AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ. 1ರಿಂದ ಹೊಸ ನಾಮಿನಿ ನಿಯಮ; ಬ್ಯಾಂಕ್ ಖಾತೆ ಮತ್ತು ಲಾಕರ್​ಗಳಿಗೆ ನಿಯಮ ತುಸು ಭಿನ್ನ

Bank accounts and lockers nominee rules: ನವೆಂಬರ್ 1ರಿಂದ ಬ್ಯಾಂಕ್​ನ ನಾಮಿನಿ ನಿಯಮಗಳಲ್ಲಿ ಕೆಲ ಬದಲಾವಣೆಗಳು ಆಗುತ್ತಿವೆ. ಬ್ಯಾಂಕ್ ಖಾತೆಗಳು ಹಾಗೂ ಲಾಕರ್​ಗಳಿಗೆ ನಾಲ್ವರು ನಾಮಿನಿಗಳನ್ನು ಹೆಸರಿಸುವ ಅವಕಾಶ ಕೊಡಲಾಗುತ್ತಿದೆ. ಬ್ಯಾಂಕ್ ಖಾತೆಗಳಿಗೆ ಸರದಿ ಪ್ರಕಾರ ನಾಮಿನಿ ಹೆಸರು ನೀಡಬಹುದು, ಅಥವಾ ಒಟ್ಟಿಗೆ ನಾಮಿನಿ ಹೆಸರು ಹಾಕಬಹುದು. ಲಾಕರ್ ಬಳಕೆದಾರರು ಸರದಿ ಪ್ರಕಾರ ನಾಮಿನಿಗಳನ್ನು ಹೆಸರಿಸುವ ಅವಕಾಶ ಹೊಂದಿರುತ್ತಾರೆ.

ನ. 1ರಿಂದ ಹೊಸ ನಾಮಿನಿ ನಿಯಮ; ಬ್ಯಾಂಕ್ ಖಾತೆ ಮತ್ತು ಲಾಕರ್​ಗಳಿಗೆ ನಿಯಮ ತುಸು ಭಿನ್ನ
ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2025 | 5:08 PM

Share

ನವದೆಹಲಿ, ಅಕ್ಟೋಬರ್ 24: ಬ್ಯಾಂಕ್ ಖಾತೆದಾರರು (Bank account holders) ಮತ್ತು ಬ್ಯಾಂಕ್ ಲಾಕರ್ ಬಳಕೆದಾರರಿಗೆ (bank locker users) ಅನುಕೂಲವಾಗುವ ರೀತಿಯಲ್ಲಿ ನಿಯಮ ಬದಲಾವಣೆ ಮಾಡಲಾಗುತ್ತಿದೆ. ಸದ್ಯ ಬ್ಯಾಂಕ್ ಖಾತೆಗಳಿಗೆ ಒಬ್ಬರನ್ನೇ ಮಾತ್ರ ನಾಮಿನಿ ಮಾಡುವ ಅವಕಾಶ ಇದೆ. ಇದನ್ನು ನಾಲ್ಕು ಮಂದಿಗೆ ವಿಸ್ತರಿಸಲಾಗಿದೆ. ನವೆಂಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಂದರೆ, ಅಕೌಂಟ್ ಹೋಲ್ಡರ್​ಗಳು ತಮ್ಮ ಖಾತೆಗೆ ನಾಲ್ವರು ನಾಮಿನಿಗಳನ್ನು ಹೆಸರಿಸುವ ಅವಕಾಶ ಹೊಂದಿರಲಿದ್ದಾರೆ.

ಮ್ಯೂಚುವಲ್ ಫಂಡ್, ಇನ್ಷೂರೆನ್ಸ್ ಮೊದಲಾದ ಕಡೆ ಬಹು ನಾಮಿನಿಗಳನ್ನು ಹೆಸರಿಸುವ ಅವಕಾಶ ಇದೆ. ಅದೇ ರೀತಿಯಲ್ಲಿ ಬ್ಯಾಂಕ್​ನಲ್ಲೂ ನಾಮಿನಿ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಬ್ಯಾಂಕ್ ಕಾನೂನು ತಿದ್ದುಪಡಿ ಕಾಯ್ದೆಯ ಕೆಲ ನಿಯಮಗಳನ್ನು ಅನುಷ್ಠಾನಕ್ಕೆ ತರಹೊರಟಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಹೂಡಿಕೆ; ಲಕ್ಷ ರೂಗೆ 44,800 ರೂ ಲಾಭ

ನಾಲ್ವರು ನಾಮಿನಿಗಳನ್ನು ಹೆಸರಿಸುವ ಕ್ರಮ

ಬ್ಯಾಂಕ್ ಖಾತೆದಾರರು ನಾಲ್ವರು ನಾಮಿನಿಗಳನ್ನು ಹೆಸರಿಸಬಹುದು. ಸರದಿ ಪ್ರಕಾರ ಅಥವಾ ಒಟ್ಟಿಗೆ ನಾಮಿನಿ ಹೆಸರಿಸುವ ಅವಕಾಶ ಇರುತ್ತದೆ. ಸರದಿ ಪ್ರಕಾರ ಎಂದರೆ, ಮೊದಲ ನಾಮಿನಿಯು ಖಾತೆಗೆ ಏಕೈಕ ವಾರಸುದಾರರಾಗಿರುತ್ತಾರೆ. ಮೊದಲ ನಾಮಿನಿ ನಿಧನ ಹೊಂದಿದ್ದರೆ ಎರಡನೇ ನಾಮಿನಿಗೆ ಸ್ವತ್ತಿಗೆ ಹಕ್ಕು ಬರುತ್ತದೆ. ಈ ಇಬ್ಬರೂ ನಾಮಿನಿಗಳು ಮೃತಪಟ್ಟರೆ ಮೂರನೇ ನಾಮಿನಿಗೆ ಹಕ್ಕು ಸಿಗುತ್ತದೆ. ಆ ಬಳಿಕ ನಾಲ್ಕನೇ ನಾಮಿನಿಯದ್ದು.

ನಾಮಿನಿಗಳನ್ನು ಒಟ್ಟಿಗೆ ಸೇರಿಸುವ ಕ್ರಮದಲ್ಲಿ, ಎಲ್ಲಾ ನಾಮಿನಿಗಳಿಗೆ ನಿರ್ದಿಷ್ಟವಾಗಿ ಸ್ವತ್ತು ಹಂಚಿಕೆ ಮಾಡಲಾಗುತ್ತದೆ.

ಬ್ಯಾಂಕ್ ಲಾಕರ್​ಗಳಲ್ಲಿ ಒಟ್ಟಿಗೆ ನಾಮಿನಿ ಹೆಸರಿಸಲು ಆಗುವುದಿಲ್ಲ. ಇಲ್ಲಿ ಸರದಿ ಪ್ರಕಾರ ನಾಮಿನಿಗಳ ಪಟ್ಟಿ ಮಾಡಬೇಕು.

ಇದನ್ನೂ ಓದಿ: ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್​ಗಳನ್ನು ಮಾಡುವಾಗ ಹುಷಾರ್

ಹೊಸ ನಿಯಮದಿಂದ ಖಾತೆದಾರರಿಗೆ ಅನುಕೂಲವೇನು?

ಬ್ಯಾಂಕ್ ಖಾತೆದಾರರು ಹೊಸ ನಿಯಮದ ಪ್ರಕಾರ ನಾಲ್ವರು ನಾಮಿನಿಗಳನ್ನು ಹೆಸರಿಸಬೇಕೆಂಬುದು ಕಡ್ಢಾಯವಲ್ಲ. ಬೇಕೆಂದರೆ ಒಬ್ಬರೇ ನಾಮಿನಿ ಹೆಸರಿಸಬಹುದು. ಗರಿಷ್ಠ ನಾಲ್ಕು ನಾಮಿನಿಗಳವರೆಗೆ ಹೆಸರಿಸಲು ಅವಕಾಶ ಇರುತ್ತದೆ.

ನೀವು ನಾಮಿನಿಗಳನ್ನು ಹೆಸರಿಸಿದರೆ ಸ್ವತ್ತಿನಲ್ಲಿ ಯಾರಿಗೆಷ್ಟು ಪಾಲು ಹೋಗಬೇಕು ಎಂದು ಹೆಸರಿಸಬೇಕಾಗುತ್ತದೆ. ಎಲ್ಲರಿಗೂ ಸಮವಾಗಿ ಹಂಚಬಹುದು. ಅಥವಾ ಒಬ್ಬರಿಗೆ ಹೆಚ್ಚು, ಮತ್ತೊಬ್ಬರಿಗೆ ಕಡಿಮೆ ಹೀಗೆ ಖಾತೆದಾರರ ಇಚ್ಛೆಗೆ ತಕ್ಕಂತೆ ನಿರ್ದಿಷ್ಟಪಡಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ