World’s Richest Man 2022: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ; ಎಲಾನ್ ಮಸ್ಕ್​ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

| Updated By: Ganapathi Sharma

Updated on: Dec 14, 2022 | 10:24 AM

2021ರ ಸೆಪ್ಟೆಂಬರ್​​ನಿಂದೀಚೆಗೆ ಮಸ್ಕ್ ಅವರು ಫೋರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು.

Worlds Richest Man 2022: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ; ಎಲಾನ್ ಮಸ್ಕ್​ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಎಲಾನ್ ಮಸ್ಕ್ ಮತ್ತು ಟ್ವಿಟರ್ ಲೋಗೊ
Follow us on

ವಾಷಿಂಗ್ಟನ್: ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ (Twitter) ಅನ್ನು ಖರೀದಿಸಿ ಇತ್ತೀಚೆಗೆ ವಿಶ್ವದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಉದ್ಯಮಿ, ಟೆಸ್ಲಾ ಮಾಲೀಕ (Tesla) ಎಲಾನ್ ಮಸ್ಕ್ (Elon Musk) ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟವನ್ನೂ ಕಳೆದುಕೊಂಡಿದ್ದಾರೆ. ಮಸ್ಕ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡಿದ್ದಾರೆ ಎಂದು ಫೋರ್ಬ್ಸ್ (Forbes) ತಿಳಿಸಿದೆ. 185.4 ಶತಕೋಟಿ ಡಾಲರ್ ವೈಯಕ್ತಿಕ ಸಂಪತ್ತು ಹೊಂದುವ ಮೂಲಕ ಎಲ್​ವಿಎಂಎಚ್​ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ (Bernard Arnault) ಹಾಗೂ ಅವರ ಕುಟುಂಬ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಹೊಂದಿದೆ.

2021ರ ಸೆಪ್ಟೆಂಬರ್​​ನಿಂದೀಚೆಗೆ ಮಸ್ಕ್ ಅವರು ಫೋರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು. ಅವರ ವೈಯಕ್ತಿಕ ಸಂಪತ್ತಿನ ಮೌಲ್ಯ 185.3 ಶತಕೋಟಿ ಡಾಲರ್ ಆಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಮಸ್ಕ್ ಕೈತಪ್ಪಿದ  ಬೆನ್ನಲ್ಲೇ ಟೆಸ್ಲಾ ಷೇರು ಮೌಲ್ಯದಲ್ಲಿ ಶೇಕಡಾ 4ರಷ್ಟು ಕುಸಿತವಾಗಿದೆ.

ಇದನ್ನೂ ಓದಿ: Twitter Followers ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು: ಎಲಾನ್ ಮಸ್ಕ್ ಎಚ್ಚರಿಕೆ

ಮಸ್ಕ್ ಇತ್ತೀಚೆಗೆ 44 ಶತಕೋಟಿ ಡಾಲರ್​ಗೆ ಟ್ವಿಟರ್ ಅನ್ನು ಖರೀದಿಸಿದ್ದರು. ಮೈಕ್ರೋ ಬ್ಲಾಗಿಂಗ್ ತಾಣವನ್ನು ಖರೀದಿ ಮಾಡಿದ ಮರುಕ್ಷಣವೇ ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಪ್ರಮುಖರನ್ನು ಕಂಪನಿಯಿಂದ ವಜಾಗೊಳಿಸಿದ್ದರು. ಬಳಿಕ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಶೇಕಡಾ 75ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ, ವಜಾ ಪ್ರಕ್ರಿಯೆ ಮುಗಿದಿದೆ. ಇನ್ನು ನೇಮಕಾತಿ ಆರಂಭಿಸಲಾಗುವುದು ಎಂದು ಮಸ್ಕ್ ಹೇಳಿದ್ದರು. ಆದರೆ ಮತ್ತೆ ಕೆಲವರನ್ನು ವಜಾಗೊಳಿಸಿ ಸುದ್ದಿಯಾಗಿದ್ದರು. ಟ್ವಿಟರ್​ನ ಬ್ಲೂಟಿಕ್​ಗೆ ಶುಲ್ಕ ವಿಧಿಸುವ ನೀತಿ ರೂಪಿಸಿದ್ದರು. ಆದರೆ, ನಕಲಿ ಖಾತೆಗಳ ಹಾವಳಿ ತಡೆಯುವಲ್ಲಿ ವಿಫಲವಾದ ಕಾರಣ ಅದನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು. ಟ್ವಿಟರ್​ನ ಅಕ್ಷರ ಮಿತಿಯನ್ನು 280ರಿಂದ 1000ಕ್ಕೆ ಹೆಚ್ಚಿಸುವ ಬಗ್ಗೆಯೂ ಇತ್ತೀಚೆಗೆ ಸುಳಿವು ನೀಡಿದ್ದಾರೆ. ಟ್ವಿಟರ್​​ನಲ್ಲಿ ಸ್ಕ್ಯಾಮ್ ಹಾಗೂ ಸ್ಪ್ಯಾಮ್​ ಖಾತೆಗಳ ಕಡಿವಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದ ಅವರು, ನಿಮ್ಮ ಫಾಲೋರ್ಸ್ ಸಂಖ್ಯೆ ಕುಸಿಯಬಹುದು ಎಂದು ಬಳಕೆದಾರರಿಗೆ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 8 December 22