ಅವರ ಪುತ್ರಿ. 1976 ರಲ್ಲಿ ತನ್ನ ತಂದೆ ಶಿವ ನಾಡಾರ್ ಸ್ಥಾಪಿಸಿದ $12 ಬಿಲಿಯನ್ ಉದ್ಯಮದ ಕಾರ್ಯತಂತ್ರದ ನಿರ್ಧಾರಗಳನ್ನು ಅವರು ನೋಡಿಕೊಳ್ಳುತ್ತಾರೆ. ಅವರ ಸಾಂಸ್ಥಿಕ ಸಾಧನೆಗಳ ಹೊರತಾಗಿ, ಮಲ್ಹೋತ್ರಾ ಅವರು ಶಿವ ನಾಡಾರ್ ಫೌಂಡೇಶನ್‌ನ ಟ್ರಸ್ಟಿಯಾಗಿದ್ದಾರೆ.
ಇದನ್ನೂ ಓದಿ: ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯುಆರ್ ಕೋಡ್ ಮಹತ್ವವೇನು? ಆನ್ಲೈನಲ್ಲಿ 50 ರೂ ಶುಲ್ಕದೊಂದಿಗೆ ಕಾರ್ಡ್ ಪಡೆಯುವ ಕ್ರಮ
ಫೋರ್ಬ್ಸ್‌ನ ಪವರ್ ವುಮೆನ್ ಪಟ್ಟಿಯಲ್ಲಿ 82 ನೇ ಸ್ಥಾನ ಮತ್ತು 2024 ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 91 ನೇ ಸ್ಥಾನವನ್ನು ಪಡೆದಿರುವ ಕಿರಣ್ ಮಜುಂದಾರ್-ಶಾ ಅವರು ಜೈವಿಕ ತಂತ್ರಜ್ಞಾನದಲ್ಲಿ ಟ್ರಯಲ್‌ಬ್ಲೇಜರ್ ಆಗಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ಕಿರಣ್ ಮಜುಂದಾರ್ ಶಾ ಭಾರತದ ಸೆಲ್ಫ್ ಮೇಡ್ ಮಹಿಳಾ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ಬಣ್ಣಿಸಿದೆ. 1978ರಲ್ಲಿ ಅವರು ಬಯೋಫಾರ್ಮಾಸ್ಯುಟಿಕಲ್ ಸಂಸ್ಥೆ ಬಯೋಕಾನ್ ಸ್ಥಾಪಿಸಿದರು. ಈ ಕಂಪನಿಯು ಇದು ಮಲೇಷ್ಯಾದ ಜೋಹೋರ್ ಪ್ರದೇಶದಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ