Forex Reserves: ಮತ್ತೆ 700 ಬಿಲಿಯನ್ ಡಾಲರ್ ಗಡಿದಾಟಿದ ಭಾರತದ ಫಾರೆಕ್ಸ್ ರಿಸರ್ವ್ಸ್

Forex reserves of India: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಅಕ್ಟೋಬರ್ 17ಕ್ಕೆ 702.28 ಬಿಲಿಯನ್ ಡಾಲರ್ ಮೊತ್ತ ತಲುಪಿದೆ. ಅ. 17ಕ್ಕೆ ಅಂತ್ಯಗೊಂಡ ವಾರದಲ್ಲಿ ರಿಸರ್ವ್ಸ್ 4.496 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದ್ದರಿಂದ ಭಾರತಕ್ಕೆ ಮತ್ತೆ ಈ ಮೈಲಿಗಲ್ಲು ಮುಟ್ಟಲು ಸಾಧ್ಯವಾಗಿದೆ. ಫಾರೆಕ್ಸ್ ರಿಸರ್ವ್ಸ್​ನಲ್ಲಿ ಆದ ಹೆಚ್ಚಳದಲ್ಲಿ ಗೋಲ್ಡ್ ರಿಸರ್ವ್ಸ್ ಮೌಲ್ಯ ಏರಿಕೆ ಆಗಿದ್ದೇ ಪ್ರಮುಖ ಕಾರಣ.

Forex Reserves: ಮತ್ತೆ 700 ಬಿಲಿಯನ್ ಡಾಲರ್ ಗಡಿದಾಟಿದ ಭಾರತದ ಫಾರೆಕ್ಸ್ ರಿಸರ್ವ್ಸ್
ಫಾರೆಕ್ಸ್ ರಿಸರ್ವ್ಸ್

Updated on: Oct 24, 2025 | 7:20 PM

ನವದೆಹಲಿ, ಅಕ್ಟೋಬರ್ 24: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಈಗ ಮತ್ತೊಮ್ಮೆ 700 ಬಿಲಿಯನ್ ಡಾಲರ್ ಗಡಿ ದಾಟಿದೆ. ಅಕ್ಟೋಬರ್ 17ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ (Forex Reserves) 4.496 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಇದು ಸತತ ಎರಡನೇ ವಾರ ಆಗಿರುವ ಏರಿಕೆ. ಹಿಂದಿನ ವಾರದಲ್ಲಿ 2.176 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೆಚ್ಚಾಗಿದೆ. ಇದರೊಂದಿಗೆ ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ 702.28 ಬಿಲಿಯನ್ ಡಾಲರ್ ತಲುಪಿದೆ. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪದಲ್ಲಿದೆ.

ಅಕ್ಟೋಬರ್ 17ರ ವಾರದಲ್ಲಿ ಆರ್​ಬಿಐನ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಆದ ಹೆಚ್ಚಳದಲ್ಲಿ ಹೆಚ್ಚಿನ ಪಾಲು ಚಿನ್ನವೇ ಆಗಿದೆ. ರಿಸರ್ವ್ಸ್​ನ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಸ್ವತ್ತುಗಳ ಮೌಲ್ಯದಲ್ಲಿ ಕಡಿಮೆ ಆಗಿದೆ. 1.692 ಬಿಲಿಯನ್ ಡಾಲರ್​ನಷ್ಟು ಮೌಲ್ಯ ಕಡಿಮೆ ಆಗಿದೆ. ಯೂರೋ, ಪೌಂಡ್, ಯೆನ್ ಇತ್ಯಾದಿ ಕರೆನ್ಸಿಗಳ ಮೌಲ್ಯದಲ್ಲಿ ಕಡಿಮೆಗೊಂಡಿರುವುದು ಈ ಫಾರೀನ್ ಕರೆನ್ಸಿ ಸ್ವತ್ತಿನ ಮೌಲ್ಯ ತಗ್ಗಲು ಪ್ರಮುಖ ಕಾರಣ.

ಇದನ್ನೂ ಓದಿ: ಒತ್ತಡ ಹಾಕಿದರೆ ಭಾರತ ಬಗ್ಗಲ್ಲ: ಪಾಶ್ಚಿಮಾತ್ಯ ದೇಶಗಳಿಗೆ ಸಚಿವ ಪೀಯೂಶ್ ಗೋಯಲ್ ಪ್ರಬಲ ಸಂದೇಶ

ಇನ್ನು, ಈ ವಾರ ಗೋಲ್ಡ್ ರಿಸರ್ವ್ ಬರೋಬ್ಬರಿ 6.181 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಎಸ್​ಡಿಆರ್​ಗಳೂ ಕೂಡ 38 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಆದರೆ, ಐಎಂಎಫ್​ನೊಂದಿಗಿನ ರಿಸರ್ವ್ ಪೊಸಿಶನ್ 30 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಆದರೆ, ಒಟ್ಟಾರೆ ಚಿನ್ನದ ಬೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಮೌಲ್ಯ ಹೆಚ್ಚಾಗಿದೆ.

ಭಾರತದ ಫಾರೆಕ್ಸ್ ರಿಸರ್ವ್ಸ್ (2025ರ ಅ. 17ಕ್ಕೆ)

ಒಟ್ಟು ರಿಸರ್ವ್ಸ್: 702.28 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿಗಳು: 570.411 ಬಿಲಿಯನ್ ಡಾಲರ್
  • ಚಿನ್ನ: 108.546 ಬಿಲಿಯನ್ ಡಾಲರ್
  • ಎಸ್​ಡಿಆರ್: 18.722 ಬಿಲಿಯನ್ ಡಾಲರ್
  • ಐಎಂಎಫ್ ರಿಸರ್ವ್: 4.602 ಬಿಲಿಯನ್ ಡಾಲರ್.

ಇದನ್ನೂ ಓದಿ: ಕಳೆದ ಬಾರಿ ವಿಳಂಬವಾಗಿದ್ದ ಪಿಎಂ ಕಿಸಾನ್ ಹಣ ಈ ಬಾರಿ ಬೇಗ ಸಿಗುವ ನಿರೀಕ್ಷೆ; ಇಲ್ಲಿದೆ 21ನೇ ಕಂತಿನ ಬಿಡುಗಡೆ ದಿನಾಂಕ

ಬೇರೆ ದೇಶಗಳಲ್ಲಿ ಎಷ್ಟಿದೆ ಫಾರೆಕ್ಸ್ ರಿಸರ್ವ್ಸ್?

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಇತ್ತೀಚಿನವರೆಗೂ ನಾಲ್ಕನೇ ಸ್ಥಾನದಲ್ಲಿತ್ತು. ರಷ್ಯಾ ಗಣನೀಯವಾಗಿ ತನ್ನ ಮೀಸಲು ನಿಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. ಚೀನಾ 3.6 ಟ್ರಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ಹೊಂದಿರುವ ಫಾರೆಕ್ಸ್ ರಿಸರ್ವ್ಸ್ 1 ಟ್ರಿಲಿಯನ್ ಡಾಲರ್​ಗೂ ಅಧಿಕ. ರಷ್ಯಾ ಬಳಿ 713 ಬಿಲಿಯನ್ ಡಾಲರ್ ರಿಸರ್ವ್ಸ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ